SUDDILIVE || SHIVAMOGGA
ದೀವರೋ, ಈಡಿಗರೋ, ಈಡಿಗರ ಭವನದಲ್ಲಿ ನಡೆದ ಸುಧೀರ್ಘ ಚರ್ಚೆ-A long debate took place at the Eediga Bhavan, whether it was Deeva or Eediga
ಜಿಲ್ಲಾ ಆರ್ಯ ಈಡಿಗರ ಸಂಘದಲ್ಲಿ ರಾಜ್ಯ ಹಿಂದುಳಿದು ವರಘಗಳ ಶಾಶ್ವತ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಗ್ಗೆ ಸಮಾಜದ ಮುಖಂಡರ ಜಿಲ್ಲಾ ಮಟ್ಟದ ಸಭೆ ನಡೆದಿದೆ.
ಈಡಿಗ ಅಂತನೋ ಅಥವಾ ದೀವರು ಎಂಬುದಾಗಿ ಸಮೀಕ್ಷೆಯಲ್ಲಿ ಬರೆಯಿಸುವ ಕುರಿತು ಸುದೀರ್ಘವಾಗಿ ಚರ್ಚೆ ನಡೆದಿದೆ. ಆದರೆ ಸಭೆಯಲ್ಲಿ ಶಾಸಕರು, ಸಚಿವರು ಅನುಪಸ್ಥಿತಿಯಲ್ಲಿ ಸಭೆ ನಡೆದಿದೆ. ಶಾಸಕರು ಅನಾರೋಗ್ಯದ ಹಿನ್ನಲೆಯಲ್ಲಿ ಸಭೆಗೆ ಬರದಿದ್ದರೆ, ಶಾಸಕರು ವಿಧಾನ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ಹಾಜರಾಗಲಿಲ್ಲ.
ಇನ್ನೂ ಮಾಜಿ ಶಾಸಕ ಡಾ.ನಾರಾಯಪ್ಪ ಹಾಜರಾಗಿದ್ದು ಬಿಟ್ಟರೆ, ಸಮುದಾಯದ ನಾಯಕರಾದ ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪರು ಹಾಜರಾಗಿರಲಿಲ್ಲ. ಈ ವೇಳೆ ಮಾತನಾಡಿದ ವಕೀಲ ಧರ್ಮರಾಜ್ ಮಾತನಾಡಿ,ಸಮೀಕ್ಷೆ ಬೇರೆ ಮತ್ತು ಜಾತಿಗಣತಿ ಬೇರೆಯಾಗಿದೆ. ಸದಾಶಿವ ಆಯೋಗದಲ್ಲಿ 1350 ಜಾತಿಯನ್ನ ಸೇರಿಸಲಾಗಿತ್ತು. ಈಗ 1400 ಜಾತಿ ಪತ್ರಿಕಾಪ್ರಕಟಣೆಯಲ್ಲಿ ನೀಡಲಾಗಿದೆ. ಈಡಿಗ, ಪೂಜಾರ್, ಬಿಲ್ಲವಾ, ದೀವರು ಹೆಸರನ್ನ ಸಮೀಕ್ಷೆಯಲ್ಲಿ ನೀಡಲಾಗಿದೆ.
ಈ ಹಿಂದೆ ಕೋಡ್ ನಂಬರ್ ಗಳು ಬೇರೆಯಾಗಿತ್ತು. ಈಗ ಬೇರೆಯಾಗಿದೆ. ಜಾತಿ ಮತ್ತು ಉಪಜಾತಿ ನೀಡಲಾಗಿದೆ ಎರಡೂ ಕಾಲಂಗಳಲ್ಲಿ ಮೊಂದೇ ಜಾತಿಯನ್ನ ಬರೆಯಿಸಬಹುದಾಗಿದೆ. ಮೂರು ರೀತಿಯಲ್ಲಿ ಬರೆಯಿಸಬಹುದು, ಈಡಿಗ, ದೀವರು ಎಂದು ವರೆಯಿಸಿದರೂ ಈಡಿಗ ಅಂತನೇ ಆಗಲಿದೆ. ಈ ಸಮೀಕ್ಷಯಲ್ಲಿ ಬರೆಯಿಸಿದರೂ ಶೈಕ್ಷಣಿಕ ಮತ್ತು ವೃತ್ತಿ ಜೀವನಕ್ಕೆ ತೊಂದರೆಯಾಗಲ್ಲ ಎಂದರು.
ಮಾಜಿ ಶಾಸಕ ಡಾ.ನಾರಯಣಪ್ಪ ಮಾತನಾಡಿ,ಈಡಿಗ ಮತ್ತು ದೀವರ ಎಂದು ಬರೆಯಿಸುವಲ್ಲಿ ಗೊಂದಲ ಬೇಡ, ಅಸ್ಥಿತ್ವದ ಜೊತೆ ಸಮುದಾಯದ ಗೌರವ ಉಳಿಸಿಕೊಳ್ಳೋಣ ಎಂದರು. ಪತ್ರಕರ್ತ ಹರ್ಷ ಅವರೂ ಸಹ ಮಾತನಾಡಿ, ಗೊಂದಲ ಬೇಡ ಏನೇ ಬರೆಯಿಸಿದರೂ ಈಡಿಗರ ಅಡಿಯಲೇ ಬರಲಿದೆ ಎಂದರು.
A long debate took place at the Eediga Bhavan
