SUDDILIVE || SHIVAMOGGA
ಕಾಂಗ್ರೆಸ್ ಪಕ್ಷವನ್ನೇ ದೇಶದಲ್ಲಿ ಮೊದಲು ಬ್ಯಾನ್ ಮಾಡಬೇಕು-ಶಾಸಕ ಚೆನ್ನಿ-Congress party should be banned first in the country - MLA Chenni
ಬಿಜೆಪಿ ರಾಷ್ಟ್ರೀಯತೆ ಆಧಾರದ ಪಕ್ಷವಾಗಿದ್ದು, ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತು ಅನೇಕ ಪಕ್ಷಗಳಿಂದ ಯುವಕರು ಬಿಜೆಪಿಗೆ ಸೇರುತ್ತಿದ್ದಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನೇ ದೇಶದಲ್ಲಿ ಮೊದಲು ಬ್ಯಾನ್ ಮಾಡಬೇಕು. ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಕಾಂಗ್ರೆಸ್ಸನ್ನು ವಿಸರ್ಜಿಸುವಂತೆ ಕರೆ ನೀಡಿದ್ದರು. ಆದರೆ ಕಾಂಗ್ರೆಸ್ ತನ್ನ ಒಡೆದು ಆಳುವ ನೀತಿ ಮತ್ತು ಭ್ರಷ್ಟಾಚಾರವನ್ನು ಮುಂದುವರಿಸಿಕೊAಡು ಬಂದಿದ್ದು, ಕಾಂಗ್ರೆಸ್ ನೀತಿಯ ವಿರುದ್ಧ ಜನ ಎದ್ದು ನಿಂತ್ತಿದ್ದಾರೆ. ಇವತ್ತು ಆರ್.ಎಸ್.ಎಸ್.ನ್ನು ನಿಷೇಧ ಮಾಡುವುದಲ್ಲ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸನ್ನೇ ನಿಷೇಧ ಮಾಡಬೇಕಾಗಿದೆ ಎಂದರು.
ಸಂವಿಧಾನ ಬಾಹಿರ ಅನೇಕ ಚಟುವಟಿಕೆಗಳಿಗೆ ಹಿಂದಿನಿಂದಲೂ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಾ ಬಂದಿದೆ. ಎಸ್‌ಡಿಪಿಐ, ಮುಸ್ಲಿಂಲೀಗ್‌ನಂತಹ ಸಂಘಟನೆಗಳಿಗೆ ಶಕ್ತಿತುಂಬುತ್ತಾ ಬಂದಿದೆ. ಪಾಕಿಸ್ತಾನ್ ಜಿಂದಾಬಾದ್ ಹೇಳುವವರಿಗೆ ಕುಮ್ಮಕ್ಕು ನೀಡುತ್ತಾ ಬಂದಿದ್ದು, ಇದನ್ನು ಸಹಿಸದೇ ಅನೇಕ ದೇಶಭಕ್ತರು ಬಿಜೆಪಿಗೆ ಬರುತ್ತಿದ್ದಾರೆ ಎಂದರು.
ಜಾತಿ ಜಾತಿಯನ್ನು ಒಡೆದು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಅಭಿವೃದ್ಧಿಯನ್ನು ಮಾಡದೇ ಹೀನ ರಾಜಕಾರಣ ಮಾಡುತ್ತಿದೆ ಎಂದರು.
ಚಾಮರಾಜನಗರದಲ್ಲಿ ನೀರುಗಂಟಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಿಳಾ ಉದ್ಯೋಗಿಯೊಬ್ಬರು ಮೂರು ತಿಂಗಳಿನಿAದ ವೇತನಬರದೆ ಆತ್ಮಹತ್ಯೆಗೆ ಮುಂದಾಗಿದ್ದರು. ವೇತನ ನೀಡಲು ಆಗದ ಈ ಸರ್ಕಾರ ಕೊಲೆಗಡುಕ ಸರ್ಕಾರವಾಗಿದೆ ಎಂದರು.
ನಗರದ ಅನೇಕ ಯುವಕರು ಬಿಜೆಪಿ ಸೇರುತ್ತಿದ್ದಾರೆ. ಎಲ್‌ಬಿಎಸ್ ನಗರ, ನವುಲೆ, ಚಿಕ್ಕಲ್, ಬೊಮ್ಮನಕಟ್ಟೆ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೇರುತ್ತಿದ್ದು, ದೇಶ ಕಟ್ಟುವ ಕಾರ್ಯದಲ್ಲಿ ಮುಂದಿನ ದಿನಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ನಗರಾಧ್ಯಕ್ಷ ಮೋಹನ್‌ರೆಡ್ಡಿ ಮಾತನಾಡಿ, ಪ್ರಧಾನಿ ಮೋದಿಯವರ ನೂರಾರು ಕಾರ್ಯಕ್ರಮಗಳನ್ನು ನೋಡಿ, ಬಿಜೆಪಿಗೆ ಸೇರುತ್ತಿದ್ದಾರೆ. ಈ ಪ್ರಪಂಚದಲ್ಲೇ ಭಾರತವನ್ನು ೧೩ನೇ ಸ್ಥಾನದಿಂದ ೩ನೇ ಸ್ಥಾನಕ್ಕೆ ಕೊಂಡೊಯ್ಯುತ್ತಿರುವ ಮೋದಿಯವರಿಗೆ ಯುವಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಬಿಜೆಪಿಗೆ ೭೭ ಸಾವಿರ ಸದಸ್ಯರಿದ್ದು, ೭೨೦ ಕ್ರೀಯಾಶೀಲ ಸಕ್ರೀಯ ಸದಸ್ಯರಿದ್ದು, ಬಿಜೆಪಿಗೆ ಭದ್ರಬುನಾದಿ ಇದೆ. ರಕ್ತದಾನ, ಆರೋಗ್ಯಶಿಬಿರ, ಪರಿಸರ ಕಾರ್ಯಕ್ರಮಗಳು ಮುಂತಾದ ಅನೇಕ ಸಾಮಾಜಿಕ ಚಟುವಟಿಕೆಗಳ ಮೂಲಕ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ನಗರದ ವಿವಿಧೆಡೆಯಿಂದ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್. ಜ್ಞಾನೇಶ್ವರ್, ಎನ್.ಕೆ. ನಾಗರಾಜ್, ಮಂಜುನಾಥ್ ನವುಲೆ, ರಂಗೇಶ್, ಪರಮೇಶ್ ನಾಯ್ಕ, ಶಿವಕುಮಾರ್, ಶ್ರೀನಾಥ್, ಪನ್ನೀರ್ ಸೆಲ್ವಂ ಮೊದಲಾದವರಿದ್ದರು.
Congress party should be banned first in the country - MLA Chenni