ad

ದಸರಾ ಪೂರ್ವಭಾವಿ ಸಭೆ- Dussehra Pre-Meeting

SUDDILIVE || SHIVAMOGGA

ದಸರಾ ಪೂರ್ವಭಾವಿ ಸಭೆ-Dussehra Pre-Meeting

Dussera, Meeting


ದಸರಾ ಹಬ್ಬದ ಪೂರ್ವಭಾವಿ ಸಭೆಯನ್ನ ಶಿವಮೊಗ್ಗದ ಮಹಾನಗರ ಪರಿಷತ್ ಸಭಾಂಗಣದಲ್ಲಿ ನಡೆದಿದೆ. ಶಾಸಕ ಚೆನ್ನಬಸಪ್ಪ ಮತ್ತು ಆಯುಕ್ತ ಮಾಯಣ್ಣ ಗೌಡರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆದಿದೆ.  

ಆರಂಭದಲ್ಲಿ ಮಾತನಾಡಿದ ಆಯುಕ್ತ ಮಾಯಣ್ಣ ಗೌಡ ವೈಭವದ ದಸರಾವನ್ನ 10 ದಿನ ಆಚರಿಸಲಾಗುತ್ತಿದೆ. ಸಭೆ ಆರಂಭ ತಡವಾಗಿದೆ. ಶಾಸಕರು ಸೂಚನೆ ನೀಡಿದ್ದರೂ ಸಭೆಯನ್ನ ತಡವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಸ್ವಾತಂತ್ರ್ಯೋತ್ಸವ, ನಂತರ ಗಣಪತಿ ಉತ್ಸವ ಬರಲಿದೆ ಮೊಬೈಲ್ ಟ್ಯಾಂಕರ್ ನಿರ್ಮಾಣ, ರಿಫ್ಲೆಕ್ಟರ್, ಮೆರವಣಿಗೆ ಸಮಯದಲ್ಲಿ ಸೂಕ್ತ ಸಿದ್ದತೆ, ಅ.2 ರಂದು ವಿಜಯದಶಮಿ ಸಿದ್ದತೆ ನಡೆಯಲಿದೆ. ಪೌರಕಾರ್ಮಿಕ ದಿನಾ ಬರಲಿದ್ದು ಇವುಗಳ ನಡುವೆ ದಸರಾ ಉತ್ಸವಕ್ಕೆ ಸಮಯ ಅಲ್ಪವಿದ್ದರೂ ಸೂಕ್ತ ತಯಾರಿ ಮಡಲಾಗುವುದು. ದಸರಾದ ತಾತ್ಕಾಲಿಕ ಕಮಿಟಿಗಳನ್ನೂ ರಚಿಸಲಾಗಿದೆ ಎಂದು ತಿಳಿಸಿದರು. 

ಶಾಸಕ ಚೆಬ್ನಬಸಪ್ಪ ಮಾತನಾಡಿ, ಸಾಂಸ್ಕೃತಿಕ ಹಬ್ಬ ದಸರಾವನ್ನ ವಿಜೃಂಭಣೆಗೆ ಕೊರತೆಯಾಗದಂತೆ ಸಂಭ್ರಮದ ಹಬ್ಬ ಆಚರಿಸೋಣ. 14 ತಂಡಗಳನ್ನ ರಚಿಸಿ ಈ ಹಿಂದೆ ನಡೆಸಲಾಗಿತ್ತು. ವಿಜಯದಶಮಿಯನ್ನ ವಿಜೃಂಭಣೆಯಿಂದ ಮಾಡಿದ ಅನುಭವ ಅಧಿಕಾರಿಗಳಿಗೆ ಇದೆ. ನಾಗರೀಕರ ಸಲಹೆ ಪಡೆದು ನಡೆಸೋಣ, ಇದು ಆರಂಭಿಕ ಸಭೆ ಇನ್ನೂ ನಾಲ್ಕೈದು ಸಭೆ ನಡೆಸಬಹುದಾಗಿದೆ ಎಂದರು. 

ಸ್ವಾಗತ ಸಮಿತಿ ಅಂಬಾರಿ ಮೆರವಣಿಗೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಅರಣ್ಯ ಸಚಿವರೊಙದಿಗೆ ಮಾತಬಾಡುವ ಅವಶ್ಯಕತೆ ಬಿದ್ದರೆ ಮಾತನಾಡಲಿದ್ದೇಬೆ. ರಾಜ್ಯ ಸರ್ಕಾರ ದಸರಾಹಬ್ಬಕ್ಕೆ ನೀಡಲಿದೆ. ಪಾಲಿಕೆ ನತ್ತು ರಾಜ್ಯಸರ್ಕಾರದ ಹಣದಿಂದ ನಡೆಸಬಹುದಾಗಿದೆ ಒಮ್ಮೆ ರಂಗಾಯಣ ಸಹಾಯ ಮಾಡಿದೆ. ಸ್ಮಾರ್ಟ್ ಸಿಟಿ ಸಹಾಯ ಮಾಡಿದೆ. ಹಣದ ಕೊರತೆಯಾಗದಂತೆ ನೋಡಿಕೊಳ್ಳೋಣ ಎಂದರು. 

ಹಣದ ಕೊರತೆಯಿಂದ ವೈಭವತೆಗೆ ಕೊರತೆಯಾಗಬಾರದು. ಸಿಎಒ ಢಕಣ ನಾಯ್ಕನವರು ಮಾತನಾಡಿ ಹಣಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಬೆಂಗಳೂರಿಗೆ ಹೋದ ಫೈಲ್ ನಂಬರ್ ಪಡೆದು ಶಾಸಕರಿಗೆ ನೀಡಿ ಎಂದರು. ಅಕ್ಟೋಬರ್ 15 ರ ಒಳಗೆ ಬಿಲ್ ನೀಡಬೇಕು. ಇದನ್ನ ರೆಸುಲೇಷನ್ ಮಾಡಲಾಗುವುದು ಎಂದರು. 

ಕಳೆದ ಬಾರಿ 2.34 ಕೋಟಿ ಹಣವನ್ನ ದಸರಾಕ್ಕೆ ವ್ಯಯ ಮಾಡಲಾಗಿತ್ತು. ಆನೆ ಕರೆಸುವಂತೆ ಇಂಜಿನಿಯರ್ ಸೆಕ್ಷನ್ ಲಕ್ಷ್ಮೀ ಅವರಿಗೆ ಕೊಡಲಾಗಿದೆ. ಯೋಗ, ಮಕ್ಕಳ ಉತ್ಸವ ದಸರಾ ಸಮಸ್ಯೆಯಾಗಲಿದೆ. ಕಳೆದ ಬಾರಿ ಅನ್ಮನವರಿಗೆ ಕಾಸಿನ ಸರ ಹಾಕಲಾಗಿತ್ತು. ಈ ಬಾರಿ ಏನು ಬೇಕು ಎಂಬುದು ಚರ್ಚಿಸಿ ಎಂದು ಸಲಹೆ ನೀಡಿದರು. 

ಸ್ವಾಗತ ಸಮಿತಿಗೆ ಎಇಇ ಪುಷ್ಪಲತಾ, ಕಲಾ ಮತ್ತು ಕಾರ್ಮಿಕ ದಸರಾ, ಅಮೋಘ ಅವರು ಪರಿಸರ ದಸರಾ ಆಚರಿಸಿದ್ದರು. ಈಗ ಅದನ್ನ ತ್ರಿವೇಣಿಯವರನ್ನ ನೇಮಿಸಲಾಗಿದೆ. ರೈತ, ಆಹಾರ, ದಸರಕ್ಕೆ ಅದೇ ಅಧಿಕಾರಿಗಳು ಮುಙದುವರೆಯಲಿದ್ದಾರೆ. ಫ್ರೀಡಂ ಪಾರ್ಕ್ ನ್ನ‌ಬೇಗ ಬುಕ್ ಮಾಡಬೇಕು. ಆಹಾರಗಳನ್ನ ಮಾರಾಟ ಮಾಡದಂತೆ ನೋಡಿಕೊಳ್ಳಿ ಎಂದು ಶಾಸಕರು ಸೂಚಿಸಿದರು. 

ಉತ್ಸವ ಸಮಿತಿಗೆ ಸಂತೋಷ್ ರಾಥೋಡ್, ಮಹಿಳಾ ಮತ್ತು ಗಮಕ ದಸರಾ ಅನುಪಮಾ ಟಿ.ಆರ್, ಸಾಂಸ್ಕೃತಿಕ ದಸರಾವನ್ನ ಸಿದ್ದಪ್ಪನವರನ್ನ‌ಕಾರ್ಯದರ್ಶಿಯನ್ನಾಗಿ, ಮಕ್ಕಳ ದಸರದ ಜವಬ್ದಾರಿಯನ್ನ ಸತೀಶ್ ಹೆಗಲಿಗೆ, ಯೋಗ ದಸರಕ್ಕೆ ಸುಧಾಕರ ಬಿಜ್ಜೂರ್, ರಂಗ ದಸರಾಕ್ಕೆ ಮಧು ನಾಯ್ಕ್, ಪತ್ರಿಕಾ ಮತ್ತು ಚಲನಚಿತ್ರ ದಸರಾ ಕಾರ್ಯದರ್ಶಿಯಾಗಿ ಎನ್ ಯಶವಂತ್, ಯುವ ದಸರಾವನ್ನ ಹಾಲೇಶಪ್ಪನವರಿಗೆ ಜವಬ್ದಾರಿ ನೀಡಲಾಗಿದೆ. 

Dussehra Pre-Meeting

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close