ad

SIT ಶಿವಮೊಗ್ಗ ಜೈಲಿಗೆ ಭೇಟಿ-SIT visits Shimoga jail

SUDDILIVE || SHIVAMOGGA

SIT  ಶಿವಮೊಗ್ಗ ಜೈಲಿಗೆ ಭೇಟಿ-SIT visits Shimoga jail    

SIT, jail

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಶಿವಮೊಗ್ಗದ ಜೈಲಿನಲ್ಲಿರುವ ಹಿನ್ನಲೆಯಲ್ಲಿ ಇಂದು ಎಸ್ಐಟಿ ಶಿವಮೊಗ್ಗದ ಕಾರಾಗೃಹಕ್ಕೆ ಭೇಟಿ ನೀಡಿದೆ. 

ತಾನು ಇನ್ನೂ ಹತ್ತು ಶವಗಳನ್ನು ಹೂತಿಟ್ಟಿರುವುದಾಗಿ ಚಿನ್ನಯ್ಯ ನ್ಯಾಯಾಲಯದ ಮುಂದೆ ಹೇಳಿಕೆ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳದ (SIT) ಅಧಿಕಾರಿಗಳಿಂದ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಎಸ್ಐಟಿ ಅಧಿಕಾರಿಗಳ ತಂಡವು ಇಂದು ಶಿವಮೊಗ್ಗ ಜೈಲಿಗೆ ಬಂದಿರಬಹುದೆಂದು ಊಹಿಸಲಾಗಿದೆ. 

ಸೊಗಾನೆ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ ಎಸ್ಐಟಿ, ಎಸ್ಪಿ ಸೈಮನ್ ಅವರ ನೇತೃತ್ವದಲ್ಲಿರುವ ತಂಡ ಬೆಳ್ತಂಗಡಿ ಕೋರ್ಟ್‌ನಿಂದ ಅನುಮತಿ ಪಡೆದಿದ್ದು ಚಿನ್ನಯ್ಯನನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

SP ಸೈಮನ್ಸ್ ನೇತೃತ್ವದಲ್ಲಿ ಬಂದಿರುವ ಅಧಿಕಾರಿಗಳು ಚಿನ್ನಯ್ಯನ ವಿಚಾರಣೆಗೆ ಬೆಳ್ತಂಗಡಿ ಕೋರ್ಟ್ ಆದೇಶ ಪಡೆದು ವಿಚಾರಣೆಗೆ ಬಂದಿದ್ದಾರೆ.

SIT visits Shimoga jail 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close