ad

ಫೇಸ್ ಬುಕ್ ನಲ್ಲಿ ಶಿಕ್ಷಣ ಸಚಿವರ ವಿರುದ್ಧ ಸಂಸದರ ಪೋಸ್ಟ್- MP's post against Education Minister on Facebook

 SUDDILIVE || SHIVAMOGGA

ಫೇಸ್ ಬುಕ್ ನಲ್ಲಿ ಶಿಕ್ಷಣ ಸಚಿವರ ವಿರುದ್ಧ ಸಂಸದರ ಪೋಸ್ಟ್-MP's post against Education Minister on Facebook

Mp, facebook

ಹ್ಯಾಶ್ ಟ್ಯಾಗ್ ಬಳಸಿ ಶಿವಮೊಗ್ಗದ ಸಂಸದರು ರಾಜ್ಯದಲ್ಲಿರುವ ಶಿಕ್ಷಣ ಇಲಾಖೆಯ ನೂನ್ಯತೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮೊದಲ ಬಾರಿಗೆ ಸಂಸದರ ಈ ಪೋಸ್ಟ್ ಸಂಚಲನ ಉಂಟು ಮಾಡಿದೆ. 

ಕಾಂಗ್ರೆಸ್ ಫೇಲ್ಸ್ ಕರ್ನಾಟಕ ಎಂದು ಹ್ಯಾಶ್ ಟ್ಯಾಗ್ ಬಳಸಿ ಇಲಾಖೆಯಲ್ಲಿರುವ ನೂನ್ಯತೆಯನ್ನ ಎತ್ತಿಹಿಡಿದಿದ್ದಾರೆ. ಸಿಎಂ ಮತ್ತು ಶಿಕ್ಷಣ ಸಚಿವರು ಇರುವ ಇಮೇಜ್ ಬಳಸಿ ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ ವ್ಯವಸ್ಥೆ ಅಧೋಗತಿ ಎಂದು ಪೋಸ್ಟ್ ಮಾಡಿದ್ದಾರೆ. 


ಅವರ ಪೋಸ್ಟ್ ಗಳಲ್ಲಿ ಬಹುತೇಕ ಯೋಜನೆಗಳನ್ನ ತಂದಿರುವ ಬಗ್ಗೆ, ಕೇಂದ್ರ ಸಚಿವರನ್ನ ಭೇಟಿ ಮಾಡಿ ಇಂತಿಂಥಿಹ ಯೋಜನೆಗಳನ್ನ ತರಲಾಗಿದೆ. ಗಣ್ಯ ವ್ಯಕ್ತಿಗಳ ಹುಟ್ಟುಹಬ್ಬದ ಶುಭಾಶಯ, ಕಾರ್ಯಕ್ರಮಗಳ ಪೋಸ್ಟ್ ಇರುತ್ತಿದ್ದ ಸಂಸದರ ಫೇಸ್ ಬುಕ್ ನಲ್ಲಿ ಇಂದು ದಿಡೀರ್ ಎಂದು ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್ ಹಾಕಿಕೊಂಡಿರುವುದು ಅಚ್ಚರಿ ಮೂಡಿಸಿದೆ. 

ಶಿಕ್ಷಕರು/ಉಪನ್ಯಾಸಕರು ಇಲ್ಲ, ಶಾಲಾ ಕೊಠಡಿಗಳು ಇಲ್ಲ, ಶೂ, ಸಾಕ್ಸ್‌ ಇಲ್ಲ, ಶೌಚಾಲಯವಿಲ್ಲ, ಬಿಸಿಯೂಟವಿಲ್ಲ, ಗುಣಮಟ್ಟದ ಬೇಳೆ ಇಲ್ಲ, ಸ್ಕಾಲರ್‌ಶಿಪ್‌ ಇಲ್ಲ, ಶಿಕ್ಷಕರಿಗೆ ಸಂಬಳವಿಲ್ಲ, ಆಟದ ಮೈದಾನವಿಲ್ಲ, @inckarnataka ಸರ್ಕಾರದ ದುರಾಡಳಿತದಲ್ಲಿ ಶಿಕ್ಷಣ ಇಲಾಖೆಗೆ ಗ್ರಹಣ, ಮಕ್ಕಳ ಭವಿಷ್ಯಕ್ಕೆ ಕಲ್ಲು ಎಂದು ಹಾಶ್ ಟ್ಯಾಗ್ ಬಳಸಿ #CongressFailsKarnataka ಎಂದು ಪೋಸ್ಟ್ ಮಾಡಲಾಗಿದೆ. 

ಅವರ ಕಾನೆಂಟ್ ಬಾಕ್ಸು ಸಹ ಅವರ ಪೋಟ್ ಗೆ ಬಹುತೇಕವಾಗಿ ಅವರ ಪರವಾಗಿಯೇ ಕಾಮೆಂಟ್ಸ್ ಗಳು ಬರುತ್ತಿದ್ದವು. ಆದರೆ ಈ ಬಾರಿ ಸಂಸದರ ಪೋಸ್ಟ್ ಗೆ ಆಕ್ಷೇಪಣೆಗಳೆ ಕೇಳಿ ಬಂದಿದೆ. ಬಿಜೆಪಿಗರ ಸುಳ್ಳುಗಳನ್ನ ಕೇಳುವ ದಿನ ಮುಗಿದಿದೆ ಮಧು ಸಾರ್ ಉತ್ತಮ ಕೆಕಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಗೆಸ್ಟ್ ಲಕ್ಚರರ್ ಗೂ ಸಂಬಳಕೊಡುತ್ತಿರಲಿಲ್ಲ. ಮೊದಲಬಾರಿಗೆ ಶಿಕ್ಷಣ ಸಚಿವರಾಗಿರುವುದರಿಂದ ಸ್ವಲ್ಪ ಸಮಯ ಹಿಡಿದಿದೆ ಎಂದು ಸಚಿವರ ಪರ ಬ್ಯಾಟ್ ಬೀಸಲಾಗಿದೆ. 

MP's post against Education Minister on Facebook

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close