SUDDILIVE || BANGLORE
ಕರ್ನಾಟಕ ದ ಚಿರಾಪುಂಜಿ ಎಂದು ಖ್ಯಾತಿ ಪಡೆದ ಆಗುಂಬೆ ಸಮೀಪ ಅರಣ್ಯ ಭೂಮಿ ಲೂಟಿಗೆ ಹುನ್ನಾರ-The forest land near Agumbe, popularly known as Cherrapunji of Karnataka, is a hotbed for looting
ತೀರ್ಥಹಳ್ಳಿ ಬಿದರಗೋಡು ಸರ್ವೇ ನಂ 73ರಲ್ಲಿ ಸ್ಟೋನ್ ಕ್ರಷರ್ ( ಕಪ್ಪು ಕಲ್ಲು ಕ್ವಾರಿ ) ಆತಂಕ. ಇಲ್ಲಿ ಒಟ್ಟು 239 ಎಕರೆ ಜಮೀನಿದ್ದು, ಇದರಲ್ಲಿ 100 ಎಕರೆ ಪರಿಭಾವಿತ ಅರಣ್ಯವಿದೆ. ಇದನ್ನು ಗುರುತಿಸದೇ ಈ ಭೂಮಿಯಲ್ಲಿ 17 ಎಕರೆಯನ್ನು ಕ್ರಷರ್ ಗೆ ನೀಡಲು ಕಂದಾಯ & ಅರಣ್ಯ ಇಲಾಖೆ ಅಧಿಕಾರಿಗಳೇ ಆಸಕ್ತರಾಗಿದ್ದಾರೆ ಎಂಬುದು ಗ್ರಾಮಸ್ಥರ ಆತಂಕ. ಕಳೆದ ಹತ್ತು ವರ್ಷದಿಂದ ಅವಿರತ ಹೋರಾಟ ಮಾಡುತ್ತಾ ಬಂದಿದ್ದಾರೆ ನಿರತ ಬಿದರಗೋಡು ಜನರು, ಈ ಕುರಿತು ಮಾನ್ಯ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅವರ ಕಚೇರಿಗೂ ಪತ್ರ ಬರೆದಿದ್ದಾರೆ. ಅರಣ್ಯ ಭೂಮಿ ಉಳಿಸಲು ಸಚಿವರಿಗೆ ಮನವಿ ಮಾಡಿದ್ದಾರೆ.
ಬಿದರಗೋಡು ಗುಡ್ಡದಲ್ಲಿ ಅರಣ್ಯ ನಾಶ ಪ್ರಕರಣಗಳಿವೆ. ಸಮೀಪವೇ ಸೋಮೇಶ್ವರ ವೈಲ್ಡ್ ಲೈಫ್ ಪರಿಮಿತಿ ಇದೆ. ಆಗುಂಬೆ ನಿತ್ಯಹರಿದ್ವರ್ಣ ಕಾಡಿದೆ. ಪ್ರಾಣಿಗಳ ಓಡಾಟವಿದೆ. ಸುತ್ತಲ ಹಳ್ಳಿಯ ನೀರಿನ ಟ್ಯಾಂಕ್ ಎಂದೇ ಕರೆಯಲಾಗುತ್ತೆ. ದಶಕದ ಹಿಂದೆಯೇ ನಿಂತಿದ್ದ ಕ್ವಾರಿ ಪುನಾರಂಭಕ್ಕೆ ಇಲ್ಲಿದ್ದ ಅಮೂಲ್ಯ ಮರಗಳನ್ನು ಬಿಟೇ ಹಲಸು ಹಾಗೂ ಅನೇಕ ಔಷಧೀ ಸಸ್ಯೆಗಳನ್ನು ಲೂಟಿ ಮಾಡಿ, ಅರಣ್ಯ ಸ್ವರೂಪವನ್ನೇ ಬದಲಿಸಲಾಗಿದೆ.ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಕಾರ್ಯ ಮಾಡದೆ ಕಂದಾಯ ಇಲಾಖೆ ಯವರು ಲಾಬಿ ನಡೆಯುತ್ತಿದೆ ಹಾಗೂ ಪಕ್ಷಾತೀತ ಲಾಭಿ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
The forest land near Agumbe, popularly known as Cherrapunji of Karnataka, is a hotbed for looting

