SUDDILIVE || SHIVAMOGGA
ಯೋಜನೆ ಮಾಡೋದು ಹಣಹೊಡೆಯಲು ಎಂಬುದಾದರೆ ಸಂಸದರ ಯೋಜನೆಗಳೆಲ್ಲಾ ದುಡ್ಡುಹೊಡೆಯೋಕೆ ಮಾಡಿದ್ದಾ? ಬೇಳೂರು ವ್ಯಂಗ್ಯ-If planning is about making money, why are all the MPs' plans made for making money? Belur sarcasm
ಯೋಜನೆ ತರೋದು ದುಡ್ಡು ಹೊಡೊಯೋಕೆ ಎಂಬಂತೆ ಬಿಜೆಪಿ ಬಿಂಬಿಸುತ್ತಿದೆ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಪ್ಡ್ ಸ್ಟೋರೇಜ್ ಹಿಂದಿನ ಸರ್ಕಾರದ ಅವಧಿಯಲ್ಲು ಆಗಿದ್ದು. ಇದರ ಬಗ್ಗೆ ಬಿಜೆಪಿ ತಪ್ಪು ಸಂದೇಶ ಕೊಡ್ತಿದ್ದಾರೆ. ಹಣ ಹೊಡೆದಿದ್ದಾರೆ ಎನ್ನುವ ರೀತಿಯಲ್ಲಿ ಕೂಗಾಟ ಮಾಡಿದ್ದಾರೆ. ಅಂದ್ರೆ ಯಾವುದಾದರೂ ಯೋಜನೆ ತಂದಿರೋದು ಹಣ ಹೊಡೆಯುವುದಕ್ಕೆ ಅಂತನಾ? ಈ ಹಿಂದೆ ತಂದಿರುವುದು ಅದಕ್ಕಿಗಾನಾ? ಸಿಗಂದೂರು ಸೇತುವೆ ಯೋಜನೆ ದುಡ್ಡು ಹೊಡೆಯೋದಿಕ್ಕೆನಾ? ಇದು ದೇಶದ ಅತೀ ದೊಡ್ಡ ಯೋಜನೆ. ಇದಕ್ಕೆ ಅನುಮತಿ ಕೊಟ್ಡಿದ್ದು ಕೇಂದ್ರ ಸರ್ಕಾರ, ನಿಲ್ಲಿಸುವುದಾದರೆ ಕೇಂದ್ರ ಸರ್ಕಾರ ನಿಲ್ಲಿಸಲಿ. ನಮ್ಮದೇನು ಅಭ್ಯಂತರವಿಲ್ಲ.
ಮುಂದಿನಭವಿಷ್ಯಕ್ಕೆ ಈ ಯೋಜನೆ ಅನುಕೂಲ ಆಗಲಿದೆ. ಈಗಿರುವ ೧೦೦೦ ಸಾವಿರ ಮಗಾವ್ಯಾಟ್ ಗೆ ಈ ಯೋಜನೆ ಲಾಭ ತರಲಿದೆ. ಫಾರೆಸ್ಟ್ ಹೋಗುತ್ತೆ ಎಂದು ಪರಿಸರವಾದಿಗಳ ವಾದವಾಗಿದೆ. ಯಾವ ಯೋಜನೆ ಮಢಿದ್ರೂ ಹೋಗುತ್ತೆ. ಹೆದ್ದಾರಿ ಮಾಡಿದ್ರೆ ಫಾರೆಸ್ಟ್ ಹೋಗಲ್ಬಾ? ಸುಮ್ನೆ ಕೆಟ್ಡ ಹೆಸರು ತರೋದು ಬೇಡ. ಸಂಸದ ರಾಘವೇಂದ್ರ ಅವರು ಹೇಳಬೇಕು. ಹಿಂದೆ ತಂದ ಯೋಜನೆಗಳನ್ನು ದುಡ್ಡು ಹೊಡಯೋದಿಕ್ಕೆ ತಂದಿದ್ದಾ? ಈಗ ಹೋರಾಡುತ್ತಿರುವ ಬಂಗಾರಮಕ್ಕಿ ವೀರಾಂಜನೇಯ ಸ್ವಾಮೀಜಿಗಳಲ್ಲಿ ವಿನಂತಿಮಾಡುತ್ತೇನೆ. ದಯಮಾಡಿ ಈ ಯೋಜನೆ ವಿರುದ್ಧ ಹೋರಾಡಬೇಡಿ ಎಂಬುದು ನಮ್ಮ ಪ್ರಾರ್ಥನೆ ಎಂದರು.
ಮಳೆ ಪರಿಹಾರ ಆದಷ್ಟು ಬೇಗ ಕೊಡ್ಬೇಕು. ಎಲೆಚುಕ್ಕೆ ಕೊಳೆರೋಗ ರೈತರಿಗೆ ತಕ್ಷಣ ಬಿಡಬೇಕು, ಯತೀಂದ್ರ ನನ್ನನ್ನ ಮಂತ್ರಿ ಮಾಡಿ ಅಂದ್ರೆ ಮಾಡ್ತಾರಾ ಎಂದು ಹೇಳುವ ಮೂಲಕ ಯತೀಂದ್ರ ಉತ್ತರಾಧಿಕಾರಿ ಹೇಳಿಕೆಗೆ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬೇಳೂರು, ಕೇಂದ್ರದ ವರಿಷ್ಟರ ಯಾರ ಪರ್ವಾಗಿಲ್ಲ, ಸಿದ್ದರಾಮಯ್ಯ ಸಾಹೇಬ್ರು ಅವರ ಮಗ ಹೇಳಿದ್ದನ್ನ ಅವರೇನು ತೀರ್ಮಾನ ಮಾಡ್ತಾರೆ ಗೊತ್ತಿಲ್ಲ. ಆದರೆ ವರಿಷ್ಟರ ತಿರ್ಮಾನ ಅಂತಿಮ ಎಂದರು.
ಅ. 26 ಕ್ಕೆ ನಾಡಿನ ಬಡವರ ಬಂಧುಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 93 ನೇ ಹುಟ್ಡು ಹಬ್ಬವನ್ನು ಆಚರಿಸುತ್ತಿದ್ದಾರೆ. ಸಚಿವರಾದ ಮಧುಬಂಗಾರಪ್ಪ, ಸಂತೋಷ್‌ಲಾಡ್, ಕೆ. ಎಚ್ ಮುನಿಯಪ್ಲ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಕಾರ್ಯಕ್ರಮ ಯಶಸ್ಸಾಗಿಸಲು ಸಾರ್ವಜನಿಕರು ಬರಬೇಕು ಎಂದು ಆಹ್ವಾನಿಸಿದರು.
Belur sarcasm
