SUDDILIVE || BHADRAVATHI
ವಿಜೃಂಭಣೆಯೊಂದಿಗೆ ವಿಸರ್ಜನೆಗೊಂಡ ಗಾಂಧಿನಗರದ ಓಂಗಣಪತಿ-Gandhinagar's Omganapati dissolved with pomp
ಭದ್ರಾವತಿಯ ಗಾಂಧಿನಗರದ ಓಂ ಗಣಪತಿ ವಿಸರ್ಜನೆ ಮಾಡಲಾಗಿದೆ. 18 ದಿನಗಳ ಬಳಿಕ ಗಣಪತಿಯನ್ನ ನಿನ್ನೆ ಗಂಗಾರತಿಯೊಂದಿಗೆ ವಿಸರ್ಜಿಸಲಾಯಿತು.
ಗಾಂಧಿನಗರ ಚರ್ಚ್ ಹಿಂಭಾಗದಿಂದ ಪ್ರಾರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಸಾಗಿ ಕೊನೆಯಲ್ಲಿ ಗಂಗಾರತಿಯೊಂದಿಗೆ ಮುಳುಗು ಸೇತುವೆ ಬಳಿ ಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
24 ನೇ ವರ್ಷದ ಓಂಗಣಪತಿಯನ್ನ ನಿನ್ನೆ ವಿಸರ್ಜಿಸಲಾಗಿದೆ. ಭಾರಿ ಮೆರವಣಿಗೆ, ಗಂಗಾರತಿಯೊಂದಿಗೆ ಗಣಪನನ್ನ ಬೀಳ್ಕೊಟ್ಟಿರುವುದು ಆಕರ್ಷಣೀಯವಾಗಿತ್ತು.
Omganapati dissolved with pomp