SUDDILIVE || SHIVAMOGGA
ಹೊಸ ದೀಪಾವಳಿ ಆಚರಿಸದ ನವವಿವಾಹಿತೆ-Newlyweds who don't celebrate Diwali
ಮದುವೆಯಾಗಿ 6 ತಿಂಗಳು ಕಳೆಯುವಾಗಲೇ ಗೃಹಿಣಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊಸ ದೀವಾವಳಿ ಆಚರಿಸಬೇಕಿದ್ದ ವಿವಾಹಿತೆ ಗಂಡ ಹಾಗೂ ಅತ್ತೆಯ ಕಿರುಕುಳಕ್ಕೆ ಬಲಿಯಾಗಿದ್ದಾಳೆ.
ಶಿವಮೊಗ್ಗ ತಾಲೂಕಿನ ಸೂಡೂರು ಬಳಿಯ ಕುರಂಬಳ್ಳಿಯ ಗುಜಾನುಮಕ್ಕಿಯಲ್ಲಿ ಈ ಘಟನೆ ನಡೆದಿದೆ. ಮಾಲಾಶ್ರೀ(23) ಮೃತಪಟ್ಟ ಗೃಹಿಣಿಯಾಗಿದ್ದಾಳೆ. ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ಯಡಮನೆಯ ವಾಸಿ ಗಣಪತಿ ಮತ್ತು ಲಕ್ಷ್ಮಮ್ಮ ದಂಪತಿಯ ಪುತ್ರಿ ಮಾಲಾಶ್ರೀಯನ್ನ ಇದೇ ವರ್ಷ ಏಪ್ರಿಲ್ ನಲ್ಲಿ ಕುರಂಬಳ್ಳಿಯ ದೇವೇಂದ್ರಪ್ಪ - ನೀಲಮ್ಮ ದಂಪತಿಯ ಪುತ್ರ ಅಶೋಕ್ ನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ವಿವಾಹವಾಗಿದ್ದ ಮಾಲಾಶ್ರೀ ಮದುವೆ ನಂತರ ಆಶೋಕ್ ಪತ್ನಿ ಮಾಲಾಶ್ರೀ ಗೆ ನಿರಂತರ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ತವರು ಮನೆಯವರೊಂದಿಗೆ ಮಾತನಾಡಲು ಬಿಡದೇ ಗಂಡನ ಮನೆಯವರು ಕಿರುಕುಳ ನೀಡಿರುವ ಆರೋಪ ಮಾಡಲಾಗಿದೆ. ತವರು ಮನೆಗೆ ಬಂದ್ರೂ ಜೊತೆಯಲ್ಲಿ ಬಂದು, ತಕ್ಷಣವೇ ಅಶೋಕ ಪತ್ನಿಯನ್ನ ವಾಪಸ್ ಕರೆದುಕೊಂಡು ಹೋಗುತ್ತಿದ್ದನು ಎಂದು ಆರೋಪಿಸಲಾಗಿದೆ.
ಗಂಡ ಹಾಗೂ ಅತ್ತೆಯ ಕಿರುಕುಳದ ಬಗ್ಗೆ ಸಂಬಂಧಿಕರಿಗೆ ಮಾಲಾಶ್ರೀ ತಿಳಿಸಿದ್ದರು. ಗಂಡ ಹಾಗೂ ಅತ್ತೆಯ ಕಿರುಕುಳಕ್ಕೆ ವಿಷ ಸೇವಿಸಿರುವ ಮಾಲಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಸೇವಿಸಿದ್ದ ಮಾಲಾಶ್ರೀಯನ್ನ ಅ.19 ರಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದ್ದರೂ, ಮಾಲಾಶ್ರೀ ಕುಟುಂಬಸ್ಥರಿಂದ ವಿಷಯ ಮುಚ್ಚಿಡಲಾಗಿತ್ತು.
ಮೃತ ಪತ್ನಿ ಕುಟುಂಬಕ್ಕೆ ವಾಂತಿ- ಬೇಧಿಯಾಗಿದ್ದು, ಆಸ್ಪತ್ರೆಗೆ ಸೇರಿಸಿದ್ದಾಗಿ ಆಶೋಕ್ ಮಾಲಾಶ್ರೀ ತವರಿಗೆ ತಿಳಿಸಿದ್ದನು. 3 ದಿನ ಕುಟುಂಬಸ್ಥರಿಗೆ ಯಾವುದೇ ವಿಷಯ ತಿಳಿಸದೇ ಮುಚ್ಚಿಡಲಾಗಿದೆ ಎಂದು ಮೃತ ಕುಟುಂಬ ದೂರಿದೆ. ಅ.22 ರ ಮಧ್ಯಾಹ್ನ ಮಾಲಾಶ್ರೀ ತಂದೆ ಕರೆ ಮಾಡಿದಾಗ ಐಸಿಯೂ ನಲ್ಲಿ ಇದ್ದಾಳೆ ಎಂದು ಆಶೋಕ್ ತಿಳಿಸಿದ್ದನು. ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ಮಾಲಾಶ್ರೀ ತವರು ಕುಟುಂಬ ದೌಡಾಯಿಸಿದೆ.
ಆಸ್ಪತ್ರೆಗೆ ಬಂದಾಗ ಮಾಲಾಶ್ರೀ ಮೃತಪಟ್ಟಿರುವುದು ತಿಳಿದು, ಪೋಷಕರು ಶಾಕ್ ಆಗಿದ್ದಾರೆ. ಮಾಲಾಶ್ರೀ ಪೋಷಕರು ಬರುತ್ತಿದ್ದಂತೆ, ಆಸ್ಪತ್ರೆಯಿಂದ ಆಶೋಕ್ ಎಸ್ಕೇಪ್ ಆಗಿದ್ದಾನೆ. ಮಗಳ ಸಾವಿಗೆ ಪತಿ ಆಶೋಕ್ ಕಾರಣ ಎಂದು ಮಾಲಾಶ್ರೀ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪತಿ ಆಶೋಕ್, ಅತ್ತೆ ನೀಲಮ್ಮ ವಿರುದ್ಧ ಪ್ರಕರಣ ದಾಖಲು. ಪತಿ ಆಶೋಕ್ ರನ್ನ ಕುಂಸಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Newlyweds who don't celebrate Diwali
