ad

ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು- Water from Linganamakki reservoir to the river

 SUDDILIVE || SHIVAMOGGA

ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು-Water from Linganamakki reservoir to the river

Linganmakki, water

ಮೂರು ನೋಟೀಸ್ ಗಳ ನಂತರ ಇಂದು ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದೆ ಶರಾವತಿ ನದಿಗೆ ನಿರ್ಮಿಸಲಾಗಿರುವ ಲಿಂಗನಮಕ್ಕಿ ಜಲಾಶಯದಿಂದ ನದಿಗೆ 14 ವರೆ ಸಾವಿರ ಹನ್ನೊಂದು ಗೇಟ್ ಗಳ ಮೂಲಕ ಹರಿಸಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯದ 11 ಗೇಟನ್ನ ತೆರೆದು ನದಿಗೆ ಹರಿಸಲಾಗಿತ್ತು. 1819 ಅಡಿ ನೀರು ಸಂಗ್ರಹದ ಸಾಮರ್ಥ್ಯದ ಜಲಾಶಯದಲ್ಲಿ 1816.20 ಅಡಿ ನೀರು ಸಂಗ್ರಹವಾಗಿದ್ದು ನದಿಗೆ 48393 ಕ್ಯೂಸೆಕ್ ನೀರು ಜಲಾಶಯಕ್ಕೆ ಪ್ರಸ್ತುತ ನೀರು ಹರಿದು ಬರುತ್ತಿದೆ. 

 ಜಲಾಶಯದಲ್ಲಿ 1812 ಕ್ಯೂಸೆಕ್ ನೀರು ಸಂಗ್ರಹವಾದ ವೇಳೆಯಲ್ಲೇ ಕೆಪಿಸಿಯ ಅಧಿಕಾರಿಗಳು ಬಾಗಿನ ಅರ್ಪಿಸಿ ಇಂದು ನದಿಗೆ ನೀರು ಹರಿಸಿದ್ದರು. ಜಲಾಶಯ ಭರ್ತಿಯಾಗಲು ಕೇವಲ ಮೂರು ಅಡಿ ಬಾಕಿಯಿರುವಾಗಲೆ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಪ್ರತಿವರ್ಷ 1816 ಅಡಿ ತುಂಬಿದ ಬೆನ್ನಲ್ಲೇ ಲಿಂಗನಮಕ್ಕಿಯಿಂದ ನೀರು ಹರಿಸಲಾಗುತ್ತದೆ. ಅದರಂತೆ ಈ ವರ್ಷವೂ ಜಲಾಶಯದಿಂದ ನೀರು ಹರಿಸಲಾಗಿದೆ. 

Water from Linganamakki reservoir to the river

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close