SUDDILIVE || SHIVAMOGGA
ಮದ್ಯ ಸೇವಿಸಿ ಕಾರು ಚಲಾವಣೆ? ಮಹಾವೀರ ವೃತ್ತದ ಬಳಿ ಮೂರು ವಾಹನಕ್ಕೆ ಡಿಕ್ಕಿ-Driving under the influence of alcohol?
ಕುಡಿದ ನಶೆಯಲ್ಲಿ ಕಾರೊಂದನ್ನ ಚಲಾಯಿಸಿಕೊಂಡು ಸರಣಿ ಅಪಘಾತ ಮಾಡಿ ನಂತರ ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ.
ನೆಹರೂ ರಸ್ತೆಯ ರಾಂಗ್ ಸೈಡ್ ನ ಅನುಮೋಲ್ ಕಡೆಯಿಂದ ಬೊಲೇನೋ ಕಾರೊಂದು ಚಲಾಯಿಸಿಕೊಂಡ ಬಂದ ವ್ಯಕ್ತಿ ಗೋಪಿವೃತ್ತದ ಬಳಿ ಸಂಚಾರಿಪೊಲೀಸರು ತಡೆದರೂ ಸಹ ಅವರನ್ನ ಬೈಪಾಸ್ ಮಾಡಿಕೊಂಡು ಜೋಯ್ ಅಲ್ಯುಕಾಸ್ ಬಳಿ ಟಿವಿಎಸ್ ನಲ್ಲಿ ಹೋಗುತ್ತಿದ್ದ ಮುತ್ತು ಎಂಬುವರಿಗೆ ಅಪಘಾತಪಡಿಸಿದ್ದಾನೆ.
ನಂತರ ಮಹಾವೀರ ವೃತ್ತ ತಲುಪದರ ಒಳಗೆ ಇಬ್ಬರು ಮೂವರಿಗೆ ಗಾಯಪಡಿಸಿದ್ದಾನೆ. ನಂತರ ಬಾಲರಾಜ್ ಅರಸ್ ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿ ಮುಂದೆ ಆಟೋ, ಕಾರು ಮತ್ತು ಬಸ್ ಗೆ ಡಿಕ್ಕಿ ಪಡಿಸಿದ್ದಾನೆ.
ಈ ವೇಳೆ ಸಾರ್ವಜನಿಕರು ಈ ಕಾರು ಚಾಲಕ ದರ್ಪದಿಂದ ಬೇಸತ್ತು ಮುತ್ತಿಕೊಂಡಿದ್ದಾರೆ. ಮದ್ಯ ಸೇವಿಸಿ ಚಲಾಯಿಸಿ ಅಪಘಾತ ಪಡಿಸಿರುವುದಾಗಿ ಸಾರ್ವಜನಕರು ಆರೋಪಿಸಿದ್ದಾರೆ. ಆತನನ್ನ ಮತ್ತು ವಾಹನವನ್ನ ಪೂರ್ವ ಸಂಚಾರಿ ಪೊಲೀಸ್ ಠಾಣೆಗೆ ಸಾಗಿಸಲಾಗಿದೆ. ಅಪಘಾತಪಡಿಸಿದ ವ್ಯಕ್ತಿಯನ್ನ ಹೊನ್ನಾಳಿಯ ಕುಮಾರ್ ಎಂದು ಗುರುತಿಸಲಾಗಿದೆ.
Driving under the influence of alcohol?