SUDDILIVE || SHIVAMOGGA
ಮತ್ತೆ ಮುನ್ನಲೆಗೆ ಬಂದ ಟೋಲ್ ವಿಷಯ-ಮಗದೊಂದು ಹೋರಾಟದ ಎಚ್ಚರಿಕೆ-Toll issue resurfaces - One more warns of struggle
ಕೆ.ಶಿಪ್ ನಲ್ಲಿ ಅಭಿವೃದ್ಧಿ ಗೊಂಡಿರುವ ಶಿವಮೊಗ್ಗ ಹಾನಗಲ್ ರಸ್ತೆ ಎಲ್ಲಿರುವ ಟೋಲ್ ನಿಂದಾಗಿ ಶಿವಮೊಗ್ಗ ಮತ್ತು ಶಿಕಾರಿಪುರ ಸೊರಬ ಈ ಮಾರ್ಗದ ಬಸ್ ದರಗಳು ಹೆಚ್ಚಿಗೆ ಆಗಿವೆ ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಜಿ.ಪಿ.ಶಿವರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60 ಕಿಮಿ ವ್ಯಾಪ್ತಿ ಒಳಗೆ ಎರಡು ಟೋಲ್ ಬರುವ ಹಾಗಿಲ್ಲ. ಆದರೆ ಶಿರಾಳಕೊಪ್ಪದಿಂದ ಶಿವಮೊಗ್ಗದಲ್ಲಿ ಬರುವ 60 ಕಿಮಿ ಒಳಗೆ ಕುಟ್ರಳ್ಳಿ ಮತ್ತು ಕಲ್ಲಾಪುರ ಟೋಲ್ ಎರಡು ಬರಲಿದೆ. ಇದನ್ನ ಹಾಸನ ಮತ್ತು ದೇವದುರ್ಗ ಎರಡು ಕಡೆ ಇದ್ದ ಟೋಲ್ ಗಳನ್ನ ರದ್ದುಗೊಳಿಸಲಾಗಿದೆ. ಹಾಗೆಯೇ ಶಿವಮೊಗ್ಗ ಮತ್ತು ಶಿಕಾರಿಪುರದ ಮಾರ್ಗದಲ್ಲಿ ಬರುವ ಎರಡು ಟೋಲ್ ಗಳನ್ನ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಶಿಕಾರಿಪುರ ದ ಬಳಿ ಇರುವ ಕೊಟ್ರಳ್ಳಿ ಹಾಗೂ ಶಿವಮೊಗ್ಗದ ಬಳಿ ಇರುವ ಕಲ್ಲಾಪುರ ಟೋಲ್ ಗಳನ್ನು ರದ್ದುಗೊಳಿಸುವಂತೆ ಕಳೆದ ಒಂದು ವರ್ಷದಿಂದ ಹೋರಾಟ ಸಮಿತಿ ಹೋರಾಟವನ್ನು ನಡೆಸಿಕೊಂಡು ಬರುತ್ತಿದೆ ಕಳೆದ ಒಂದು ವರ್ಷದಿಂದ ಹೋರಾಟ ನಡೆಯುತ್ತಿದ್ದರು ಸಹ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ ಅಧಿಕಾರಿಗಳಿಂದ ಸ್ಪಂದನೆ ದೊರಕುತ್ತಿಲ್ಲ ಕಳೆದ ವರ್ಷ ಆಗೋಸ್ಟ್ 29 ರಂದು ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿತ್ತು.
ಅಕ್ಟೋಬರ್ ಮೂರರಂದು ಸುಮಾರು 2000 ಜನರೊಂದಿಗೆ ಪ್ರತಿಭಟನೆಯನ್ನು ನಡೆಸಿದಾಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ನಮ್ಮನ್ನು ಸಂಪರ್ಕಿಸಿದರು ಸಹ ಟೋಲ್ ತೆಗೆಯುವಲ್ಲಿ ಯಾರು ಸಹ ಉತ್ಸುಕರಾಗಿ ಕಂಡು ಬರುತ್ತಿಲ್ಲ. ನಮ್ಮ ಹೋರಾಟದ ನಂತರ ಎರಡು ಅಧಿವೇಶನಗಳು ಕಳೆದಿವೆ ಎರಡು ಅಧಿವೇಶನದಲ್ಲಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರುಗಳಾಗಲಿ ಶಾಸಕರಾಗಲಿ ಪ್ರಸ್ತಾಪಿಸದೆ ಇರುವುದು ದುರಂತವಾಗಿದೆ ಎಂದರು.
ಆಗೋ ಹನ್ನೊಂದರಿಂದ ಆರಂಭವಾಗುವ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಹಾಸನ ಜಿಲ್ಲೆಯ ಚಳಗೇರಿ ಟೋಲ್ ನಲ್ಲಿ ಹೋರಾಟ ನಡೆದಾಗ ಅಲ್ಲಿನ ಜಿಲ್ಲಾಧಿಕಾರಿಗಳು ಟೋಲ್ ಅನ್ನು ಮಾಡಿದ್ದಾರೆ ಆದೇಶವನ್ನು ಮಾಡಿ ಸಂಗ್ರಹವನ್ನು ನಿಲ್ಲಿಸಿದ್ದರು. ರಾಯಚೂರು ಜಿಲ್ಲೆಯ ರಾಮದುರ್ಗ ದಲ್ಲಿ ಇದ್ದ ಟೋಲ್ ವಿಚಾರವನ್ನು ಸಹ ಅಲ್ಲಿನ ಜಿಲ್ಲಾಧಿಕಾರಿಗಳು ನಿಲ್ಲಿಸಿದ್ದ ಉದಾಹರಣೆಗಳಿವೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ನಮ್ಮ ಜಿಲ್ಲಾಧಿಕಾರಿಗಳಿಗೆ ಎರಡು ಮೂರು ಬಾರಿ ಮನವಿ ಮಾಡಿದರು ಸಹ ಜಿಲ್ಲಾಧಿಕಾರಿಗಳು ಜವಾಬ್ದಾರಿನಲ್ಲಿ ನೆನೆಸಿಕೊಳ್ಳುತ್ತಿದ್ದಾರೆ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಸಾಧ್ಯವಾಗಿದ್ದು ಇಲ್ಲೇ ಯಾಕೆ ಸಾಧ್ಯವಿಲ್ಲವೆಂದು ಅವರು ಆಗ್ರಹಿಸಿದರು.
ಆಗಸ್ಟ್ ಹನ್ನೊಂದರಿಂದ ಆರಂಭವಾಗುವ ಮಳೆಗಾಲದ ಅಧಿವೇಶನದಲ್ಲೂ ಸಹ ಇದರ ಪ್ರಸ್ತಾವನೆ ಆಗಲಿ ಅಥವಾ ಟೋಲ್ ಸಂಗ್ರಹಣೆ ಆಗಲಿ ನಿಲ್ಲದಿದ್ದರೆ ಅನಿವಾರ್ಯವಾಗಿ ಸಾರ್ವಜನಿಕರು ಪ್ರತಿಭಟನೆಗೆ ಇಳಿಯಲಿದ್ದಾರೆ ಅಧಿಕಾರಿಗಳು ಜವಾಬ್ದಾರಿನ ನುಣುಕಿಕೊಳ್ಳಬಾರದು ನಾವು ಇದುವರೆಗೆ ನೀಡಿರುವ ಮನವಿಗಳನ್ನು ಅಧಿಕಾರಿಗಳು ನೀಡದೇ ಇರುವುದು ಸಹ ಅವರ ಬೇಜವಾಬ್ದಾರಿಯನ್ನು ಎತ್ತಿ ಹಿಡಿಯುತ್ತದೆ ಎಂದು ದೂರಿದರು
Toll issue resurfaces - One more warns of struggle