ಇ-ಸ್ವತ್ತಿಗೆ 25 ಸಾವಿರ ಬೇಡಿಕೆ-ಗ್ರಾಪಂ ಎದುರೇ ಪ್ರತಿಭಟನೆ-Protest in front of Gram Panchayat

 SUDDILIVE || HOLEHONNURU

ಇ-ಸ್ವತ್ತಿಗೆ 25 ಸಾವಿರ ಬೇಡಿಕೆ-ಗ್ರಾಪಂ ಎದುರೇ ಪ್ರತಿಭಟನೆ-Demand for 25 thousand for e-Swathu - Protest in front of Gram Panchayat

ಹೊಳೆ ಹೊನ್ನೂರು ಹೋಬಳಿಯ ಎಡೆಹಳ್ಳಿ ಗ್ರಾಮ ಪಂಚಾಯಿತಿ ಯಲ್ಲಿ ಇ-ಸ್ವತ್ತು ಮಾಡಿಕೊಡದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಎದುರೇ ಸಾರ್ವಜನಿಕರೊಬ್ಬರು ಪ್ರತಿಭಟನೆ ನಡೆಸಿರುವ ಘಟನೆ ವರದಿಯಾಗಿದೆ.

ಎಡೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜ್ಞಾನೇಶ್ ಎಂಬುವರು ಸರ್ವೆ ನಂಬರ್ 60/6 ರಲ್ಲಿ 34 ಗುಂಟೆ ಭೂಮಿಯನ್ನು ಹೊಂದಿದ್ದು ಈ ಜಾಗಕ್ಕೆ ಭೂ ಪರಿವರ್ತನೆ ಆಗಿರುತ್ತದೆ ಭೂ ಪರಿವರ್ತನೆ ಹಾಗೂ ಇತರೆ ಎಲ್ಲಾ ದಾಖಲಾತಿಗಳು ನೀಡಿದರು ಸಹ ಈ ಸ್ವತ್ತು ನೀಡುವಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಲಂಚ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಇ-ಸ್ವತ್ತಿಗೆ 25 ಸಾವಿರ ರೂ. ಹಣದ ಬೇಡಿಕೆ ಇಟ್ಟ ಕಾರಣ ಇಂದು ಜ್ಞಾನೇಶ ಕುಟುಂಬ ಸಮೇತರಾಗಿ ಯಡೇಹಳ್ಳಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದ್ದಾರೆ. 

Protest in front of Gram Panchayat


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close