SUDDILIVE || BHADRAVATHI
ಡಿಕೆಶಿ ಉನ್ನತ ಹುದ್ದೆಗೆ ಹೋಗಲಿದ್ದಾರೆ ಎಂಬ ಸಚಿವ ಮಲ್ಲಿಕಾರ್ಜುನರ ಅರ್ಥವೇನು?What does Minister Mallikarjuna mean by DKESHI going to a higher position?
ಭದ್ರಾವತಿಯ ಬಿಆರ್ ಪಿಯಲ್ಲಿ ಇಂದು ದಾವಣಗೆರೆ ಜಿಲ್ಲೆಯ ಶಾಸಕರು ಮತ್ತು ಸಚಿವರು ಸಂಸದರೆಲ್ಲ ಬಾಗಿನ ಅರ್ಪಿಸಲು ಬಂದಿದ್ದರು. ಈ ವೇಳೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರ ಹೇಳಿಕೆ ಗಮನಸೆಳೆದಿದೆ.
ಈ ಹೇಳಿಕೆ ಸರ್ಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ನಲ್ಲಿ ಚುಕ್ಕಾಣಿ ಹಿಡಿದಿರುವ ಸಿಎಂ ಬದಲಾವಣೆ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗೆ ಹೋಗಲಿದ್ದಾರೆ ಎಂಬ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ಸೆಪ್ಟಂಬರ್ ಕ್ರಾಂತಿ ಆಗಲಿದೆ ಎಂಬ ಮಾಜಿ ಸಚಿವ ರಾಜಣ್ಣ ರಾಹುಲ್ ಗಾಂಧಿ ಅವರ ಮತಗಳ್ಳತನದ ಹೋರಾಟದ ಬಗ್ಗೆ ಮಾತನಾಡಿ ಸಚಿವ ಸ್ಥಾನಕಳೆದುಕೊಂಡಿದ್ದರು.
ಅನೇಕ ಶಾಸಕರು ಮತ್ತು ಸಚಿಚರು ತಮ್ಮ ತಮ್ಮನಾಯಕರ ಪರ ಹೇಳಿಕೆ ಕೊಟ್ಟುಕೊಂಡು ಬರುತ್ತಿದ್ದು ಡಿಕೆಶಿಗೆ ಸಿಎಂ ಸ್ಥಾನ ಸಿಗುತ್ತೆ ಅಥವಾ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂಬ ಹೇಳಿಕೆ ನಡುವೆ ಎಸ್ ಎಸ್ ಮಲ್ಲಿಕಾರ್ಜುನ ಅವರು ಡಿಕೆಶಿ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗೆ ಹೋಗಲಿದ್ದಾರೆ ಎಂಬ ಹೇಳಿಕೆ ಈ ಚರ್ಚೆಗೆ ಮತ್ತೊಂದಿಷ್ಟು ಪುಷ್ಠಿ ನೀಡಿದೆ.
ನಂತರ ಮಾಧ್ಯಮದವರು ನಿಮ್ಮ ಅಭಿಮಾನಿಗಳು ಸಿಎಂಆಗಲಿ ಎಂದು ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ ಎಂದು ಹೇಳಿದ ತಕ್ಷಣವೇ ಮಾತನಾಡದೆ ಡಿಕೆಶಿ ಹೋಗುವಾಗ ಜೊತೆಯಲ್ಲಿದ್ದ ಎಸ್ ಎಸ್ ಮಲ್ಲಿಕಾರ್ಜುನ ಅವರು ನಾನು ಆವಾಗ ಅದನ್ನೇ ಹೇಳಿದ್ದು ಎಂದು ಹೇಳುವ ಮೂಲಕ ಈ ಚರ್ಚೆಯನ್ನ ಜೀವಂತವಾಗಿ ಇಟ್ಟಿದ್ದಾರೆ.
What does Minister Mallikarjuna mean by DKESHI going to a higher position?
