ad

ಎರಡು ರಾಷ್ಟ್ರೀಯ ಪಕ್ಷಗಳಿಂದ ಪ್ರಧಾನಿ ಮೋದಿಯವರ ವಿಭಿನ್ನ ಹುಟ್ಟುಹಬ್ಬ ಆಚರಣೆ-PM Modi's birthday celebrations differ between two national parties

 SUDDILIVE || SHIVAMOGGA

ಎರಡು ರಾಷ್ಟ್ರೀಯ ಪಕ್ಷಗಳಿಂದ ಪ್ರಧಾನಿ ಮೋದಿಯವರ ವಿಭಿನ್ನ ಹುಟ್ಟುಹಬ್ಬ ಆಚರಣೆ-PM Modi's birthday celebrations differ between two national parties

Modi, Birthday


ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನ ಎರಡು ರಾಷ್ಟ್ರೀಯ ಪಕ್ಷಗಳು ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿವೆ. ಒಂದು ಪಕ್ಷ ರಕ್ತದಾನ, ವಿಶೇಷ ಪೂಜೆಗಳಿಂದ ಹುಟಗಟುಹಬ್ಬವನ್ನ ಆಚರಿಸಿದರೆ ಮತ್ತೊಂದು ಪಕ್ಷ ನಿರುದ್ಯೋಗ ದಿನವೆಂದು ಆಚರಿಸಿದೆ. 

ಸೆ.17 ರಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನ ಬಿಜೆಪಿ  ಸಂಸದರ ನೇತೃತ್ವದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿದರು. ತುಂಗನಗರ PH2 ಸೆಂಟರ್ ನಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನ ನಡೆಸಿದ್ದಾರೆ. 


ಇದೇ ವೇಳೆ ಯುವ ಕಾಂಗ್ರೆಸ್ ನಗರದ ಬಸ್ ನಿಲ್ದಾಣದಲ್ಲಿ ಪ್ರಧಾನಿ ಮೋದಿಗೆ ವಿಶೇಷ ಶುಭಕೋರಿದೆ. ಸೆ.17 ರನ್ನ ನಿರುದ್ಯೋಗ ದಿನವೆಂದು ಕರೆಯಬೇಕು ಎಂದು ಬ್ಯಾನರ್ ಕಟ್ಟಲಾಗಿದೆ. ಪಕೋಡ ಮಾರಿ ಉದ್ಯೋಗ ಮಾಡುವಂತೆ ಕರೆ ನೀಡಿದ ಪ್ರಧಾನಿ ಮೋದಿಗೆ ಟಾಂಗ್ ನೀಡಿದ ಪಕ್ಷ ಬೋಂಡಾ, ತರಕಾರಿ, ಚಹ ಮತ್ತು ಪೇಪರ್ ಮಾರಾಟ ಮಾಡುವ ಮೂಲಕ ಪ್ರಧಾನಿಯನ್ನ  ಟೀಕಿಸಿದೆ. 

ಈ ವೇಳೆ ಮಾತನಾಡಿದ ಹೆಚ್ ಸಿ ಯೋಗೀಶ್ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ನೋಟ್ ಬ್ಯಾನ್, ಯೋಗಾಸನ, ಹಣದುಬ್ಬರ, ಪಕೋಡ ಮಾರಾಟ ಹೀಗೆ ಉದ್ಯೋಗ ಸೃಷ್ಠಿ ಮಾಡದೆ ಯುವಕರನ್ನ ದಾರಿ ತಪ್ಪಿಸಲಾಗಿದೆ.  ಹಿಂದೂಯುವಕರಿಗೆ ತ್ರಿಶೂಲ ಕೊಟ್ಟು ಇದರಿಂದಲೇ ಉದ್ಯೋಗ ಮಾಡಿ ಎಂದರು.  ಸಿಂದೂರ ಅಳಿಸಿದವರಿಗೆ ನ್ಯಾಯಕೊಡದೆ ದೇಶವನ್ನ  ದರಿದ್ರ ತನಕ್ಕೆ ಎಳೆದೊಯ್ದ ದರಿದ್ರ ದಾಮೋದರ ಮೋದಿ ಕೆಳಗಿಳಿದು ಈ ದೇಶಕ್ಕೆ ಹೊಸ ಪ್ರಧಾನಿ ನೋಡುವಂತಾಗಲಿ ಎಂದರು. 


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಉತ್ತರ ಬ್ಲಾಕ್ ಅಧ್ಯಕ್ಷಶಿವಕುಮಾರ್, ಯುವ ಮುಖಂಡರಾದ ಮಧುಸೂದನ್, ಚೇತನ್  ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಚರಣ್, ಬ್ಲಾಕ್ ಅಧ್ಯಕ್ಷರಾದ ಗಿರೀಶ್, ಪ್ರವೀಣ, ಶಶಿಕುಮಾರ್, ಸಕ್ಲೇನ್, ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಸತ್ತಾರ್, ಮಲಗುಪ್ಪ ಶಿವು, ಆಕಾಶ್, ತೌಪಿಕ್, ರೇಷ್ಮಾ, NSUI ಜಿಲ್ಲಾಧ್ಯಕ್ಷ ವಿಜಯ್ , ಜಿಲ್ಲಾ ಕಾರ್ಯಧ್ಯಕ್ಷ  ರವಿಕಟಿಕೆರೆ, ನಗರ ಅಧ್ಯಕ್ಷರ ರವಿ, ಸುಭಾನ್, ಚಂದ್ರ ಜಿ ರಾವ್, ವರುಣ್ ವಿ ಪಂಡಿತ್, ಆದಿತ್ಯ, ನಂದೀಶ್, ಶ್ರೀಕಾಂತ ಹಾಗೂ ಇತರರು ಉಪಸ್ಥಿತರಿದ್ದರು. 

PM Modi's birthday celebrations differ between two national parties

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close