ad

ಏಡ್ಸ್ ಜಾಗೃತಿ ಅಭಿಯಾನ- AIDS awareness campaign

SUDDILIVE || SHIVAMOGGA

ಏಡ್ಸ್ ಜಾಗೃತಿ ಅಭಿಯಾನ-AIDS awareness campaign

AIDS, awareness

ಏಡ್ಸ್ ಜಾಗೃತಿ ಅಭಿಯಾನಕ್ಕೆ ಸಂಬಂಧಿಸಿದಂತೆ ಎ ಟಿ ಎನ್ ಸಿ  ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳು ಪಥಸಂಚಲನ ಹಾಗೂ ಬೀದಿ ನಾಟಕಗಳನ್ನು ಮಾಡಿದರು. ಡಿಸೆಂಬರ್ 1  ವಿಶ್ವ ಏಡ್ಸ್ ದಿನಾಚರಣೆಯನ್ನು HIV  ಏಡ್ಸ್ ಪೀಡಿತರ ವಿರುದ್ಧದ ತಾರತಮ್ಯವನ್ನು   ತೊಡೆದು ಹಾಕುವುದರ ಮೇಲೆ ಕೇಂದ್ರೀಕರಿಸಲಾಗಿತ್ತು.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜನರಲ್ಲಿ ಅರಿವು ಮೂಡಿಸುವ ಪ್ಲೇ ಕಾರ್ಡ್ಸ್ ಗಳನ್ನು ಹಿಡಿದು ಸಾರ್ವಜನಿಕವಾಗಿ ಘೋಷಣೆಗಳನ್ನು ಹೇಳುವುದರ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾಡಲಾಯಿತು.ಇದರ ಚಾಲನೆಯನ್ನು ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಮಮತಾ ಪಿಆರ್ ರವರು ನೀಡಿ , ಯುವಜನತೆ ಎಚ್.ಐ.ವಿ ( HIV ) ಹಾಗೂ ಏಡ್ಸ್ ( AIDS ) ರೋಗಕ್ಕೆ ಬಲಿಯಾಗುತ್ತಿದ್ದು, ಜಾಗೃತಿಯಿಂದ ಮಾತ್ರ ಈ ಮಾರಕ ಖಾಯಿಲೆಯನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ಶೌಚಾಲಯದ ಆಸನಗಳು ಅಥವಾ ಬಟ್ಟೆಗಳಿಂದ, ಸೊಳ್ಳೆ ಅಥವಾ ಕೀಟ, ಗಾಳಿ, ನೀರಿನಿಂದ ಮತ್ತು ಅಪ್ಪಿಕೊಳ್ಳುವುದರಿಂದ, ಕೈಕುಲುವುದರಿಂದ ಬರುವುದಿಲ್ಲ ಎಂದು ತಿಳಿಸಿದರು. ಹಾಗೂ

ಜಿಲ್ಲಾ I C T C ಮೇಲ್ವಿಚಾರಕರು, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಅಧಿಕಾರಿಗಳು ಆದ ಮಂಗಳ ರವರು ಮಾತನಾಡಿ ಅವರು ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಎಚ್.ಐ.ವಿ ಬಗ್ಗೆ ಅರಿವಿನ ಕೊರತೆಯ ಕಾರಣದಿಂದ ಹೆಚ್ಚು ಯುವಜನತೆ ಏಡ್ಸ್ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಆದ ಕಾರಣ  ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿಸಿದರು.ಏಡ್ಸ್ ಬಂದಂತಹ ವ್ಯಕ್ತಿಗೆ ಕೊಟ್ಟಂತಹ  ಸಿರಂಜ್‌ಗಳನ್ನು ಬಳಕೆ ಮಾಡಿದರೆ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದರು. ಈ ಜಾಥ ಕಾರ್ಯಕ್ರಮದಲ್ಲಿ N S S ಹಾಗೂ ರೆಡ್ ರಿಬ್ಬನ್ ಕ್ಲಬ್ ನ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎನ್ಎಸ್ಎಸ್ ಘಟಕ 1 2 ಮತ್ತು 3 ರ ಅಧಿಕಾರಿಗಳಾದ ಮಂಜುನಾಥ್ ಎನ್, ಪ್ರವೀಣ್ ಬಿಎನ್,  ಗಾಯತ್ರಿ ಟಿ ಹಾಗೂ ರೆಡ್ ಕ್ರಾಸ್ ವಿಭಾಗದ ಸಂಚಾಲಕರಾದ ಸೌಪರ್ಣಿಕ ಉಮೇಶ್, ಶ್ರುತಿ ಕೆ  ರವರು ಭಾಗಿಯಾಗಿದ್ದರು.

AIDS awareness campaign

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close