SUDDILIVE || SHIVAMOGGA
ಅಚ್ಚರಿ ಉಂಟು ಮಾಡಿದ ಜೆಡಿಎಸ್ ಹೋರಾಟ- JDS' surprising fight
ಶಾಸಕಿಗೆ ಜಾತಿ ನಿಂದನೆಯಾದರೂ ದೂರು ದಾಖಲಾಗದೆ ಜೆಡಿಎಸ್ ಪ್ರತಿಭಟನೆಗೆ ಇಳಿದಿರುವುದು ಅಚ್ಚರಿ ಮೂಡಿಸಿದೆ.
ಶಾಸಕಿ ಶಾರದಾ ಪೂರ‌್ಯಾ ನಾಯ್ಕ್ ಸಿಮ್ಸ್ ಮೆಗ್ಗನ್ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಕಾತಿ ಮಾಡಿಕೊಳ್ಳುವ ವಿಚಾರದಲ್ಲಿ ಓರ್ವನನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಶಿಫಾರಸ್ಸು ಮಾಡಿದ್ದಾರೆ.
ಟೆಂಡರ್ ಹಿಡಿದಿರುವ ಕೆ ಎಸ್ ಎಫ್9 ಕಾರ್ಪೊರೇಟ್ ಸರ್ವಿಸ್ ಅವರೊಂದಿಗೆ ಮಾತನಾಡುವಾಗ ಜಾತಿ ನಿಂದನೆಯಾಗಿದೆ ಎಂದು ಆರೋಪಿಸಿ ಇಂದು ಜೆಡಿಎಸ್ ಪಕ್ಷ ಕೆ.ಬಿ.ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.
ಆದರೆ, ಪ್ರತಿಭಟನೆಗೆ ಸೀಮಿತಗೊಳಿಸಿ ದೂರು ದಾಖಲಿಸದೆ ಇರುವುದು ಅಚ್ಚರಿ ಮೂಡಿಸಿದೆ. ಓರ್ವ ಶಾಸಕಿಗೆ ಜಾತಿ ನಿಂದನೆಯಾದರೂ ಕೇವಲ ಪ್ರತಿಭಟನೆಗೆ ಮುಂದಾಗರುವುದು ರಾಜಕೀಯದ ಕೆಸರೆರಚಾಟವಲ್ಲದೆ ಬೇರೇನು ಇಲ್ಲ ಎಂಬುದು ಮೆಲ್ನೋಟಕೆ ಕಾಣುತ್ತಿದೆ.
ಇಂದು ಜೆಡಿಎಸ್ ಪಕ್ಷ ಮೆಗ್ಗಾನ್ ಹೊರಗುತ್ತಿಗೆ ಹಿಡಿದಿರುವ ಏಜೆನ್ಸಿಯನ್ನ ರದ್ದುಗೊಳಿಸುವಂತೆ ಆಗ್ರಹಿಸಿ ಮುತ್ತಿಗೆಹಾಕಲಾಗಿದೆ. ಆಸ್ಪತ್ರೆಯ ಮುಂಭಾಗದಲ್ಲಿ ಕಾರ್ಯಕರ್ತರು ಧರಣಿ ನಡೆಸಿ ನಂತರ ಮನವಿ ನೀಡಲಾಯಿತು.
The struggle led by MLA Sharada Puryanaik surprised everyone
