SUDDILIVE || BHADRAVATHI
ಭದ್ರಾವತಿ ಶಾಸಕರ ವಾಟ್ಸಪ್ ಗ್ರೂಪ್ ನಲ್ಲಿ ಗಮನ ಸೆಳೆಯುತ್ತಿದೆ ಈ 'ಫೋಟೊ'-This 'photo' is attracting attention in the Bhadravati MLA's WhatsApp group
ಭದ್ರಾವತಿಯ ಸಿಂಗನ ಮನೆ ಗ್ರಾಮಪಂಚಾಯತ್ ಎದುರಿನ ಗುಂಡಿಯಲ್ಲಿ ದ್ವಿಚಕ್ರವಾಹನ ಸವಾರರೊಬ್ಬರು ಬಿದ್ದಿರುವ ಫೋಟೋವೊಂದು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣ ಮತ್ತು ಸ್ಟೇಟಸ್ ನಲ್ಲಿ ಈ ರೀತಿ ಫೋಟೊಗಳು ಹರಿದಾಡುತ್ತಿವೆ.
ಸಿಂಗನಮನೆ ಗ್ರಾಮಪಂಚಾಯಿತಿಯ ಎದುರು ರಸ್ತೆಯಲ್ಲಿ ದೊಡ್ಡಗುಂಡಿ ನಿರ್ಮಾಣವಾಗಿದ್ದು, ಆ ಗುಂಡಿಯಲ್ಲಿ ಗ್ರಾಮಪಂಚಾಯಿತಿ ಸದಸ್ಯರೆ ಬಿದ್ದಿದ್ದು, ಈ ಪೋಟೊ ಭದ್ರಾವತಿ ಶಾಸಕರ ವಾಟ್ಸಪ್ ಗ್ರೂಪ್ ನಲ್ಲಿ ಓಡಾಡುತ್ತಿದೆ. ಕೆಲವರು ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ.
ಇದು ಶಾಸಕರ ಗಮನ ಸೆಳೆಯಲು ಮಾಡಿರುವ ಫೊಟೊ ಇರಬಹುದು ಎಂದು ಸಹ ಶಂಕಿಸಲಾಗಿದೆ. ಈಗಾಗಲೇ ಬಿಜೆಪಿ ರಾಜ್ಯದಲ್ಲಿ ಗುಂಡಿ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಬಿಜೆಪಿಯ ಪ್ರತಿಭಟನೆ ರಾಜ್ಯ ಸರ್ಕಾರವನ್ನ ಎಷ್ಟರ ಮಟ್ಟಿಗೆ ಗಮನ ಸೆಳೆದಿದೆ ಗೊತ್ತಿಲ್ಲ. ಆದರೆ ಭದ್ರಾವತಿ ಶಾಸಕರ ಗಮನ ಸೆಳೆಯಲು ವಾಟ್ಸಪ್ ಗ್ರೂಪಿನ ಸದಸ್ಯರೊಬ್ಬರು ಭರ್ಜರಿ ಐಡಿಯ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರೊಬ್ವರುಹೀಗೆ ಬಿದ್ದಿರುವುದನ್ನ ತೋರಿಸಿ ಇದು ನಮ್ಮ ಸುಂದರ ಸಿಂಗನಮನೆ ಗ್ರಾಮಪಂಚಾಯಿತಿ, ಪಂಚಾಯಿತಿ ಕಟ್ಟಡ ಯಾವಾಗ ಹೀಗೆ ಗುಂಡಿಗೆ ಬೀಳುತ್ತೋ ಎಂದು ಬರೆದಿರುವುದು ಸಕ್ಕತ್ ಚರ್ಚೆಗೂ ಕಾರಣವಾಗುತ್ತಿದೆ.
This 'photo' is attracting attention in the Bhadravati MLA's WhatsApp group

