ad

ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ-ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್-shop fronts voluntarily shut down

 SUDDILIVE || THIRTHAHALLI

ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ-ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್ -  Massive protest in Thirthahalli - shop fronts voluntarily shut down

Thirthahalli, protest

ಕೋಟ್ಯಾಂತರ ಹಿಂದುಗಳ ಪವಿತ್ರ ಕ್ಷೇತ್ರ ಶ್ರೀ ಮಂಜುನಾಥ ಸ್ವಾಮಿಯ ಪುಣ್ಯ ಸನ್ನಿಧಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ತರಲು ಒಳಸಂಚು ನಡೆಸಿರುವ ವಿರುದ್ಧ ತೀರ್ಥಳ್ಳಿಯಲ್ಲಿ ಬೃಹತ್ ಜನಾಗ್ರಹ ಸಭೆ ನಡೆದಿದೆ ಜನಗ್ರಹ ಸಭೆಗೂ ಮುನ್ನ ಬೃಹತ್ ಪಾದಯಾತ್ರೆ ನಡೆದಿದೆ.

ಮಳೆಯನ್ನು ಲೆಕ್ಕಿಸದೆ ಸಾವಿರಾರು ಜನರು ಕೊಡೆಯನ್ನು ಹಿಡಿದು ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಎಪಿಎಂಸಿ ಮುಂಭಾಗದಿಂದ ಹೊರಟ ಪಾದಯಾತ್ರೆಯ ತಾಲೂಕು ಕಚೇರಿ ತಲುಪಿದೆ ತಾಲೂಕು ಕಚೇರಿಯಲ್ಲಿ ಬೃಹತ್ ಜನ ಗ್ರಹ ಸಭೆ ನಡೆದಿದೆ ಜನಗ್ರಹ ಸಭೆಯಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಸಹಕಾರಿ ಧುರೀಣ ಆರ್ ಎಂ ಮಂಜುನಾಥ್ ಗೌಡ, ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್ ಭಾಗಿಯಾಗಿದ್ದಾರೆ.

ಪಾದಯಾತ್ರೆಯ ವೇಳೆ ಪ್ರತಿಭಟನೆಗೆ ಬೆಂಬಲಿಸಿ ಅಂಗಡಿ ಮುಂಟ್ಟುಗಳು ಸ್ವಯಂ‌ಪ್ರೇರಿತವಾಗಿ ಬಂದ್ ಆಗಿವೆ. 

ಶಿವಮೊಗ್ಗದಲ್ಲೂ ಪ್ರತಿಭಟನೆ


ಶಿವಮೊಗ್ಗದಲ್ಲಿಯೂ ಅರ್ಚಕರ, ಧಾರ್ಮಿಕ ಚಿಂತಕರ  ಬೈಕ್ ರ‌್ಯಾಲಿ ನಡೆದಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಶಾಂತಿಯುತ ಪ್ರತಿಭಟನೆ ನಡೆದಿದೆ. ಕೋಟೆ ದೇವಸ್ಥಾನದ ರಾಮ್ ಪ್ರಸಾದ್ ಮೊದಲಾದವರು ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close