SUDDILIVE || SHIVAMOGGA
ಸಚಿವ ರಾಜಣ್ಣನವರ ವಜಾದ ಹಿಂದೆ ಷಡ್ಯಂತ್ರ-ವಾಲ್ಮೀಕಿ ಯುವಪಡೆ ಎಚ್ಚರಿಕೆ-Conspiracy behind Minister Rajanna's dismissal - Valmiki Youth Wing warns
ಸಹಕಾರಿ ಸಚಿವ ರಾಜಣ್ಣ ಅವರ ರಾಜನೇ ವಜಗೊಂಡಿರುವ ಬೆನ್ನಲ್ಲೇ ಶಿವಮೊಗ್ಗ ಜಿಲ್ಲಾ ವಾಲ್ಮೀಕಿ ಯುವಪಡೆ ತೀವ್ರಾಕ್ಷೇಪ ವ್ಯಕ್ತಪಡಿಸಿದೆ ರಾಜಣ್ಣ ಅವರ ವಜಾವನ್ನು ಷಡ್ಯಂತರಕ್ಕೆ ಹೋಲಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದೆ.
ದಲಿತರ ರಕ್ಷಕ ಎಂದು ಹೇಳಿಕೊಂಡು ಅಹಿಂದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಸಿದ್ದರಾಮಯ್ಯನವರು ವಾಲ್ಮೀಕಿ ಜನಾಂಗದ ಸಚಿವರನ್ನು ಉಳಿಸಿಕೊಳ್ಳುವಲ್ಲಿ ಯಾವುದೇ ಪ್ರಯತ್ನ ಇಲ್ಲದಿರುವುದು ಕಂಡುಬರುತ್ತದೆ.
ಈ ಇಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಸತೀಶ್ ಜಾರಕವಳಿ ಅವರನ್ನು ಯಾವುದು ನೆಪ ಮಾಡಿಕೊಂಡು ತಲೆದಂಡ ಮಾಡಲಾಗಿತ್ತು. ನಂತರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಚುನಾವಣೆಗೆ ಬಳಸಿ ನಾಗೇಂದ್ರ ಅವರ ತಲೆದಂಡ ಮಾಡಲಾಯಿತು. ಇದೀಗ ಸಹಕಾರಿ ಸಚಿವ ರಾಜಣ್ಣನವರ ತಲೆದಂಡ ಮಾಡಲಾಗಿದೆ ಇದರ ಹಿಂದೆ ಷಡ್ಯಂತ್ರಗಳು ಕಂಡು ಬರುತ್ತಿದ್ದು ಸಿದ್ಧರಾಮಯ್ಯನವರು ಇವರನ್ನು ಉಳಿಸಿಕೊಳ್ಳುವಲ್ಲಿ ಯಾವುದೇ ಶ್ರಮವಿಲ್ಲದಿರುವುದು ಕಂಡುಬರುತ್ತದೆ.
ಈ ಕುರಿತು ಕರ್ನಾಟಕ ರಾಜ್ಯ ವಾಲ್ಮೀಕಿ ಯುವಪಡೆ ಪ್ರತಿಭಟನೆ ನಡೆಸಲಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಅರ್ ಹರೀಶ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
Conspiracy behind Minister Rajanna's dismissal