ad

ಸ್ಪೃಶ್ಯ ಜಾತಿ ತೆಗೆದು ವಿಮುಕ್ತ ಸಮುದಾಯ ಎಂದು ಗುರುತಿಸಿ-ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ- Immadi Siddarameshwara Swamiji

 SUDDILIVE || SHIVAMOGGA

ಸ್ಪೃಶ್ಯ ಜಾತಿ ತೆಗೆದು ವಿಮುಕ್ತ ಸಮುದಾಯ ಎಂದು ಗುರುತಿಸಿ-ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ-Remove the untouchable caste and recognize it as a free community - Immadi Siddarameshwara Swamiji

Immadi, siddarameshwara


ಪರಿಶಿಷ್ಟ ಜಾತಿ ಒಳಮೀಸಲಾತಿಯಲ್ಲಿನ ಸಿ ಗುಂಪಿಗೆ ಆಸಂವಿಧಾನಕ ಪದ 'ಸ್ಪೃಶ್ಯ' ಜಾತಿ ಎಂಬುದನ್ನು ಕಡತದಿಂದ ತಗೆದು "ವಿಮುಕ್ತ ಸಮುದಾಯ" ಗಳೆಂದು ಗುರುತಿಸಲು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ರಾಜ್ಯಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಆಗಸ್ಟ್ ೧೯ ರಂದು ನಡೆದ  ಸಚಿವ ಸಂಪುಟದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಅವರ ಶಿಫಾರಸ್ಸುಗಳನ್ನು ಕೆಲವು ಮಾರ್ಪಾಟುಗಳೊಂದಿಗೆ ರಾಜಕೀಯ ಒತ್ತಡದಲ್ಲಿ ಅಂಗೀಕರಿಸಿದೆ. ಅಂತೆಯೇ ಸಿ ಗುಂಪಿಗೆ 4% ನ್ಯಾಯ ಸಮ್ಮತವಲ್ಲದ ಶೇಖಡವಾರನ್ನು ಸಚಿವ ಶಿವರಾಜತಂಗಡಗಿ ಭೋವಿ ಬಂಜಾರ ಕೊರಮ ಕೊರಚ ಸುದಾಯಗಳ ಧ್ವನಿಯಾಗಿ ಶೇಖಡ 5% ರಷ್ಟು ಮಾಡಿರುವುದು ಅಭಿನಂದನಾರ್ಹ, ಆದರೆ ಈ ಗುಂಪಿಗೆ ಅಲೆಮಾರಿಗಳನ್ನು ಸೇರಿಸಿದಾಗ ಶೇಖಡ 6% ಹೆಚ್ಚಿಸಬೇಕಾದದು ಜವಾಬ್ದಾರಿ ಸ್ಥಾನದಲ್ಲಿದ್ದವರ ಕರ್ತವ್ಯವಾಗಿತ್ತು. ದನಿಯಿಲ್ಲದವರ ದನಿಯಾಗಿ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಕಾರ್ಯ ನಿರ್ವಹಿಸಬೇಕಿತ್ತು ಎಂದು ಶ್ರೀಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ..

ಪರಿಶಿಷ್ಟ ಜಾತಿ ಜನಸಂಖ್ಯಾವಾರು ಶೇಖಡ 18% ಹೆಚ್ಚಿಸಿ ಪರಿಶಿಷ್ಟಜಾತಿಯ ಸಿ ಗುಂಪಿನಲ್ಲಿರುವ ಭೋವಿ ಬಂಜಾರ ಕೋರಮ ಕೊರಚ ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ, ಅವಶ್ಯಕತೆ ಹಾಗೂ ಬೇಡಿಕೆ ಬಂದಲ್ಲಿ ಬರುವ ದಿನಗಳಲ್ಲಿ SC-C ಗುಂಪಿನಲ್ಲಿ ಜನಸಂಖ್ಯಾವಾರು ಪ್ರತ್ಯೇಕ ಗುಂಪು ರಚಿಸಲು ಅವಕಾಶ ಕಲ್ಪಿಸಬೇಕಿದೆ ಎಂದು ಶ್ರೀಗಳು ಒತ್ತಾಯಿಸಿದ್ದಾರೆ.

ನ್ಯಾ.ನಾಗಮೋಹನ ದಾಸ ವರದಿಯಲ್ಲಿ ನೀಡಿರುವ ಸಮೀಕ್ಷೆ ವರದಿ ಪ್ರಕಾರ ಭೋವಿ ಬಂಜಾರ ಕೊರಮ ಕೊರಚಿ ಅಲೆಮಾರಿ ಸಮುದಾಯಗಳೇ ಹೆಚ್ಚಿನ ಮೀಸಲಾತಿ ವಂಚಿತ ಸಮುದಾಯಗಳು ಎಂದು ಗುರುತಿಸಿದೆ. ಈ ಕಾರಣದಿಂದ ಮೀಸಲಾತಿ ಬಂದುಗಳು ರಚಿಸುವಾಗ ಮೊದಲನೇ ಆದ್ಯತೆ ಈ ಗುಂಪಿಗೆ ನೀಡಬೇಕು ಎಂದಿದ್ದಾರೆ.

ಪರಿಶಿಷ್ಟಜಾತಿಗಳಲ್ಲಿನ ಚಲನಶೀಲತೆಯನ್ನು ಹಾಗೂ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿಕೊಂಡು, ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗವನ್ನು ರಚಿಸಲು ಕರ್ನಾಟಕ ಸರ್ಕಾರವು ತೀರ್ಮಾನಿಸಿದ್ದು ಸ್ವಾಗತಿಸುತ್ತೇವೆ.ಇದೇ ಸಂದರ್ಭದಲ್ಲಿ ಒಳಮೀಸಲಾತಿ ಪರ-ವಿರೋಧ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ಕರ್ನಾಟಕ ಸರ್ಕಾರವು ತೀರ್ಮಾನಿಸಿದ್ದು ಸ್ವಾಗತಿಸುತ್ತೇವೆ ಎಂದಿದ್ದಾರೆ.

ಕರ್ನಾಟಕ ಸರ್ಕಾರವು ಈಗ ಕೈಗೊಂಡಿರುವ ತೀರ್ಮಾನದಲ್ಲಿ ಯಾವುದಾದರೂ ಮಾರ್ಪಾಡುಗಳ ಅಗತ್ಯತೆ ಕಂಡುಬಂದರೆ ಅವುಗಳನ್ನು ಮುಂದಿನ ರಾಷ್ಟ್ರೀಯ ಜನಗಣತಿಯಲ್ಲಿನ ৬০৮-ಅಂಶಗಳನ್ನು ಆಧರಿಸಿ ಬದಲಾವಣೆಗೆ ಒಳಪಡಿಸುವ ಷರತ್ತಿಗೆ ಬದ್ಧವಾಗಿದೆ ಎಂಬುದನ್ನು ಸ್ವಾಗತಿಸುವುದಾಗಿ ಶ್ರೀಗಳು ತಿಳಿಸಿದ್ದಾರೆ.

Immadi Siddarameshwara Swamiji

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close