ad

ರಘುನಾಥನನ್ನ ವಶಕ್ಕೆ ಪಡೆಯಲಾಗಿದೆ-ಜಿಲ್ಲಾರಕ್ಷಣಾಧಿಕಾರಿಗಳು-Raghunath has been taken into custody - Sp

 SUDDILIVE || SHIVAMOGGA

ರಘುನಾಥನನ್ನ ವಶಕ್ಕೆ ಪಡೆಯಲಾಗಿದೆ-ಜಿಲ್ಲಾರಕ್ಷಣಾಧಿಕಾರಿಗಳು-Raghunath has been taken into custody - Sp

Sp, raghunath

ಜಿಲ್ಲಾ ಉಸ್ತುವರಿ ಸಚಿವ ಮಧು ಬಂಗಾರಪ್ಪನವರ ಪಿಎ ಎಂದು ಹೇಳಿಕೊಂಡು ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಮತ್ತು ವರ್ಗಾವಣೆ ಮಾಡಿಸಿರುವುದಾಗಿ ನಂಬಿಸಿದ ವ್ಯಕ್ತಿಯನ್ನ ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿಯೊಬ್ಬರಿಗೆ ರಘುನಾಥ್ ಎಂಬಾತ ನಾನು ಮಧು ಬಂಗಾರಪ್ಪನವರ ಪಿಎ ಆಗಿದ್ದೇನೆ. ನಿಮಗೆ ಸ್ಥಳ ತೋರಿಸಿಲ್ಲ. ನಾನು ಸಚಿವರಿಗೆ ಹೇಳಿ ನಿಮಗೆ ಬೇಕಾದ ಕಡೆ ವರ್ಗಾವಣೆ ಮಾಡಿಸುವೆ ಎಂದು ಹೇಳಿದ್ದನು. ಈ ವಿಷಯವನ್ನ ಜಂಟಿ ನಿರ್ದೇಶಕರು ಸಚಿವರ ವಿಶೇಷಾಧಿಕಾರಿಗಳಿಗೆ ತಿಳಿಸಿ ರಘುನಾಥ ಬಗ್ಗೆ ಕೇಳಿದ್ದಾರೆ. 

ರಘುನಾಥ ಅವರ ನಂಬರ್ ಪಡೆದ ವಿಶೇಷಾಧಿಕಾರಿ ಶ್ರೀಪತಿಯವರು ಟ್ರೂಕಾಲರ್ ನಲ್ಲಿ ತಪಾಸಣೆ ನಡೆಸಿದಾಗ ಮಧು ಬಂಗಾರಪ್ಪನವರ ಪಿಎ ಸೊರಬ ಆಫೀಸ್ ಎಂದು ತಿಳಿಸಿದೆ. ಇದರಿಂದ ಯುವ ಕಾಂಗ್ರೆಸ್ ನ ಅಧ್ಯ್ಷರಾದ ಗಿರೀಶ್ ಜಯನಗರ ಪೊಲೀಸ್ ಠಾಣೆಯಲ್ಲಿ ರಘುನಾಥ ವಿರುದ್ಧ ದೂರು ದಾಖಲಿಸಿದ್ದಾರೆ. 

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಜಿ.ಕೆ,  ರಘುನಾಥನನ್ನ ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ಬೆಂಗಳೂರು ಶಿರಸಿ ಸೇರಿದಂತೆ ವಿವಿಧೆಡೆ ಐದು ಕಡೆ ಪ್ರಕರಣ ದಾಖಲಾಗಿದೆ. ಈತನ ತಂದೆ ನಿವೃತ್ತ ತಹಶೀಲ್ದಾರ್ ಆಗಿದ್ದು ಸಾಕಷ್ಟು ಮಂತ್ರಿಗಳು ನನಗೆ ಪರಿಚಯವೆಂದು ಹೇಳಿಕೊಂಡು ಓಡಾಡಿದ್ದಾನೆ. 

ಆರೋಪಿ ರಘುನಾಥ

ವರ್ಗಾವಣೆ ಆದವರೆ ಈತನ ಟಾರ್ಗೆಟ್ ಆಗಿದ್ದು, ವರ್ಗಾವಣೆ ಕುರಿತು ಪತ್ರ ಮಾಡಿಸಲಾಗಿದೆ ನನಗೆ ಹಣ ಹಾಕಿ ಎಂದು ಆನ್ ಲೈನ್  ಪೇಮೆಂಟ್ ಮೂಲಕ ಹಣ ಹಾಕಿಸಿಕೊಂಡು ನಂತರ ಆ ನಂಬರ್ ನ್ನ ಸ್ಚಿಚ್ ಆಫ್ ಮಾಡಿಕೊಂಡು ಈತ ಟ್ರೇಸ್ ಗೂ ಸಿಗದ ಹಾಗೆ ನೋಡಿಕೊಂಡಿರುವ ಉದಾಹರಣೆಗಳಿವೆ.  ಆತನ ವಿರುದ್ಧ ಪ್ರಕರಣಗಳು ದೂರಾಗಿ ದಾಖಲಾಗಿದೆ. ಆತನನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. 

Raghunath has been taken into custody - Sp

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close