SUDDILIVE || SHIVAMOGGA
ಶಿವಮೊಗ್ಗದ ಆದಿಶಕ್ತಿ ಮೋಟಾರ್ ನಲ್ಲಿ ಹೇರಿಯರ್ ಇವಿ ಲಾಂಚ್-Harrier EV launched at Adi Shakti Motors
ಶಿವಮೊಗ್ಗದ ಆದಿಶಕ್ತಿ ಟಾಟಾ ಶೋರೂಮ್ ನಲ್ಲಿ ಹೇರಿಯರ್ ಇವಿ ವಾಹನವನ್ನ ಲಾಂಚ್ ಮಾಡಲಾಯಿತು. ಹೊಸದಾಗಿ ಮಾರುಕಟ್ಟೆಗೆ ಬಂದ ಹೇರಿಯರ್ ಇವಿ ಹೊಸ ಫ್ಯೂಚರ್ ನೊಂದಿಗೆ ಬಂದಿದೆ. ಈ ಹೊಸ ಕಾರನ್ನ ಕಾಂಗ್ರೆಸ್ ನ ಹೆಚ್ ಸಿ ಯೋಗೀಶ್ ಮತ್ತು ಆರ್ ಟಿ ಒ ಅಧಿಕಾರಿ ಮುರುಗೇಶ್ ಚಾಲನೆ ನೀಡಿದ್ದಾರೆ.
ವಿತೌಟ್ ಡ್ರೈವರ್ ಇಲ್ಲದೆ ಶೊರೂಮ್ ಒಳಗೆ ಚಲಿಸುವುದನ್ನ ತೋರಿಸುವ ಮೂಲಕ ಹೇರಿಯರ್ ಗೆ ಚಾಲನೆ ದೊರೆತಿದೆ. ಸಮ್ಮನ್ ಮೋಡ್ ನಲ್ಲಿ ಚಲಿಸುವ ಈ ವಾಹನ ಪಾರ್ಕಿಂಗ್ ವೇಳೆ ಅನುಕೂಲವಾಗಲಿದೆ. ಚಾಲಕನಿಲ್ಲದೆ ಹಿಂದೆ ಮುಂದೆ ಚಲಿಸಲಿದೆ. ಟಾಟಾ ಹೇರಿಯರ್ ಇವಿ ವಾಹನ ಬೇಸಿಕ್ ಮಾಡೆಲ್ 21 ಲಕ್ಷದ 99 ಸಾವರೂವಿನಿಂದ ದೊರೆಯಲಿದೆ.
ಎರಡು ಬ್ಯಾಟರಿಯಲ್ಲಿ ವಾಹನ ಲಭ್ಯವಿದೆ. 65 ಕಿಲೋ ವ್ಯಾಟ್ ಮತ್ತು 75 ಕಿಲೋ ವ್ಯಾಟ್ ಬ್ಯಾಟರಿಯಲ್ಲಿ ದೊರೆಯುತ್ತದೆ. ಸಿಂಗಲ್ ಚಾರ್ಜ್ ನಲ್ಲಿ ದೊರೆಯುವ ಈ ವಾಹನ, 65 ಕಿಲೋವ್ಯಾಟ್ ಬ್ಯಾಟರಿಗೆ 538 ಕಿಮಿ ಚಲಿಸುತ್ತದೆ. 600 ಕಿಲೋವ್ಯಾಟ್ 75 ಕಿಲೋ ವ್ಯಾಟ್ ವಾಹನಕ್ಕೆ ದೊರೆಯುತ್ತದೆ.
ಲೆವೆಲ್ ಟು ಪ್ಲಸ್ ಅಡಾಸ್( ಅಂದರೆ, ಅಡಾಸ್ ಡ್ರೈವರ್ ಅಸಿಸ್ಟೆಂಟ್ ಡ್ರೈವರ್) ವಿತೌಟ್ ಡ್ರೈವರ್ 1 ಸಿಆರ್ ವಾಹನದಲ್ಲಿ ಸಮ್ಮನ್ ಮೋಡ್ ಸಿಗುತ್ತೆ. ಆಟೋ ಪಾರ್ಕಿಂಗ್ ಮಾಡಬಹುದಾಗಿದೆ. 0-100 ಕಿಲೋ ಮೀಟರ್ ಸ್ಪೀಡ್ ಗೆ ಎರಡು ಮೂರು ನಿಮಿಷದಲ್ಲಿ ತಲುಪಬಹುದಾಗಿದೆ.
ಎಲ್ಲಾ ವಾಹನಗಳಲ್ಲಿ 360 ಡಿಗ್ರಿ ಕ್ಯಾಮೆರಾ ಅಳವಡಿಸಿದರೆ ಹ್ಯಾರಿಯರ್ ಇವಿಯಲ್ಲಿ 540 ಡಿಗ್ರಿ ಕ್ಯಾನೆರಾ ಅಳವಡಿಸಲಾಗಿದೆ. ಚಾಸಿ ಅಂಡರ್ ನಲ್ಲಿ ಕ್ಯಾಮೆರಾದಲ್ಲಿ ಸಿಗುತ್ತೆ. ಡಾಲಿಬಿ ಸಿಸ್ಟಮ್ ಸೌಂಡ್ ಸಿಸ್ಟಮ್ ಇದೆ. ಆಲ್ ವೀಲ್ ಡ್ರೈವ್ ಇದೆ. ಗುಂಡಿ ಹತ್ತಿಬಿಳಿಸಬಹುದಾಗಿದೆ. ಎಲಿಫ್ಯಾಂಟ್ ರಾಕ್ ನ್ನ ಹತ್ತಿಸಿದ ಕೀರ್ತಿಬೀ ವಾಹನಕ್ಕೆ ನೀಡ ಹತ್ತಿಸಲಾಗಿದೆ
ಹೆಚ್ ಸಿ ಯೋಗೀಶ್ ಮಾತನಾಡಿ, ಟಾಟಾ ಮತ್ತು ಬಜಾಜ್ ದೇಶದ ಸಂಸ್ಥೆಗಳು, 1 ಲಕ್ಷದಿಂದ 2 ಕೋಟಿ ವಾಹನಗಳನ್ನ ಟಾಟಾ ಹೊಂದಿದೆ. ಟಾಟಾ ಇಂಡಿಗೋ ಹೆಚ್ಚು ಹೆಸರುವಾಸಿಯಾಗಿತ್ತು. ಕ್ವಾಲಿಸ್ ಸಫಾರಿ ನಂತರ ರೇಂಜ್ ರೋವರ್ ಕಾರುಗಳು ಐತಿಹಾಸಿಕತೆಯನ್ನ ನಿರ್ಮಿಸಿದೆ. ಇದಕ್ಕೆ ಸೆ.22 ರಿಂದ ಜಿಎಸ್ ಟಿ ವ್ಯತ್ಯಾಯವಾಗುವುದಿಲ್ಲ.
ಪೆಟ್ರೋಲ್ ರೇಟ್ ಹೆಚ್ಚಾದರೂ ಕಾರು ಉತ್ಪಾದಿತ ಕಂಪನಿಗಳು ಎದೆಗುಂದಲಿಲ್ಲ. ಕಿಲೋ ಮೀಟರ್ ಗಳ ಮೈಲೇಜ್ ಹೆಚ್ಚಿಸಿ ಸ್ಪರ್ಧೆಗೆ ಇಳಿದಿದ್ದವು. ಹಣವಂತರಾದರೂ ಕರ್ಚು ಮಾಡಲು ಹಿಂದು ಮುಂದಾಗುತ್ತಿತ್ತು. ಇವಿ ವಾಹನಗಳ ಚಾರ್ಜಿಂಗ್ ಪಾಯಿಂಟ್ ಆರಂಭದಿಂದಾಗಿ ವಿದ್ಯುತ್ ಚಾಲಿತ ವಾಹನಗಳು ದಿಕ್ಕನ್ನೇ ಬದಲಿಸಿದೆ. ಇವಿ ಒಂದು ಕಿಮಿಗೆ 1 ರೂ. ಕರ್ಚಾಗಲಿದೆ. ಈ ವಾಹನ ಪ್ರಕೃತಿ ಹಾನಿಯನ್ನೂ ತಡೆಯುತ್ತದೆ ಎಂದರು.
ಆರ್ ಟಿಒ ಕಚೇರಿಯ ಅಧಿಕಾರಿ ಮುರುಗೇಶ್ ಮಾತನಾಡಿ ಇವಿ ವಾಹನಗಳಿಗೆ ರಸ್ತೆ ತೆರಿಗೆ ಉಚಿತವಾಗಿದೆ ಎಂದರು.
Harrier EV launched at Adi Shakti Motors