SUDDILIVE || SHIVAMOGGA
ಬಿಜೆಪಿಗರೆ ಹುಚ್ಚರು-ಆರ್.ಪ್ರಸನ್ನ ಕುಮಾರ್ ತಿರುಗೇಟು-BJP is crazy - R. Prasanna Kumar hits back
ಬಿಜೆಪಿಯವರೆ ಹುಚ್ಚಾಗಿದ್ದು ಅವರಿಗೆ ಇತರರೆಲ್ಲಾ ಹುಚ್ಚರಾಗಿ ಕಾಣುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನ ಶಾಸಕ ಚೆನ್ನಬಸಪ್ಪ ಹುಚ್ಚರ ಸಂತೆ ಎಂದಿದ್ದಕ್ಕೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೇಳಿಕೆಯನ್ನ ಕಾಂಗ್ರೆಸ್ ಖಂಡಿಸಿದೆ ಎಂದರು.
ಸಙತೋಷ್ ಲಾಡ್ ಶಿವಮೊಗ್ಗಕ್ಕೆ ಬಂದಾಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಹಾಡಿ ಹೊಗಳಿದ್ದಾರೆ. ಆದರೆ ಸಂತೋಷ್ ಲಾಡ್ ವಾಪಾಸ್ ಹೋದಾಗ ಅವರ ವಿರುದ್ಧ ಮಾತನಾಡುತ್ತಾರೆ. ಕಾರ್ಯಕ್ರಮದಲ್ಲಿ ಸಂತೋಷ್ ಲಾಡ್ ಜಿಡಿಪಿ ಮತ್ತು ಡಿಮಾನಿಟೇಷನ್ ಬಗ್ಗೆ ಮಾತನಾಡಿದ್ದಕ್ಕೆ ಸಂತೋಷ್ ಲಾಡ್ ವಿಲನ್ ಆಗ್ಬಿಟ್ರು ಎಂದು ತಿರುಗೇಟು ನೀಡಿದರು.
ಕಾಲೇಜಿನ ಎಸ್ ಡಿಎಂಸಿ ಅಧ್ಯಕ್ಷರಾಗಿದ್ದಾಗ ಏನೂ ಮಾತನಾಡಿಲ್ಲದ ಶಾಸಜರ ಕೊಡುಗೆ ಏನು? ಶಿವಮೊಗ್ಗದಲ್ಲಿ ಮಾಡುವ ಕೆಲಸ ಬಹಳಷ್ಟು ಇದೆ. ಅದನ್ನ. ಮರೆತು ಮೋದಿ ಬಗ್ಗೆ ಮಾತನಾಡಿದ್ದಕ್ಕೆ ಸಚಿವರ ವಿರುದ್ಧ ಹೇಳಿಕೆ ನೀಡಿದ್ದಾರೆ. ಕಾರ್ಮಿಕರ ಬಗ್ಗೆ ಸಚಿವರಿ್ಎ ಅಪಾರವಾದ ಗೌರವವಿದೆ. ಮೋದಿ ಏನು ಪ್ರಶ್ನಾತೀತ ನಾಯಕರಾ ಎಂದು ಕುಟುಕಿದರು.
ಸಚಿವ ಮಧು ಬಂಗಾರಪ್ಪನವರು ಶಿಕ್ಷಣದಲ್ಲಿ ಕ್ರಾಂತಿ ಮಾಡಿದ್ದಾರೆ. ಸಚಿವರನ್ನ ಟೀಕಿಸು ಭರದಲ್ಲಿ ಅವರ ವೈಯುಕ್ತಿಕವಾಗಿ ವಾಗ್ದಾಳಿ ನಡೆಸುತ್ತಾರೆ. 3 ಬಾರಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗಿದೆ. ವಿದ್ಯಾರ್ಥಿಗೆ ಪೋಷಕರು ನೆಮ್ಮದಿಯಾಗಿರಲು 25 ಅಂಶ ಜಾರಿ ಮಾಡಿದ್ದಾರೆ.
ಪಾರ್ಲಿಮೆಂಟ್ ನಲ್ಲಿ ಬಿಜೆಪಿ ಸದಸ್ಯರು ಮಾತನಾಡಿದ ಚೀನಾ ಆಕ್ರಮಣದ ಬಗ್ಗೆ ಮಾತನಾಡಿದ್ದಾರೆ. ಸುಪ್ರೀಂ ನ್ಯಾಯಾಧೀಶರು ಮಹಾರಾಷ್ಟ್ರದ ಸಿಎಂ ಜೊತೆ ಇರುವ ಫೋಟೊ ವೈರಲ್ ಆಗ್ತಾಯಿದೆ. ರಾಹುಲ್ ಯಾವತ್ತೂ ಪ್ರಧಾನಿಯಾಗುವುದನ್ನ ಘೋಷಿಸಿಲ್ಲ. ಜನರಿಗೆ ಮುಟ್ಟುವ ರೀತಿಯಲ್ಲಿ ರಾಹುಲ್ ಮಾತನಾಡುತ್ತಿರುವುದರಿಂದ ಬಿಜೆಪಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ದೂರಿದರು.
ರಾಹುಲ್ ಗಾಂಧಿ ನಾಳೆ ಮತಗಳ್ಳತನದ ವಿರುದ್ಧ ಪ್ರತಿಭಟನೆಯಿದೆ. ಎಲ್ಲಾ ದಾಖಲೆಗಳನ್ನ ಹಿಡಿದುಕೊಂಡು ಬಂದು ಮಾತನಾಡಲಿದ್ದಾರೆ. ದೇಶದ ಯಾವುದೇ ವಿಷಯವನ್ನ ಗಟ್ಟಿಯಾಗಿ ಮಾತನಾಡುತ್ತಿರುವ ನಾಯಕರಾಗಿದ್ದಾರೆ. ಅವರು ಏನು ಪ್ರತಿಕ್ರಿಯಿಸುತ್ತಿದ್ದಾರೆ ಅದಕ್ಕೆ ಬದ್ಧವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಕುಮಾರ್, ಹಿಂದುಳಿದ ವರ್ಗಗಳ ಒಕ್ಕೂಟದ ಜಿಡಿ ಮಂಜುನಾಥ್, ಮಧುಸೂಧನ್, ಗ್ಯಾರೆಂಟಿಗಳ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್ ಮೊದಲಾದವರು ಉಪಸ್ಥಿತರಿದ್ದರು.
BJP is crazy