SUDDILIVE || BHADRAVATHI
ತೇಲಿ ಬಂತು ಅಪರಿಚಿತ ಮಹಿಳೆಯ ಶವ-The body of an unidentified woman was found floating
ಭದ್ರಾ ಚಾನೆಲ್ ನಲ್ಲಿ ಅಪರಿಚಿತ ಶವವೊಂದು ತೇಲಿ ಬಂದಿದ್ದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಮಾರು 60-70 ವರ್ಷ ವಯಸ್ಸಿನ ಮಹಿಳೆ ದೇಹ ಭದ್ರಾ ಹೊಳೆಯಲ್ಲಿ ತೇಲಿ ಬಂದು ಭದ್ರಾವತಿ ನಗರಸಭೆ ಮುಂಭಾಗದಲ್ಲಿ ದೊರೆತಿದ್ದು, ಸದರಿ ಮಹಿಳೆ ಯು ಕೆಂಪು ಬಣ್ಣದ ಸೀರೆ, ಕಪ್ಪು ಬಣ್ಣದ ಜಾಕೆಟ್, ಸೊಂಟದಲ್ಲಿ ಡಾಬು, ಎಲೆ ಅಡಿಕೆ ಚೀಲ ಇದ್ದು, ಎಡಗೈ ಯಲ್ಲಿ ತಾಮ್ರದಂತಿರುವ ಬಳೆ,ತೋರು ಬೆರಳಿನಲ್ಲಿ ಉಂಗುರ ಕೊರಳಿನಲ್ಲಿ ರುದ್ರಾಕ್ಷಿ ಧರಿಸಿರುತ್ತಾಳೆ
ಮಹಿಳೆ ಬಗ್ಗೆ ಮಾಹಿತಿ ದೊರೆತಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸುವಂತೆ ಕೋರಿದೆ.
The body of an unidentified woman was found floating
