ad

ಜೇನುಕಚ್ಚಿ 13 ಜನ SSCL ಮಕ್ಕಳು ಆಸ್ಪತ್ರೆಗೆ ದಾಖಲು- 13 SSC students admitted to hospital after being stung by bees

 SUDDILIVE || SHIVAMOGGA

ಜೇನುಕಚ್ಚಿ 13 ಜನ SSCL ಮಕ್ಕಳು ಆಸ್ಪತ್ರೆಗೆ ದಾಖಲು- 13 SSCL students admitted to hospital after being stung by bees   

Bees, student


ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಗನಕಟ್ಟೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ ಓದುತ್ತಿದ್ದ ಒಟ್ಟು 13 ಜನ  ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಮತ್ತು ಸಿಬ್ವಂದಿಯೋರ್ವರಿಗೆ ಜೇನುಕಚ್ಚಿ  ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. 

ಜೇನು ಕಡಿತಕ್ಕೆ ಒಳಗಾದ 13 ಜನರಲ್ಲಿ 6 ಜನ ಶಾಲಾ ಮಕ್ಕಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಮಾಹಿತಿಯ ಪ್ರಕಾರ SSLC ಶಾಲ ಮಕ್ಕಳಿಗೆ ಕಳೆದ ವಾರದಿಂದ ಬಗನಕಟ್ಟೆ ಶಾಲೆಯಲ್ಲಿ ವಿಶೇಷ ತರಗತಿಗಳನ್ನ ತೆಗೆದುಕೊಳ್ಳಲಾಗಿತ್ತು. 

ಬೆಳಿಗ್ಗೆ 10-30 ಕ್ಕೆ ಶಾಲೆ ಆರಂಭವಾಗಿದೆ. ತರಗತಿ ತೆಗೆದುಕೊಳ್ಳಬೇಕಿದ್ದ ಶಿಕ್ಷಕರು ಬರುವುದು ತಡವಾಗಿದೆ. ಈ ವೇಳೆ ಶಾಲೆಯಲ್ಲಿ ಕಟ್ಟಿದ ಜೇನು ಮಕ್ಕಳಿಗೆ ಕಚ್ಚಿದೆ ಎಂಬುದು ಪ್ರಾಥಮಿಕ ಮಾಹಿತಿಯಾಗಿದೆ. ಈ ಬಗ್ಗೆ ಸುದ್ದಿಲೈವ್ ಗೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ 12 ಜನ ವಿದ್ಯಾರ್ಥಿ ಮತ್ತು  ಒಬ್ಬರು ಸಿಬ್ಬಂದಿಗೆ ಜೇನುಕಚ್ಚಿದೆ. ಅವರಿಗೆ ಎಲ್ಲಾ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದಿದ್ದಾರೆ.

SSLC ಶಾಲೆ ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಂಡ ವೇಳೆ ಈ ಘಟನೆ ನಡೆದಿದೆ. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳಿಗೆ ಮೊದಲು ಚಿಕಿತ್ಸೆ ಕೊಡಿಸಲಾಗುವುದು‌  ನಂತರ ಈ ಘಟನೆ ಬಗ್ಗೆ ಕೂಲಂಕುಷವಾಗಿ ವಿಷಯ ಸಂಗ್ರಹಿಸಲಾಗುವುದಾಗಿ ಹೇಳಿದ್ದಾರೆ. 

ಶಿಕಾರಿಪುರದ  ಸಾರ್ವಜನಿಕ ಆಸ್ಪತ್ರೆಯಲ್ಲಿ 8 ಜನ ಚಿಕಿತ್ಸೆ ಪಡೆಯುತ್ತಿದ್ದರೆ, 6 ಜನ ಮಕ್ಕಳು ಶಿವಮೊಗ್ಗದ ಮೆಗ್ಗಾನ್ ಗೆ ಬಂದು ದಾಖಲಾಗಿದ್ದಾರೆ. 

13 SSCL students admitted to hospital after being stung by bees

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close