ad

ನಾನ್ ಕ್ಲೀನಿಕಲ್ ಗುತ್ತಿಗೆದಾರಿಗೆ ಕಳೆದು ಎರಡು ತಿಂಗಳಿಂದ ಸಂಬಳ ಆಗಿಲ್ಲ-ಮನವಿ- Non-clinical contractors have not been paid for the past two months - appeal

 SUDDILIVE || SHIVAMOGGA

ನಾನ್ ಕ್ಲೀನಿಕಲ್ ಗುತ್ತಿಗೆದಾರಿಗೆ ಕಳೆದು ಎರಡು ತಿಂಗಳಿಂದ ಸಂಬಳ ಆಗಿಲ್ಲ-ಮನವಿ-Non-clinical contractors have not been paid for the past two months - appeal

Payment, dues

ಸಾರ್ವಜನಿಕ ಆಸ್ಪತ್ರೆಯಲ್ಲಿ ಏಜೆನ್ಸಿ ಮೂಲಕ ಕೆಲಸ ಮಾಡುವ ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳಿಂದ ಸಂಬಳವಾಗದೆ ಇರುವ ಬಗ್ಗೆ ಇಂದು ಸಿಬ್ಬಂದಿಗಳು ಮುಖ್ಯವೈದ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಇವರೆಲ್ಲ ನಾನ್ ಕ್ಕೀನಿಕಲ್ ಗ್ರೂಪ್ ಡಿ ನೌಕರರಾಗಿದ್ದು, ಇಂದು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 8-10 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕಳೆದ 2-3 ತಿಂಗಳಿಂದ ಸಂಬಳವಾಗುತ್ತಿಲ್ಲ. ಖಾಯಂ ಉದ್ಯೋಗಿಗಳಿಗೆ ಸರಿಯಾಗಿ 1 ನೇ ತಾರೀಖಿಗೆ ಸಂಬಳವಾದರೆ, ಈ ನೌಕರರಿಗೆ ಕಳೆದ ಎರಡು ಮೂರು ತಿಂಗಳಿಂದ ಸಂಬಳವಿಲ್ಲದಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

1½ ಯಿಂದ 2 ತಿಂಗಳಿಗೊಮ್ಮೆ ಸಂಬಳವಾಗುತ್ತಿರುವುದರಿಂದ ನಿಗದಿತ ಸಮಯಕ್ಕೆ ಸಂಬಳವಾಗುತ್ತಿಲ್ಲ. ಕಾರಣ ಜೀವನ ನಡೆಸುವುದು ಕಷ್ಟವಾಗಿದೆ. ಮೇ ತಿಂಗಳ ಸಂಬಳ ಮೊನ್ನೆ ಆಗಸ್ಟ್ 10 ರಂದು ಲಭ್ಯವಾಗಿದೆ. ಜೂನ್ ಮತ್ತು ಜುಲೈ ತಿಂಗಳ ಸಂಬಳ ಬಾಕಿ ಉಳಿದುಕೊಂಡಿದೆ ಸರಿಯಾದ ಸಮಯಕ್ಕೆ ಸಂಬಳ ನೀಡುವಂತೆ ಕೋರಿದ್ದಾರೆ. 

ಈ ಕುರಿತು ಡಿಹೆಚ್ ಒ ಡಾ.ನಟರಾಜ್ ಸುದ್ದಿಲೈವ್ ಗೆ ಪ್ರತಿಕ್ರಿಯಿಸಿದ್ದು ಏಜೆನ್ಸಿಯವರಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು ಸರಿಯಾದ ಸಮಯಕ್ಕೆ ಸಂಬಳ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈ ಏಜೆನ್ಸಿಯನ್ಙ ನಡೆಸುತ್ತಿರುವ ರಾಘವೇಂದ್ರ ರೆಡ್ಡಿಯವರು ಸುದ್ದಿಲೈವ್ ಗೆ ಮಾಹಿತಿ ನೀಡಿದ್ದು ನಮಗೆ ಮೂರು ವರ್ಷದಿಂದ ಟೆಂಡರ್ ಆಗದಿದ್ದರೂ ಮುಂದುವರೆಸಲಾಗುತ್ತಿದೆ.

ನಾನೇ ಹೋಗಿ ಹಣ ಕೊಟ್ಟು ಬಜೆಟ್ ಮಾಡಿಸಿಕೊಳ್ಳಬೇಕಿದೆ. ಸರ್ಕಾರದಲ್ಲಿ ಹಣಕೊಟ್ಟು ಸಂಬಳ ಮಾಡಿಸಿಕೊಳ್ಳಬೇಕಿದೆ. ಈ ಕಾರಣದಿಂದ ನಾವು ಕಳೆದ ಮೂರುವರ್ಷದಿಂದ ಟೆಂಡರ್ ಭಾಗಿಯಾಗಿಲ್ಲ. ಬೇರೆ ಏಜೆನ್ಸಿಯವರು ಬಂದಿಲ್ಲವೆಂದು ಕಳೆದ ಮೂರು ವರ್ಷದಿಂದ ಮುಂದುವರೆಸಿಕೊಂಡು ಬರಲಾಗುತ್ತಿದೆ. ಮೊನ್ನೆ ಒಂದು ಬಿಲ್ ಪೇಮೆಂಟ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರದಲ್ಲಿ ಗುತ್ತಿಗೆ ಏಜೆನ್ಸಿಯವರ ಸ್ಥಿತಿ ಹದಗೆಡುತ್ತಿದೆ. ಅಪ್ಪರ್ ತುಂಗ ಮತ್ತು ನೀರಾವರಿ ನಿಗಮದ ಗುತ್ತಿಗೆದಾರರು ಸರ್ಕಾರ ಬಾಕಿಕೊಟ್ಟಿಲ್ಲ ಎಂದು ಹಣ ನೋಡಿಲ್ಲ. ಈಗ ಈಏಜೆನ್ಸಿಯವರ ಪರದಾಟ ಹೇಳದಂತಾಗಿದೆ. ಸರ್ಕಾರದ ಆರ್ಥಿಕ ಸ್ಥಿತಿ ಬಿಗಡಾಯಿಸುತ್ತಿರುವ ಸೂಚನೆಗಳು ಅಲ್ಲಲ್ಲಿ ಕಂಡುಬರುತ್ತಿದೆ. 

Non-clinical contractors have not been paid for the past two months - appeal

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close