ad

ಸೊರಬದ ಬಂಗಾರಧಾಮದಲ್ಲಿ ಎಸ್.ಬಂಗಾರಪ್ಪನವರ-93ರ ಜನ್ಮದಿನೋತ್ಸವ- S. Bangarappa's 93rd birthday celebration at the Bangaradhama of Soraba

 SUDDILIVE || SHIVAMOGGA

ಸೊರಬದ ಬಂಗಾರಧಾಮದಲ್ಲಿ ಎಸ್.ಬಂಗಾರಪ್ಪನವರ-93ರ ಜನ್ಮದಿನೋತ್ಸವ- S. Bangarappa's 93rd birthday celebration at the Bangaradhama of Soraba    

Bangarappa, birthday

ಎಸ್ ಬಂಗಾರಪ್ಪ ಫೌಂಡೇಷನ್ ಮತ್ತು ಎಸ್ ಬಂಗಾರಪ್ಪ ವಿಚಾರ ವೇದಿಕೆವತಿಯಿಂದ ಅ.26 ರಂದು ಭಾನುವಾರ ಸೊರಬದ ಬಂಗಾರಧಾಮದಲ್ಲಿ ಎಸ್ ಬಂಗಾರಪ್ಪ-93ರ ಜನ್ಮದಿನೋತ್ಸವದಂದು ನಮನ, ಚಿಂತನ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಚಾರವೇದಿಕೆಯ ವೇಣುಗೋಪಾಲ್ ನಾಯಕ್, ಸಾಹಿತ್ಯ ಬಂಗಾರವೆಂದು ಡಾ.ಕಾಳೇಗೌಡ ನಾಗವಾರ, ಧರ್ಮ ಬಂಗಾರ ಪ್ರಶಸ್ತಿಯನ್ನ ನಿವೃತ್ತ ಪೊಲೀಸ್ ಮಾಹನಿರ್ದೇಶಕ ಎಲ್ ರೇವಣಸಿದ್ದಯ್ಯರಿಗೆ, ಜಾನಪದ ಬಂಗಾರ ಪ್ರಶಸ್ತಿಯನ್ನ ರಾಧಾಬಾಯಿ ಮಾದರ್, ಕಲಾ ಬಂಗಾರವನ್ನಜೇವರ್ಗಿ ರಾಜಣ್ಣರಿಗೆ ನೀಡಿ ಸನ್ಮಾನಿಸಲಾಗುವುದು. ಕಾರಗಯಕ್ರಮದ ಉದ್ಘಾಟನೆಯನ್ನ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ, ಮಾಜಿ ಶಾಸಕ ಆರ್ ವಿ ದೇಶಪಾಂಡೆ, 


ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಸಕ ಗೋಪಾಲ ಕೃಷ್ಣ ಬೇಳೂರು, ಆಗಮಿಸಲಿದ್ದು ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಎನ್ ತಿಲಕ್ ಕುಮಾರ್ ಅವರ ಗೌರವ ಉಪಸ್ಥಿತಿಯಿರಲಿದ್ದು, ಡಾ.ಕೆವಿ ನಾಗರಾಜ ಮೂರ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಲುದ್ದಾರೆ ಎಂದರು. 

ಈ ಕಾರ್ಯಕ್ರಮ  ಅ.26 ರಂದು ಸಂಜೆ ನಡೆಯಲಿದೆ. ಬೆಳಿಗ್ಗೆ 10-30 ಕ್ಕೆ ಸೊರಬದ  ಡಾರಾಜ್ ಕುಮಾರ್ ರಂಗಮಂದಿರದಲಗಲಿ ಬಂಗಾರಪ್ಪನವರ ಚಂತನೆಗಳು ಎಂಬ ವಿಚಾರ ಸಂಕಿರಣ ನಡೆದರೆ, ನಂತರ ಮೂಡಬಿದರೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಮ ಜರುಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಡಿ ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.

Bangarappa's 93rd birthday celebration at the Bangaradhana of Soraba

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close