SUDDILIVE || SAGARA
ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ 29 ವರ್ಷದ ಯುವಕ ಹೃದಯಾಘಾತದಿಂದ ಸಾವು-A 29-year-old youth riding a two-wheeler died of a heart attack
ಸಾಗರ: ದಾವಣಗೆರೆಯಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ತನ್ನ ಸ್ನೇಹಿತನ ಜೊತೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ದಾವಣಗೆರೆಯ 29 ವರ್ಷದ ಯುವಕ ತಾಲೂಕಿನ ಬಲಸಗೋಡು ಗ್ರಾಮದ ಸಮೀಪ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ.
ದಾವಣಗೆರೆಯ ಬಸಾಪುರ ಗ್ರಾಮದ ವಾಸಿ ಕೆಂಪನಹಳ್ಳಿ ರವೀಂದ್ರ ರವರ ಹಿರಿಯ ಪುತ್ರ ಕೆ.ಆಕರ್ಷ್(29) ಮೃತಪಟ್ಟ ಯುವಕ. ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಪ್ರಭಾ ಮಲ್ಲಿಕಾರ್ಜುನ ರವರ ಆಪ್ತ ಸಹಾಯಕ ಹರೀಶ್ ಬಸಾಪುರ ರವರ ಸಹೋದರನ ಪುತ್ರ ಕೆ.ಆಕರ್ಷ್ .
ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಯಾಗಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮೃತದೇಹದ ಮರಣೋತ್ತರ ಪರೀಕ್ಷೆ ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ನಡೆಸಲಾಯಿತು.
A 29-year-old youth riding a two-wheeler died of a heart attack