SUDDILIVE || SHIVAMOGGA
ಕೊಳಕ ಭರತನನ್ನ ಕಿಡ್ನ್ಯಾಪ್ ಮಾಡಿ ಹಲ್ಲೆ-Kidnap and assault Kolaka Bharat
ಭದ್ರಾವತಿಯಲ್ಲಿ ಯುವಕನೋರ್ವನನ್ನ ಅಪಹರಿಸಿ ಥಳಿಸಿರುವ ಘಟನೆ ಭದ್ರಾವತಿ ನ್ಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಹರಣಗೊಳಿಸಿದ ಯುವಕನನ್ನ ಭರತ್ ಯಾನೆ ಕೊಳಕ ಭರತ ಎಂದು ಗುರುತಿಸಲಾಗಿದೆ.
ಭದ್ರಾವತಿಯಲ್ಲಿ ವಿಶ್ವ ಯಾನೆ ಮುದ್ದೆ, ಕೋಟೇಶ್ ಟಾಮ ರಾಕೇಶ ಮತ್ತು ಇತರೆ ಇಬ್ಬರು ಸೇರಿ ಐವರು ಭರತನನ್ನ ಐಟಿಐ ಕಾಲೇಜಿನ ಎದುರಿನಲ್ಲಿರುವ ಛಾಯಾ ಹೋಟೆಲ್ ನಲ್ಲಿ ಭರತ ಇದ್ದಾಗ ವಿಶ್ವ ಯಾನೆ ಮುದ್ದೆಯ ಗ್ಯಾಂಗ್ ಬಂದು ಇನ್ನೋವಾ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದೆ.
ಇನ್ನೋವಾ ಕಾರಿನಲ್ಲಿ ಭರನ ಕೊರಳಪಟ್ಟಿ ಹಿಡಿದು ಎತ್ತಾಕಿಕೊಂಡು ಹೋಗಿ ಮಚ್ಚಿನಲ್ಲಿ ವಿಐಎಸ್ಎಲ್ ಸ್ಟೇಡಿಯಂ ಬಳಿ ಬಿಟ್ಟು ಹೋಗಿದ್ದಾರೆ. ಬಿಟ್ಟು ಹೋದಾಗ ಭರತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಭರತ್ ನಾನು ಪ್ರಮೋದ್ ತಾನೆ ಗಾಂಧಿ ಜೊತೆ ಇದ್ದೀನಿ ಎಂದು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆ. ನಾನು ಅವರ ಗ್ಯಾಂಗ್ ಗೆ ಬರಲಿ ಎಂದು ಒತ್ತಾಯಿಸಿದ್ದಾರೆ. ಕಿಡ್ನ್ಯಾಪ್ ಮಾಡುವಾಗ ಚಿನ್ನಾಭರ ಮತ್ತು ಮೊಬೈಲ್ ಬಿದ್ದುಹೋಗಿದೆಯೋ ಕಿತ್ತುಕೊಂಡರೋ ಗೊತ್ತಿಲ್ಲ. ಮಚ್ಚಿನಿಂದ ಹಲ್ಲೆ ನಡೆದಿದ್ದು ಕೈಗೆ ತಲೆಗೆ ಸ್ಟಿಚ್ ಹಾಕಲಾಗಿದೆ. ಪ್ರಕರಣ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗದ ಎಸಿ ನ್ಯಾಯಾಲಯಕ್ಕೆ ಬಂದಿದ್ದ ಭರತ ನಿನ್ನೆ ಸಂಜೆ 7-30 ಮೇಲೆ ಭದ್ರಾವತಿಗೆ ತೆರಳಿದ್ದಾನೆ. ಭದ್ರಾವತಿಗೆ ಹೋದ ನಂತರ ಘಟನೆ ನಡೆದಿದೆ. ವಿಶ್ವ ಯಾನೆ ಮುದ್ದೆ ಕೋಟೇಶ್ ಟಾಮ ರಾಕೇಶ್ ಸೇರಿ ಐವರವವಿರುದ್ಧ ದೂರು ದಾಖಲಾಗಿದೆ.
Kidnap and assault Kolaka Bharat