SUDDILIVE || SHIVAMOGGA
ಯಾಸಿನ್ ಮತ್ತು ಶಾಹೀದ್ ಖುರೇಶಿ ಫೊಟೊ ಮೊಬೈಲ್ ನಲ್ಲಿದ್ದಿದ್ದಕ್ಕೆ ಯುವಕರಿಗೆ ಜೀವಬೆದರಿಕೆ, ಹಣದ ಬೇಡಿಕೆ-Youths who had Yasin and Shahid Qureshi's photo on their mobiles face death threats, demand for money
ಯಾಸಿನ್ ಖುರೇಶಿ ಮೃತನಾಗಿ ಎರಡು ವರ್ಷ ಕಳೆದರೂ ಆತನ ಅಭಿಮಾನಕ್ಕೆ ಏನೂ ಕೊರತೆ ಕಂಡು ಬಂದಿಲ್ಲ. ಇತ್ತೀಚೆಗೆ ನಡೆದ ಈದ್ ಮೆರವಣಿಗೆಯಲ್ಲೂ ಯಾಸಿನ್ ದಾ ಜಿಂದಾಬಾದ್ ಘೋಷಣೆಗಳು ಮೊಳಗಿವೆ. ಆತನ ಭಾವಚಿತ್ರಗಳ ಪ್ರದರ್ಶನಗಳಾಗಿವೆ.
ಆದರೆ ಆತನ ಪರವಾಗಿ ಎಷ್ಟು ಅಭಿಮಾನಗಳು ಇದೆಯೋ ಅದರಷ್ಟೆ ಎದಯರಾಳಿಗಳು ಇದ್ದಾರೆ. ಆದರೆ ಅಮಾಯಕ ಯುವಕರನ್ನ ಯಾಸಿನ್ ಮತ್ತು ಆತನ ಸಹೋದರ ಶಾಹೀದ್ ಖುರೇಷಿಯ ಭಾವಚಿತ್ರ ಇಟ್ಟುಕೊಂಡಿದ್ದಕ್ಕೆ ಜೀವಬೆದರಿಕೆ ಮತ್ತು ಹಣದ ಬೇಡಿಕೆ ಇಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಫೆಬ್ರವರಿಯಲ್ಲಿ ತಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದು ಅವರ ಪ್ರಕರಣ ಶಿವಮೊಗ್ಗದ ನ್ಯಾಯಾಲಯದಲ್ಲಿ ನಡೆಯುತ್ತಿದ್ದರಿಂದ ಅವರ ಮಗ ಪ್ರಸನ್ನ ಆತನ ಸ್ನೇಹಿತ ಟ್ಯಾಂಕ್ ಮೊಹಲ್ಲಾದ ನಿವಾಸಿ ಗನಿ ಅಹಮದ್ ಖಾನ್ ಜೊತೆ ಬಂದಿದ್ದನು. ಆರ್ ಟಿ ಒ ಆಫೀಸ್ ಬಳಿ ಗನಿ ಸ್ನೇಹಿತ ಪ್ರಸನ್ನ ನ್ಯಾಯಾಲಯದ ಕಲಾಪ ಮುಗಿಸಿಕೊಂಡು ಬರುತ್ತಿದ್ದಾಗ, ಅಂಡ ಯಾನೆ ಶೋಯೇಬ್ ಆತನ ಹೆಗಲ ಮೇಲೆ ಕೈಹಾಕಿಕೊಂಡು ಬಂದಿದ್ದಾನೆ.
ಗನಿ ಮತ್ತು ಪ್ರಸನ್ನರನ್ನ ನಿಲ್ಲಿಸಿಕೊಂಡು ಸುತ್ತಲು ಅಂಡನ ಹುಡುಗರು ನಿಲ್ಲಿಸಿಕೊಂಡಿದ್ದರು. ಈ ವೇಳೆ ಅಪ್ಪು ಯಾನೆ ಸಮೀರ್ ಎಂಬಾತ ಅಂಡನ ಕಡೆಯ ಹುಡುಗರು ಗನಿಗೆ ಹೊಡೆದು ಆತನ ಜೇಬಿನಲ್ಲಿದ್ದ ಮೊಬೈಲ್ ಕಿತ್ತುಕೊಂಡು ಆತನ ಗ್ಯಲರಿಯಲ್ಲಿ ಎರಡು ಮೂರು ವರ್ಷಗಳ ಹಿಂದೆ ಯಾಸಿನ್ ಜೊತೆ ನಿಂತುಕೊಂಡು ತೆಗೆಸಿದ ಫೋಟೊ ಪತ್ತೆಯಾಗಿದೆ. ಫೊಟೊ ನೋಡಿ ಯಾಸಿನ್ ಫಾಲೋವರ್ಸಾ ಎಂದು ಕೇಳಿ ಅವ್ಯಾಚ್ಯಶಬ್ದಗಳಿಂದ ಬೈದಿದ್ದಾನೆ.
ಗನಿ ಮತ್ತು ಪ್ರಸನ್ನರನ್ನ ಇಬ್ವರನ್ನೂ ಬೈಕ್ ಗಳಲ್ಲಿ ಕೂರಿಸಿಕೊಂಡು ಕೆಆರ್ ಪುರಂನಲ್ಲಿರುವ ಉದಯ ಬಜಾರ್ ನ ಕನ್ಸರ್ವೆನ್ಸಿಯಲ್ಲಿರುವ ಹಂಚಿನ ಮನೆಗೆ ಕರೆದುಕೊಂಡು ಹೋಗಿ ಗನಿಯ ಪ್ಯಾಂಟು ಶರ್ಟ್ ಬಿಚ್ಚಿಸಿ ಯಾಸಿನ್ ಖರೇಶಿಯ ಫೋಟೊ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕುದ್ರೆ ನಿಮ್ಮ ಮನೆಗೆ ನುಗ್ಗಿ ಹೊಡೇತಿವಿ ಎಂದು ಅಂಡ ಮತ್ತು ಆತನ ಹುಡುಗರು ಗದರಿಸಿದ್ದಾರೆ.
ನಂತರ ಪ್ರಸನ್ಙಿಗೆ ಒಂದು ವಾರದೊಳಗೆ 50 ಸಾವಿರ ಹಣ ಕೊಡು ಇಲ್ಲದಿದ್ದರೆ ಎಲ್ಲಿ ಸಿಗ್ತಿಯ ಅಲ್ಲೇ ಸಿಗಿದುಬಿಡ್ತೀವಿ ಎಂದು ಬೆದರಿಸಿ ಇನ್ನುಮುಂದೆ ಯಾಸಿನ್ ಅಥವ ಆತನ ಸಹೋದರ ಶಾಹೀದ್ ಖುರೇಶಿ ಫೊಟೊ ಇಟ್ಕೊಂಡು ಓಡಾಡುದ್ರೆ ಜೀವ ತೆಗೆಯುವುದಾಗಿ ಗದರಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಂಡಾ ಯಾನೆ ಶೋಯೇಬ್, ಅಪ್ಪು @ಸಮೀರ್, ನಿಂಬು, ಪಾಂಡಾ, ಆದಿಲ್, ಸಲ್ಮಾನ್ @ಅಡ್ಡು, ಅಣ್ಣಾ, ಸಗೀರ್, ಇಮ್ರಾನ್, ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ.
Yasin and Shahid Qureshi's photo, demand for money
