ad

ಸೌಂದರ್ಯ ಹೋಟೆಲ್ ಮಾಲೀಕ ಹೆಬ್ಬಾರ್ ಇನ್ನಿಲ್ಲ- Soundarya Hotel owner Hebbar is no more

SUDDILIVE || SHIVAMOGGA

ಸೌಂದರ್ಯ ಹೋಟೆಲ್ ಮಾಲೀಕ ಹೆಬ್ಬಾರ್ ಇನ್ನಿಲ್ಲ-Soundarya Hotel owner Hebbar is no more

Soundarya, Hotel




ಶಿವಮೊಗ್ಗ ವಿನೋಬ ನಗರ ಪೊಲೀಸ್ ಚೌಕಿಯಲ್ಲಿದ್ದ ಪ್ರಖ್ಯಾತ ಸೌಂದರ್ಯ ಹೋಟೆಲ್ ಮಾಲೀಕರಾಗಿದ್ದ ಜಯಚಂದ್ರ ಹೆಬ್ಬಾರ್ ಅವರು ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನ ಹೊಂದಿದರು.

ಅವರಿಗೆ 55 ವರ್ಷ ವಯಸ್ಸಾಗಿತ್ತು, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ, ಹೆಬ್ಬಾರ್ ಅವರು ಪೊಲೀಸ್ ಇಲಾಖೆಯ ಆಹಾರ ಉಸ್ತುವಾರಿಯ ಜವಾಬ್ದಾರಿಯನ್ನು ಸಹ ಹಿಂದೆ ವಹಿಸಿಕೊಂಡಿದ್ದರು.

ಮೂಲತಾಃ ಕೊಪ್ಪ ಜಯನಗರದವರಾಗಿದ್ದ ಹೆಬ್ಬಾರ್ ಸಹೋದರರು ಕಳೆದ 30 ವರುಷಗಳ ಹಿಂದೆ ಹೊಳಲೂರಿಗೆ ಬಂದು ಹೋಟೆಲ್ ಉದ್ಯಮ ಆರಂಭಿಸಿದ್ದರು.

ಶಿವಮೊಗ್ಗ ಮೇದಾರ ಕೇರಿಯ ಸ್ವಗೃಹದಿಂದ ಇಂದು ಸಂಜೆ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸರಳ ಸಜ್ಜನಿಕೆಯ ಸ್ನೇಹಜೀವಿ ಹೆಬ್ಬಾರ್ ನಿಧನಕ್ಕೆ ಭಾರತೀಯ ಮಾನವ ಹಕ್ಕುಗಳ ಸಮಿತಿ  ಸೇರಿದಂತೆ ಅಪಾರ ಮಂದಿ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಅಗಲಿಕೆ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ವಿನಂತಿಸಿದ್ದಾರೆ.

Soundarya Hotel owner Hebbar is no more


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close