ad

ರಸ್ತೆ ಅಪಘಾತದಲ್ಲಿ ಮಗು ಸಾವು, ವಿದ್ಯುತ್ ಸ್ಪರ್ಷದಿಂದ ವ್ಯಕ್ತಿ ಸಾವು-Child dies in road accident, man dies of electric shock

SUDDILIVE || SHIVAMOGGA

ರಸ್ತೆ ಅಪಘಾತದಲ್ಲಿ ಮಗು ಸಾವು, ವಿದ್ಯುತ್ ಸ್ಪರ್ಷದಿಂದ ವ್ಯಕ್ತಿ ಸಾವು-Child dies in road accident, man dies of electric shock 

Accident, electricshock

ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.  ಆಟವಾಡುತ್ತಿದ್ದ  ವೇಳೆ ಕಾರು ಡಿಕ್ಕಿ ಹೊಡೆದು ಎರಡು ವರ್ಷದ ಮಗು ಸಾವಾದರೆ, ಮತ್ತೊಂದು ಪ್ರಕರಣದಲ್ಲಿ ವಿದ್ಯುತ್ ಸ್ಪರ್ಷದಿಂದ ವ್ಯಕ್ತಿಯೊಬ್ಬ ಸಾವುಕಂಡಿದ್ದಾರೆ.  

ನಗರದ ಹೊರವಲಯದ ವಿರುಪಿನಕೊಪ್ಪದಲ್ಲಿ ರಸ್ತೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತ ಮಗುವನ್ನು ವಿನಯ್ (2) ಎಂದು ಗುರುತಿಸಲಾಗಿದೆ. ಮಗು ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ಕೋಟೆಗಂಗೂರು ಕಡೆಯಿಂದ ಸಾಗರ ರಸ್ತೆಯತ್ತ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ಕಾರು ಡಿಕ್ಕಿಯಾದ ರಭಸಕ್ಕೆ ವಿನಯ್‌ನ ತಲೆ, ಕೈ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಮಗುವನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ.ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ಕೈದು ದಿನಗಳ ಹಿಂದೆ ಈ ಘಟನೆ ನಡೆದಿದೆ. 

ವಿದ್ಯುತ್ ಸ್ಪರ್ಷದಿಂದ ವ್ಯಕ್ತಿ ಸಾವು.

ಭದ್ರಾವತಿ ತಾಲೂಕಿನ ಭಂಡಾರಹಳ್ಳಿಯಲ್ಲಿ ಟಿಕೆ ಗೌಡರ ಗದ್ದಯನ್ನ ಗುತ್ತಿಗೆ ಪಡೆದಿದ್ದ ದೊಡಬಣಘಟ್ಟದಲ್ಲಿ ಅಕ್ಬರ್ ಸಾಹೇಬರು ಎಂಬ 55 ವರ್ಷದ ವ್ಯಕ್ತಿಗೆ ವಿದ್ಯುತ್ ಸ್ಪರ್ಷದಿಂದ ವ್ಯಕ್ತಿ ಸಾವು ಕಂಡಿದ್ದಾರೆ. 16 ವರ್ಷದಿಂದ ಅಕ್ಬರ್ ಸಾಹೇಬರು ಟಿಕೆ ಗೌಡರ ಬಳಿ ಕೆಲಸ ಮಾಡುತ್ತಿದ್ದು ನಿನ್ನೆ ಸಾವುಕಂಡಿದ್ದಾರೆ. 

Child dies in road accident, man dies of electric shock

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close