ad

ರಸ್ತೆ ಗುಂಡಿ ವಿರುದ್ಧ ಬಿಜೆಪಿ ರಸ್ತೆ ತಡೆ ಪ್ರತಿಭಟನೆ-BJP road block protest against road pothole

 SUDDILIVE || SHIVAMOGGA

ರಸ್ತೆ ಗುಂಡಿ ವಿರುದ್ಧ ಬಿಜೆಪಿ ರಸ್ತೆ ತಡೆ ಪ್ರತಿಭಟನೆ-BJP road block protest against road pothole

Pothole, strike




ಮುಸ್ಲೀಂ ತುಷ್ಠೀಕರಣ ಮಾಡುತ್ತಿರುವ ಭ್ರಷ್ಠ ತುಷ್ಠ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತು ರಸ್ತೆಗಳ ಗುಂಡಿ ಮುಚ್ಚದ ರಾಜ್ಯ ಸರ್ಕಾರದ ವಿರುದ್ಧ ಇಂದು ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿ ಬಸ್ ನಿಲ್ದಾಣದಲ್ಲಿ ಒಂದು ಗಂಟೆಗೂ ಹೆಚ್ಚು ರಸ್ತೆ ತಡೆ ಪ್ರತಿಭಟನೆ ನಡೆಸಿದರು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್ ಮಾತನಾಡಿ, ಭದ್ರಷ್ಠ ಸರ್ಕಾರ ಕಾರ್ಯಕರ್ತರನಿಂದ ಹಿಡಿದು ಮುಖ್ಯಮಂತ್ರಿಗಳ ವರೆಗೆ ಹಗರಣದಲ್ಲಿ ತೊಡಗಿಸಿಕೊಂಡಿದ್ದಾರೆ.‌ ವಾಲ್ಮೀಖಿ ನಿಗಮದ ಹಗರಣವನ್ನ  ಸಿಎಂ ಸ್ವತಃ ತೆಗೆದುಕೊಂಡಿದ್ದಾರೆ. ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದರು. ಆದತೆ ಹಣಕಾಸು ಸಚಿವರಾಗಿ ಸಿಎಂ ವಿರುದ್ಧ ಏನೂ ಕ್ರಮವಾಗಲಿಲ್ಲ.‌ಮೂಡದ ಹಗರಣದಲ್ಲಿಯೂ ಸಿಎಂ ವಿರುದ್ಧ ಕ್ರಮ ಆಗಲಿಲ್ಲ. 

ಗ್ಯಾರೆಂಟಿ ಹಣ ಸಹ ಬಂದಿಲ್ಲ. ರಸ್ತೆ ಗುಂಡಿ ಬಿದ್ದಿದೆ ಎಂದರೆ ಪ್ರಧಾನಿ ಮನೆ ರಸ್ತೆಯಲ್ಲೂ ಗುಂಡಿ ಬಿದ್ದಿದೆ ಎನ್ನುತ್ತಾರೆ. ಶಾಸಕರಿಗೆ ಒಂದು ರೂ.ಹಣವನ್ನ ಸರ್ಕಾರ ಬಿಡುಗಡೆಮಾಡಲಿಲ್ಲ ಎಂದು ದೂರಿದರು. ಖಾಲಿ ಖಾಲಿ ಖಜಾನೆ ಖಾಲಿ ಎಂಬ ಘೋಷಣೆ ಕೂಗಲಾಯಿತು. 

ಶಾಸಕ ಚೆನ್ನಬಸಪ್ಪ ಮಾತನಾಡಿ, ಸರ್ಕಾರದ ವಿರುದ್ಧ ನಾಗರೀಕರ ಪರ ಆಡಳಿತ ಕೊಡುವುದಾಗಿ ಹೇಳಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ನಾಗರೀಕರಿಗೆ ಸಮಸ್ಯೆ ಆಗುವ ಬಗ್ಗೆ ಗಮನ ಹರಿಸದೆ ಇರುವ ಸ್ಥಿತಿಗೆ ಸಿಎಂ ತಲುಪಿದ್ದಾರೆ ಎಂದು ದೂರಿದರು.

ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ, ಗಣಪತಿ ಹಬ್ಬಕ್ಕೆ ನಿರ್ಬಂಧಿಸಿ ಈದ್ ಮೆರವಣಿಗೆಯಲ್ಪಿ ತಲ್ವಾರ್ ಪ್ರದರ್ಶನ ಮಾಡಲು ಕುಮ್ಮಕ್ಕು ನೀಡಿದೆ. ಗಣೇಶ ಉತ್ಸವಕ್ಕೆ 57 ಎಫ್ಐಆರ್ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳು ಅಸಾಹಕತೆ ವ್ಯಕ್ತಪಡಿಸಿದ್ದಾರೆ. ರಕ್ಷಣ ವ್ಯವಸ್ಥೆಯ ಮೂಲಕ ಕಾಂಗ್ರೆಸ್ ನೀತಿ ಜಾರಿಯಾಗುತ್ತದೆ. ಅಭಿವೃದ್ಧಿ ಮಾಡಲು ತಾಕತ್ತಿಲ್ಲ. ಗ್ಯಾರೆಂಟಿ ಜಾರಿಗೊಳಿಸಲು ಆಗುತ್ತಿಲ್ಲ. ಬಿಪಿಎಲ್ ಕಾರ್ಡನ್ನ ಎಪಿಎಲ್ ಕಾರ್ಡ್ ಮಾಡುತ್ತಿದ್ದೀರ. ಬಡವರ ರಕ್ತ ಹೀರುತ್ತಿದ್ದೀರಿ ಎಂದು ದೂರಿದರು. 

ಜನಗಣತಿ ಸಂದರ್ಭಲ್ಲಿ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಬರೆಯಿಸಲು ಸರ್ಕಾರ ಮುಂದಾಗಿದೆ. ಬಡವರ ಮೇಲೆ ಬರೆಹಾಕುವ ಕೆಲಸ ಮಾಡುತ್ತಿದೆ ಜಿಎಸ್ ಟಿ ದರ ಇಳಿಸಿದ ಮೋದಿಯವರ ತೀರ್ಮಾನವನ್ನ ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ ಎಂದು ದೂರಿದರು. 

ಪ್ರತಿಭಟನೆಯಲ್ಲಿ ಬಿಜೆಪಿ ನಗರ ಅಧ್ಯಕ್ಷ‌ಮೋಜನ್ ರೆಡ್ಡಿ, ಆರ್ ಕೆ ಸಿದ್ದರಾಮಣ್ಣ, ಧೀಬ್ ದಯಾಳು, ಸುರೇಖಾ ಮುರಳೀಧರ್, ಅಣ್ಣಪ್ಪ, ಜ್ಞಾನೇಂದ್ರ ಮೊದಲಾದವರು  

ಬಸ್ ತಡೆದು ಪ್ರತಿಭಟನೆ

ಶಿವಮೊಗ್ಗ-ಹರಿಹರ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಡೆ ತಿರುಗಿಸಲು ಮುಂದುವರೆಯಲು ಮುಂದಾಗಿತ್ತು. ಅಶೋಕ ವೃತ್ತದಲ್ಲಿ ಬಿಜೆಪಿ ರಸ್ತೆ ತಡೆ ನಡೆಸುತ್ತಿದ್ದ ವೇಳೆ ಬಸ್ ಪ್ರತಿಭಟನಾಕಾರರನ್ನ ತಪ್ಪಿಸಿಕೊಂಡು ಮುಂದಾದ ಕಾರಣ ಪ್ರತಿಭಟನಾಕಾರರು ತಡೆದರು. 

BJP road block protest against road pothole



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close