SUDDILIVE. || SHIVAMOGGA
ಸೆ.27 ಕುಂಸಿ, ಆಯನೂರು, ಆಲ್ಕೊಳ ಮತ್ತು ಜೆಹೆಚ್ ಬಡಾವಣೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ-Power outage in Kumsi, Ayanur, Alkola and JH Layout areas on September 27th
ಸೆ.27 ರಂದು ಕುಂಸಿ ಆಯನೂರು ಮತ್ತು ನಗರದ ಆಲ್ಕೊಳ ವೃತ್ತ ಮತ್ತು ಜೆಹೆಚ್ ಬಡಾವಣೆ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.
ಕುಂಸಿ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ
ಶಿವಮೊಗ್ಗ ತಾಲ್ಲೂಕು ಕುಂಸಿ ಗ್ರಾಮದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಾಗೂ ತುರ್ತು ಕಾಮಗಾರಿಯನ್ನು ನಿರ್ವಹಿಸುವುದರಿಂದ ಸೆ.27 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ಕುಂಸಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜಾಗುವ ಹಳ್ಳಿಗಳಾದ ಕುಂಸಿ, ಬಾಳೆಕೊಪ್ಪ, ಚೋರಡಿ, ತುಪ್ಪೂರು, ಕೋಣಿಹೂಸೂರು, ಹೊರಬೈಲು, ಶೆಟ್ಟಿಕೆರೆ, ರೇಚಿಕೊಪ್ಪ ಇನ್ನಿತರೆ ಸುತ್ತಮುತ್ತಲ ಹಳ್ಳಿಗಳು ಹಾಗೂ ಹಾರಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವಬಾಳು. ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ ಇನ್ನಿತರೆ ಸುತ್ತಮುತ್ತ ಗ್ರಾಮಗಳ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಆಯನೂರು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ
ಶಿವಮೊಗ್ಗ ತಾಲ್ಲೂಕು ಆಯನೂರು ಗ್ರಾಮದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಾಗೂ ತುರ್ತು ಕಾಮಗಾರಿಯನ್ನು ನಿರ್ವಹಿಸುವುದರಿಂದ ಸೆ.27 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಈ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಹಳ್ಳಿಗಳಾದ ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ. ಆಯನೂರು, ಮಂಡಘಟ್ಟ, ದೊಡ್ಡಮತ್ತಲಿ, ತಮ್ಮಡಿಹಳ್ಳಿ, ಮೈಸವಳ್ಳಿ, ಸೇವಾಲಾಲ್ ನಗರ, ವೀರಣ್ಣನಬೆನವಳ್ಳಿ, ಚನ್ನಹಳ್ಳಿ, ಇಟ್ಟಿಗೇಹಳ್ಳಿ, ಇನ್ನಿತರೆ ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಆಲ್ಕೊಳ ಮತ್ತು ಜೆಹೆಚ್ ಬಡಾವಣೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ
ಅಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜಾಗುವ ಫೀಡರ್ ಎ.ಎಫ್-12, ಎ.ಎಫ್-13 ಮತ್ತು ಎ.ಎಫ್-19 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.27 ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.
ಆಲ್ಕೋಳ, ಗಜಾನನ ಲೇಔಟ್, ಹಾಲಪ್ಪ ಲೇಔಟ್, ಫಕಿರಪ್ಪ ಲೇಔಟ್, ವಿಕಾಸ ಶಾಲೆ, ಐಶ್ವರ್ಯ ಲೇಔಟ್, ಮುನಿಯಪ್ಪ ಲೇಔಟ್, ಕನಕ ಲೇಔಟ್, ವೆಟರ್ನರಿ ಕಾಲೇಜು ರಸ್ತೆ, ಜಿ.ಹೆಚ್.ಪಟೇಲ್ ಬಡಾವಣೆ ಎ ಯಿಂದ ಎಫ್ ಬ್ಲಾಕ್, ಸಂಗೊಳ್ಳಿ ರಾಯಣ್ಣ ಲೇಔಟ್, ರವಿಶಂಕರ್ ಗುರೂಜಿ ಶಾಲೆ, ತಮಿಳು ತಾಯ್ ಭವನ, ಹೊಂಗಿರಣ ಬಡಾವಣೆ, ಸಹಕಾರಿ ನಗರ, ಸಹ್ಯಾದ್ರಿ ನಗರ, ಸೋಮಿನಕೊಪ್ಪ, ಆಟೋ ಕಾಲೋನಿ, ಮಧ್ವನಗರ, ವಿಜಯಲಕ್ಷ್ಮೀ ಲೇಔಟ್, ಪುಷ್ಪಗಿರಿ ಲೇಔಟ್, ಎಂಎಂಎಸ್ ಭೋವಿ ಕಾಲೋನಿ, ಆದರ್ಶ ನಗರ, ರಾಜೇಶ್ ಲೇಔಟ್, ಗೆಜ್ಜೇನಹಳ್ಳಿ, ಹನುಮಂತ ನಗರ, ದೇವಕಾತಿ ಕೊಪ್ಪ, ಅಂಬೇಡ್ಕರ್ ಕ್ಯಾಂಪ್, ಶಿವಸಾಯಿ ಕಾರ್ಖಾನೆ, ಶರ್ಮ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Power outage in Kunsi, Ayanur, Alkola and JH Layout areas on September 27th