SUDDILIVE || SHIVAMOGGA
ಡಿವೈಎಸ್ಪಿ ಖಡಕ್ ಸೂಚನೆ ಬೆನ್ನಲ್ಲೇ ಆಪರೇಷನ್ ಫುಟ್ ಪಾತ್-Operation Footpath follows DySP Khadak's instructions
ಡಿವೈಎಸ್ಪಿ ಖಡಕ್ ಸೂಚನೆ ಬೆನ್ನಲ್ಲೇ ಇಂದು ವೀರಶೈವ ಕಲ್ಯಾಣ ಮಂಟಪದ ಎದುರಿನ ರಸ್ತೆಯ ಆಪರೇಷನ್ ಪುಟ್ಬಾತ್ ನಡೆದಿದೆ. ಪುಟ್ಬಾತ್ ಬಿಟ್ಟು ರಸ್ತೆ ಮೇಲೆ ಅಂಗ್ಡಿ ನಿರ್ಮಿಸಿದ್ದ ಹೂವಿನ ಅಂಗಡಿ ಹಾಗೂ ಇತರೆ ಅಂಗಡಿಗಳ ಮಾಲೀಕರಿಗೆ ಶನಿವಾರವೇ ಡಿವೈಎಸ್ಪಿ ಸಂಜೀವ್ ಕುಮಾರ್ ಹಿಂದಕ್ಕೆ ಸರಿಯುವಂತೆ ಸೂಚನೆ ನೀಡಿದರು.
ಸೋಮವಾರ ರಸ್ತೆ ತೆರೆವು ಗೊಳಿಸುವಂತೆ ಸೂಚನೆ ನೀಡಿದ ಬೆನ್ನಲಿಯೇ ಇಂದು ಅಂಗಡಿ ಮಾಲೀಕರ ಅಂಗಡಿಗಳನ್ನು ಹಿಂದಕ್ಕೆ ಸಲ್ಲಿಸಲಾಗಿದೆ ಯಾವುದೇ ಅಂಗಡಿಯವರು ಡಿವೈಎಸ್ಪಿ ಸಂಜು ಕುಮಾರ್ ಅವರ ಮಾತನ್ನು ಪಾಲಿಸದೆ ರಸ್ತೆಯ ಮೇಲೆ ಹಾಗೆಯೇ ಅಂಗಡಿಗಳನ್ನು ಉಳಿಸಿಕೊಂಡಿದ್ದರು.
ಪೊಲೀಸರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಯಶಸ್ವಿಗೊಂಡಿದೆ ಬೆಳೆಗ್ಗೆ ಸುಮಾರು 11 ಗಂಟೆಗೆ ಆಪರೇಷನ್ ಫುಟ್ಪಾತ್ ನಡೆದಿದೆ. ಈ ವೇಳೆ ಪಿಐ ದೇವರಾಜ್ ಮತ್ತು ಪಾಲಿಕೆ ಆರೋಗ್ಯ ಇನ್ ಸ್ಪೆಕ್ಟರ್ ವಸಂತ್ ಪಿಎಸ್ಐ ಭಾರತಿ ಮೇಡಂ ಹಾಗೂ ಪಾಲಿಕೆ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
Operation Footpath follows DySP Khadak's instructions