SUDDILIVE || SHIVAMOGGA
ಮುಸ್ಲೀಂರಿಂದ ಗಣಪತಿಗೆ ಹಾರ ಅನ್ನ ಸಂತರ್ಪಣೆ-Muslims offer God to garlands and distribute prasadam
ಬಹುತೇಕ ಗಣಪತಿ ವಿಸರ್ಜನಾ ಮೆರವಣಿಗೆಯು ಶಿವಮೊಗ್ಗದಲ್ಲಿ ಸೌಹಾರ್ದತೆಯನ್ನ ಮೆರಯುತ್ತಿವೆ. ತುಂಗ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಗಣಪತಿ ಮೆರವಣಿಗೆ ಬರುವ ವೇಳೆ ಮುಸ್ಲೀಂ ಬಾಂಧವರಿಂದ ಹೂವಿನ ಹಾರ ಹಾಕುವ ಮೂಲಕ ಸೌಹಾರ್ಧತೆಗೆ ನಾಂದಿ ಹಾಡಲಾಗುತ್ತಿದೆ.
ಆ.30ರಂದು ತುಂಗಾನಗರ ಠಾಣಾ ವ್ಯಾಪ್ತಿಯ ಸಿದ್ದೇಶ್ವರ ಸರ್ಕಲ್ ಯುವಕರ ಗಣಪತಿ ಪ್ರತಿಷ್ಠಾಪನಾ ಸಂಘದ ವಿಸರ್ಜನಾ ಮೆರವಣಿಗೆಯಲ್ಲಿ ಸಿದ್ದೇಶ್ವರ ಸರ್ಕಲ್ ಗೋಪಾಳ ದ ಮುಸ್ಲಿಂ ಭಾಂದವರಾದ ಜಫ್ರುಲ್ಲಾ, ರಿಜ್ವಾನ್, ಮಕ್ಸೂದ್, ಉಬೇದ್ ಹಾಗು ಇತರರು ಗಣಪತಿಗೆ ಹೂವಿನ ಹಾರ ಹಾಕಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿರುವುದು ಗಮನ ಸೆಳೆದಿದೆ.
ಸಿದ್ದೇಶ್ವರ ವೃತ್ತದ ಬಳಿ ಗಣಪತಿ ಮೆರವಣಿಗೆ ಬರುತ್ತಿದ್ದಂತೆ ಗಣಪತಿಗೆ ಹೂವಿನ ಹಾರಹಾಕಲಾಯಿತು. ಇದೇವೇಳೆ ಅನ್ನ ಸಂತರ್ಪಣೆ ಮಾಡಲಾಗಿದೆ. ಇದರಿಂದ ಗಣಪತಿ ಹಬ್ಬ ಈ ಬಾರಿ ಸೌಹಾರ್ದತೆಗೆ ಕಾರಣವಾಗ್ತಾಯಿದೆ. ಈ ವೇಳೆ ಕಮಿಟಿಯವರಾದ ಪ್ರದೀಪ್ ಕವಾಡಿ. ನಿಖಿಲ್. ಚಿನ್ನು ಮುರುಳಿ ಹಾಗು ಇತರೆ ಕಾರ್ಯಕರ್ತರು ಉಪಸ್ಥಿತರಿದ್ದರು.
Muslims offer God to garlands and distribute prasadam
