SUDDILIVE || SHIVAMOGGA
ಪೌರಕಾರ್ಮಿಕ ದಸರಾದಲ್ಲಿ ಧೂಳೆಬ್ಬಿಸಿದ ಆಯುಕ್ತ ಮಾಯಣ್ಣ ಗೌಡ-Super steps from commissioner Mayanna Gowda
ದಸರಾ ಅಂಗವಾಗಿ ಇಂದು ಪಾಲಿಕೆಯ ಪೌರ ಕಾರ್ಮಿಕರ ದಸರಾ ನಡೆದಿದೆ. ಪೌರ ಕಾರ್ಮಿಕರ ದಸರಾದಲ್ಲಿ ಆಯುಕ್ತರು ಸಕ್ಕತ್ ಸ್ಟೆಪ್ಸ್ ಇಟ್ಟು ಧೂಳೆಬ್ಬಿಸಿದ್ದಾರೆ. ಪೌರ ಕಾರ್ಮಿಕರ ಮೆರವಣಿಗೆಯಲ್ಲಿ ಆಯಕ್ತ ಮಾಯಣ್ಣ ಗೌಡ ತಮಟೆಯ ಹೊಡೆತಕ್ಕೆ ಸಕ್ಕತ್ ಡ್ಯಾನ್ಸ ಮಾಡಿದ್ದಾರೆ.
ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಹೊರಟ ಪೌರಕಾರ್ಮಿಕರ ದಸರಾ ಮೆರವಣಿಗೆಯು ಶಿವಪ್ಪ ನಾಯಕ ವೃತ್ತ, ಎಎ ವೃತ್ತ, ಗೋಪಿ ವೃತ್ತ, ಮೂಲಕ ಕುವೆಂಪು ರಂಗಮಂದಿರ ತಲುಪಲಿದೆ. ಮೆರವಣಿಗೆ ಶಿವಪ್ಪ ನಾಯಕ ವೃತ್ತದ ಬಳಿ ಬರುತ್ತಿದ್ದಂತೆ ತಮಟೆಯ ನಾದಕ್ಕೆ ಆಯುಕ್ತರು ಸಕ್ಕತ್ ನೃತ್ಯ ಮಾಡಿದ್ದಾರೆ.
ನಂತರ ತಮಟೆಯನ್ನ ಹೆಗಲೇರಿಸಿಕೊಂಡು ಪೈಜಾಮ ಧಿರಿಸನಲ್ಲಿದ್ದ ಆಯುಕ್ತರು ಸ್ಟೆಪ್ಸ್ ಹಾಕಿ ಧೂಳೆಬ್ಬಿಸಿದ್ದಾರೆ. ಆಯುಕ್ತರ ಈ ನತ್ಯ ಅನೇಕರ ಮನಸೂರೆಗೊಳಿಸಿದೆ.
Super steps from commissioner Mayanna Gowda
