ad

ಕನ್ನೇರಿ ಮಠದ ಶ್ರೀಗಳಿಗೆ ಹಾಕಿರುವ ನಿರ್ಬಂಧ ವಾಪಾಸ್ ಪಡೆಯಿರಿ-ಈಶ್ವರಪ್ಪ ಆಗ್ರಹ-Eshwarappa demands that the restrictions imposed on the Kanneri Mutt monks be lifted

 SUDDILIVE || SHIVAMOGGA

ಕನ್ನೇರಿ ಮಠದ ಶ್ರೀಗಳಿಗೆ ಹಾಕಿರುವ ನಿರ್ಬಂಧ ವಾಪಾಸ್ ಪಡೆಯಿರಿ-ಈಶ್ವರಪ್ಪ ಆಗ್ರಹ-Eshwarappa demands that the restrictions imposed on the Kanneri Mutt monks be lifted.

Eshwarappa, demands

ಕಾಂಗ್ರೆಸ್ ಹಿಂದೂ ಸಮಾಜವನ್ನ ಒಡೆಯುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿದೆ ಲಿಂಗಾಯಿತ ವೀರಶೈವ ಸಮಸಜ ಜಾತಿಜನಗಣತಿಯಲ್ಲಿ ಛಿದ್ರವಾಗಿ ಹೋಯಿತು ಎಂದು ಮಾಜಿಡಿಸಿಎಂ ಈಶ್ವರಪ್ಪ ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೀರಶೈವ ಸಮಾಜ ಮತ್ತು ಮುಸ್ಲೀಂ ಸಮಾಜ ಒಂದೇ ಎನ್ನುವಂತ ಹೇಳಿಕೆ ಬಂತು,  ವೀರಶೈವರು ದಾರು ಕುಡಿಯಿರಿ ಮತ್ತು ಮಾಂಸ ತಿನ್ನಿ ಎಂದು ಕೆಲವರು ಹೇಳಿದರೂ ರಾಜ್ಯ ಸರ್ಕಾರ ನಿರ್ಬಂಧಿಸದೆ ಕನ್ನೇರಿ ಮಠದ ಶ್ರೀಗಳಿಗೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ನಿರಗಬಂಧಿಸಲಾಗಿದೆ. ಇದು ವೀರಶೈ ಲಿಂಗಾಯಿತ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ ಎಂದು ದೂರಿದರು. 

ಸಚಿವ ಎಂಬಿ ಪಾಟೀಲರು ಶ್ರೀಗಳನ್ನ ಕ್ಷಮಿಸುವಂತೆ ಕೇಳಬೇಕಿತ್ತು. ಕನ್ನೇರಿ ಮಠದ ಶ್ರೀಗಳ ವಿರುದ್ಧ ನಡೆಯುತ್ತಿರುವ ವಿದ್ಯಮಾನಗಳು 

 ಸರಿಯಲ್ಲ. ಈ ಹಿನ್ನಲೆಯಲ್ಲಿ ಅ.29 ರಂದು ವೀರಶೈವ ಲಿಂಗಾಯತ ನಾಯಕರ ಸಭೆ ಬೆಳಗಾವಿಯಲ್ಲಿ ನಡೆಯಲಿದೆ. ಸರ್ಕಾರ ಕನ್ನೇರಿ ಶ್ರೀಗಳ ವಿರುದ್ಧ ಹೇರಿರುವ ನಿರ್ಬಂಧವನ್ನ ಸರ್ಕಾರ ವಾಪಾಸ್ ಪಡೆಯಬೇಕು ಎಂಬ ಒತ್ತಾಯಿಸಿ ಸಮಾಲೋಚನಾ ಸಭೆ ನಡೆಯಲಿದೆ. ನಾನು ಭಾಗಿಯಾಗುವೆ. ನಿರ್ಬಂಧ ಹೇರದಿದ್ದರೆ ಇಲ್ಲಿ ಮುಂದಿನ ಹೋರಾಟದ ರೂಪುರೇಷಗಳನ್ನ ರೂಪಿಸಲಾಗುವುದು ಎಂದರು. 

ವೈಯುಕ್ತಿಕ ನಿಂದನೆ ಸರಿಯಲ್ಲ

ಪ್ರತಾಪ್ ಸಿಂಹ ಮತ್ತು ಪ್ರದೀಪ್ ಈಶ್ವರ್ ನಡುವೆ ವೈಯುಕ್ತ ಟೀಕೆಗೆ ಹೋಗುತ್ತಿದ್ದಾರೆ ಸಿದ್ದಾಂತಗಳಲ್ಲಿ ಅವರ ಹೋರಾಟ ಇರಲಿ. ವೈಯುಕ್ತಿಕವಾಗಿ ಇಳಿಯೋದು ಬೇಡ ಎಂದು ಕಿವಿ ಮಾತನಾಡಿದರು.

ಸರ್ಕಾರ ಪಾಪರ್ ಆಗಿದೆ

ರಾಜ್ಯದ ರಾಜಕಾರಣವನ್ನ ಕಾಂಗ್ರೆಸ್ ಕೆಳಮಟ್ಟದ ರಾಜಕಾರಣಕ್ಕೆ ತೆಗೆದುಕೊಂಡು ಹೋಗಲಾಗಿದೆ. ಡಿಜೆಶಿ ಶಿಸ್ತು ಬಿಟ್ಟುಹೋಗಲ್ಲ ಎನ್ನುತ್ತಾರೆ. ಆದರೆ ಸಿಎಂ ಮತ್ತು ಸಿಎಂ‌ಮಗನೇ ನಾನು ಐದು ವರ್ಷದ ಸಿಎಂ ಎನ್ನುತ್ತಾರೆ. ಇವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. 

ಸರ್ಕಾರ ಪಾಪರ್ ಎದ್ದು ಹೋಗಿದೆ ಶಾಸಕರಿಗೆ ಅಭಿವೃಧಧಿಗೆ ಹಣಬರುತ್ತಿಲ್ಲ. ಗುಂಡಿಗಳು ಮುಚ್ಚುತ್ತಿಲ್ಲ. ನಾನು ಬಾಗಲಕೋಟೆಗೆ ಹೋದಾಗ ಅಲ್ಲಿ ಐಬಿಯ ವಿದ್ಯುತ್ ಸಂಪರ್ಕವಿಲ್ಲದಂತಾಗಿದೆ. ಒಂದು ರಸ್ತೆ ಆಗಿಲ್ಲ. ಅಧಿಕಾರದ ಆಟಾಟೋಪ ಎಲ್ಲಿವರದಗೆ ಹೋಗುತ್ತದೆ ಗೊತ್ತಿಲ್ಲ. ರಾಜ್ಯದ ಜನಕ್ಕೆ ಸಿಎಂಬದಲಾವಣೆ ವ್ಯತ್ಯಾಸವಾಗೊಲ್ಲ. ಅಭಿವೃದ್ಧಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿದರು.

ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗುತ್ತದೆ

ಸಿಎಂ ಕುರ್ಚಿಗೆ ಜಗಳ ಮುಂದುವರೆದರೆ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಅಡ್ರೆಸ್ ಇಲ್ಲದಂತಾಗುತ್ತದೆ ಎಂದು ಭವಿಷ್ಯ ನುಡಿದರು. 

Eshwarappa demands that the restrictions imposed on the Kanneri Mutt monks be lifted

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close