SUDDILIVE || SHIVAMOGGA
ಹಣಗೆರೆ ಕಟ್ಟೆಯ ಬಳಿ ರಸ್ತೆ ಅಪಘಾತ- ಕಳಚಿಕೊಂಡ ಬಸ್ ನ ಹಿಂಬದಿ ಚಕ್ರ-Road accident near Hanagere Katte - Rear wheel of bus detached from bus
ಹಣಗೆರೆಕಟ್ಟೆ ಕುಣಜೆ ಗ್ರಾಮದ ಬಳಿ ನಿನ್ನೆ ಭಯಾನಕ ರಸ್ತೆ ಅಪಘಾತವಾಗಿದೆ. ರಸ್ತೆ ಅಪಘಾತದಲ್ಲಿ ಅದೃಷ್ಟವಶಾತ್ ಯಾವಯದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ನಿನ್ನೆ ಶಿವಮೊಗ್ಗದಿಂದ ಹಣಗೆರೆಕಟ್ಟೆಗೆ ಹೋಗುವ ಖಾಸಗಿ ಬಸ್ ವೊಂದು ಕುಣಜೆ ಗ್ರಾಮದ ಬಳಿ ಬರುತ್ತಿದ್ದಾಗ ಎದುರಿನಿಂದ ಸ್ವಿಫ್ಟ್ ಕಾರೊಂದು ಬಂದು ಹಿಂದಿನ ಟಯರ್ ಗೆ ಗುದ್ದಿದೆ. ಪರಿಣಾಮ ಖಾಸಗಿ ಬಸ್ ನ ಹಿಂಬದಿಯ ಎರಡು ಟಯರ್ ಗಳೆ ಕಿತ್ತುಕೊಂಡು ಹೋಗಿದೆ.
ಕಾರಿನ ಮುಂಭಾಗ ಜಕಂಗೊಂಡರೂ ಯಾವುದೇ ಪ್ರಾಣಹಾನಿಯಾಗಿಲ್ಲ. ಅದರಂತೆ ಬಸ್ ನ ಹಿಂಬದಿಯ ಎರಡು ಗಾಲಿಗಳು ಕಿತ್ತುಕೊಂಡು ಹೋದರೂ ಪ್ರಯಾಣಿಕರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಜೊತೆಗೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಯಾವುದೇ ದೂರು ದಾಖಲಾಗಿಲ್ಲ.
ಕಾರು ತೆಲಂಗಾಣದ ರಿಜಿಸ್ಟ್ರೇಷನ್ ಹೊಂದಿದ್ದರಿಂದ ತೆಲಂಗಾಣದ ವಾಹನವೆಂದು ಶಂಕಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Road accident near Hanagere Katte