ad

ಹಾವುಗಳನ್ನ‌ ಹಿಡಿದು ವಿಕೃತ ಮೆರೆದವನ ಮನೆಯ ಮೇಲೆ ದಾಳಿ, ಪ್ರಕರಣ ದಾಖಲು-House of man who caught snakes and performed perverted acts attacked, case registered

SUDDILIVE || SHIVAMOGGA

ಹಾವುಗಳನ್ನ‌ ಹಿಡಿದು ವಿಕೃತ ಮೆರೆದವನ ಮನೆಯ ಮೇಲೆ ದಾಳಿ, ಪ್ರಕರಣ ದಾಖಲು-House of man who caught snakes and performed perverted acts attacked, case registered

Snakes, caught

ಶಿವಮೊಗ್ಗ ಜಿಲ್ಲೆಯ ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ಮೂರು ಹೆಬ್ಬಾವು ಒಂದು ನಾಗರ ಹಾವಿನ ಜೊತೆ ವಿಕೃತ ಮೆರದು ಸೆಲ್ಫಿ ತೆಗೆದುಕೊಂಡ ಘಟನೆ ನಡೆದಿದ್ದು ಆತನ ಮಬೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು FIR ದಾಖಲಿಸಿಕೊಂಡಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಆಗುಂಬೆ ಮಳೆ ಕಾಡಿನಲ್ಲಿ ಕಾಳಿಂಗ ಸರ್ಪಗಳ ಮೇಲೆ ಹಿಂಸೆ ,ಅವುಗಳ ಅಕ್ರಮ ಬಂಧನ ಫೋಟೋ ಶೂಟ್ ,ವಿಡಿಯೋ ತುಣುಕುಗಳು ಚಿತ್ರೀಕರಣ ನಡೆಯುತ್ತಿರುವ ದೂರುಗಳು ಬಂದಿತ್ತು, ಇದು ಮಾಸುವ ಮುನ್ನವೇ ಇಂದು ಸೋಮವಾರ ಬೆಳಿಗ್ಗೆ ಶಿವಮೊಗ್ಗದ, ಮತ್ತೂರು ರಸ್ತೆಯ ಮಳಲಿಕೊಪ್ಪದಲ್ಲಿ ಕೆಲವರು ಮೂರು ಹೆಬ್ಬಾವು ಮತ್ತು ಒಂದು ನಾಗರಹೆಬ್ವಾವು ಗಳನ್ನು ಹಿಡಿದು ಕೊಂಡು ಅವುಗಳಿಗೆ ಹಿಂಸೆ ನೀಡುತ್ತಾ, ಫೋಟೋ ಶೂಟ್ ,ವಿಡಿಯೋ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು,

ಅವುಗಳ ಬಾಯಿಗೆ ಪ್ಲಾಸ್ಟರ್ ಹಾಕಿ ಬಂದ್ ಮಾಡಿ, ವಿಕೃತವಾಗಿ ವರ್ತಿಸುತ್ತಾ ವಿಲಕ್ಷಣವಾಗಿ ಹಾವುಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವ ದೃಶ್ಯಗಳು ಅಮಾನವೀಯವಾಗಿ ಕಂಡುಬಂದಿದ್ದವು. ಹೆಬ್ಬಾವು ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಶೆಡ್ಯೂಲ್ 1 ಗೆ ಸೇರಿದ ಉರಗವಾಗಿದೆ, ಈ ರೀತಿ ಮಾಡಲು ಅವಕಾಶ ಇಲ್ಲವಾಗಿದ್ದು,ಇದು ಕಾನೂನು ಉಲ್ಲಂಘನೆ ಮತ್ತು ಬೇಟೆ ಪ್ರಕರಣ ಆಗಿದೆ. 


ಮಳಲಿಕೊಪ್ಪದ ಇರ್ಫಾನ್ ಮತ್ತು ಮೂವರ ವಿರುದ್ಧ ದೂರು ದಾಖಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆಯವರು ಆತನ ಸಂಜೆ 4 ಗಂಟೆ ವೇಳೆಗೆ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಕೆಲ ಚೀಲದಲ್ಲಿ ಹಾವುಗಳನ್ನ ಕಟ್ಟಿಡಲಾಗಿದ್ದು ಅಧಿಕಾರಿಗಳು ವಶಕ್ಕೆ ಪಡೆದು ಆತನ ವಿರುದ್ಧ ದೂರು ದಾಖಲಾಗಿದೆ. ಇರ್ಫಾನ್ ಉರುಗ ತಜ್ಞರೆಂದು ಹೇಳಲಾಗುತ್ತಿದ್ದು ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಬೇಕಿದೆ. 

House of man who caught snakes and performed perverted acts attacked, case registered

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close