ad

ಲಾರಿಗಳ್ಳನ ಬಂಧನ-Arrest of a truck thief

SUDDILIVE || SHIVAMOGGA

ಲಾರಿಗಳ್ಳನ ಬಂಧನ-Arrest of a truck thief

Truck, thief


ಪೆಟ್ರೋಲ್ ಬಂಕ್‌ವೊಂದರ ಮುಂಭಾಗ ನಿಲ್ಲಿಸಿದ್ದ ಲಾರಿಯನ್ನು ಕಳವು ಮಾಡಿದ್ದ ಆರೋಪಿಯನ್ನು ಸೊರಬ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಟ್ಟಣದ ಪೆಟ್ರೋಲ್ ಬಂಕ್‌ವೊಂದರ ಮುಂಭಾಗದಲ್ಲಿ ಇತ್ತೀಚೆಗೆ ಸಾಗರ ಪಟ್ಟಣದ ಗಾಂಧಿನಗರ ನಿವಾಸಿ ಆರೀಫ್ ಆಹ್ಮದ್ ಎಂಬುವರಿಗೆ ಸೇರಿದ ಲಾರಿ ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಬೆನ್ನಟ್ಟಿದ ಪೊಲೀಸರು ಪಟ್ಟಣದ ಕಾನುಕೇರಿ ಬಡಾವಣೆ ನಿವಾಸಿ ಇಬ್ರಾಹಿಂ ಅಹಮ್ಮದ್ (26) ಎಂಬಾತನನ್ನು ಬಂಧಿಸಿ, ಬಂಧಿತ ವ್ಯಕ್ತಿಯಿಂದ ಸುಮಾರು 4.90 ಲಕ್ಷ ರೂ., ಮೌಲ್ಯದ ಲಾರಿಯನ್ನು ವಶಕ್ಕೆ ಪಡೆದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಸ್‍ಪಿ ಜಿ.ಕೆ. ಮಿಥುನ್ ಕುಮಾರ್, ಎಎಸ್‍ಪಿಗಳಾದ ಬಿ. ರಮೇಶ್ ಹಾಗೂ ಕಾರಿಯಪ್ಪ, ಶಿಕಾರಿಪುರ ಡಿವೈಎಸ್‍ಪಿ ಕೆ.ಇ. ಕೇಶವ, ಸಿಪಿಐ ಮಹಾಂತೇಶ ಕೆ. ಲಂಬಿ ಮಾರ್ಗದರ್ಶನದಲ್ಲಿ ಪಿಎಸ್‍ಐ ಎಂ.ಎಚ್. ನವೀನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಾಘವೇಂದ್ರ, ವಿನಯ್, ಲೋಕೇಶ್ ಪಾಲ್ಗೊಂಡಿದ್ದರು.

Arrest of a truck thief

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close