SUDDILIVE || SAGAR
ಓವರ್ ಟೇಕ್ ವಿಚಾರದಲ್ಲಿ ಸಾರಿಗೆ ನೌಕರನ ಮೇಲೆ ಹಲ್ಲೆ-ಇಬ್ಬರ ಬಂಧನ-Transport employee attacked over overtaking - two arrested
ತಾಲೂಕಿನ ಆನಂದಪುರದ ಬಸ್ ನಿಲ್ದಾಣದಲ್ಲಿ ಕೆ ಎಸ್ ಆರ್ ಟಿ ಸಿ ಚಾಲಕನ ಮೇಲೆ ಹಲ್ಲೆ ನಡೆಸಿದ ಹಿನ್ನಲೆ ಇಬ್ಬರನ್ನು ಬಂಧನಕ್ಕೆ ಒಳಪಡಿಸಲಾಗಿದೆ.
ಸಾಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಮೋಹನ್ ಎಂಬುವರ ಮೇಲೆ ಬಸ್ ಓವರ್ ಟೆಕ್ ಮಾಡುತ್ತಿದ್ದೀರಾ ಎಂದು ಆನಂದಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಹಲ್ಲೆ ಮಾಡಿದ್ದಾರೆ ಎಂದು ಚಾಲಕ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಪ್ರವೀಣ್ ( 31 ) ಜಗದೀಶ್ (31)ಎಂಬುವರನ್ನು ಸೆಕ್ಷನ್ 353 ರ ಕಾಯ್ದೆಯಡಿ ಬಂದಿಸಲಾಗಿದೆ.
Transport employee attacked over overtaking - two arrested