SUDDILIVE || SHIVAMOGGA
ಸೇವಾ ಮನೋಭಾವದಿಂದ ಜೀವನ ಸಾರ್ಥಕಗೊಳ್ಳುತ್ತದೆ-ಸಂಸದ ರಾಘವೇಂದ್ರ-Life becomes meaningful with a spirit of service - MP Raghavendra
ಸೇವೆಯ ಸಂಕಲ್ಪ ಬಹುದೊಡ್ಡದು. ಸೇವಾ ಮನೋಭಾವದಿಂದ ಜೀವನ ಸಾರ್ಥಕಗೊಳ್ಳುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸಮೂಹ ಶಾಲೆಗಳ ಗೌರವ ಅಧ್ಯಕ್ಷ, ಅನೂಪ್ ಎನ್. ಪಟೇಲ್ ಅವರನ್ನು ಅಭಿನಂದಿಸಿ, ವಿವೇಕಾನಂದ ಫೌಂಡೇಷನ್ನಿಗೆ ಚಾಲನೆ ನೀಡಿ ಮಾತನಾಡಿದರು.
ಸಾಮಾನ್ಯವಾಗಿ ಜನರು ತಮ್ಮ ತಂದೆಯ ಆಸ್ತಿಯನ್ನು ಭಾಗವಾಗಿ ಕೇಳುತ್ತಾರೆ. ಆದರೆ ಅನೂಪ್ ಎನ್. ಪಟೇಲ್ ಅವರು ತಮ್ಮ ತಂದೆಯ ದಾನವನ್ನು ಭಾಗವಾಗಿ ತೆಗೆದುಕೊಂಡಿದ್ದಾರೆ. ಹಾಗಾಗಿಯೇ ಬಡವರ ಸೇವೆ ಅವರಿಗೆ ಪ್ರಮುಖವಾಗಿದೆ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೇ ನೀಡುವ ಬಹುದೊಡ್ಡ ಸಂಕಲ್ಪ ಹೊಂದಿದ್ದಾರೆ. ಅವರ ಈ ಸಂಸ್ಥೆ ಮತ್ತಷ್ಟು ಹೆಮ್ಮೆರವಾಗಿ ಬೆಳೆಯಲಿ ಶಿಕ್ಷಣದ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲಿ ಎಂದರು.
ಕೇAದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ) ಜಾರಿಮಾಡಿದ್ದರೂ ಕೂಡ ರಾಜ್ಯ ಸರ್ಕಾರ ಇನ್ನೂ ಇದನ್ನು ಪಾಲನೆ ಮಾಡುತ್ತಿಲ್ಲ. ಯಾವುದೇ ಸರ್ಕಾರಗಳು ಬರಲಿ, ಶಿಕ್ಷಣದ ಪಾಲಿಸಿಗಳನ್ನು ತಮಗೆ ತಕ್ಕಂತ್ತೆ ಬದಲಾವಣೆ ಮಾಡುವುದು ಸರಿಯಲ್ಲ, ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದ ಅವರು, ಸಂಸದರಾಗಿ ಸುಮಾರು ೨೦ಸಾವಿರ ಕೋಟಿ ರೂ. ಅಭಿವೃದ್ಧಿ ಕಾರ್ಯಗಳನ್ನು ನನ್ನ ಕ್ಷೇತ್ರದಲ್ಲಿ ಮಾಡಿದ್ದೇನೆ. ಕೊಲ್ಲೂರು, ಕೊಡಚಾದ್ರಿಗೆ ಕೇಬಲ್‌ಕಾರ್ ಕೂಡ ಬರಲಿದೆ. ರಸ್ತೆ, ರೈಲ್ವೆ ಎಲ್ಲವೂ ಅಭಿವೃದ್ಧಿಯಾಗಲಿದೆ ಎಂದರು.
ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್ ದಿನಪತ್ರಿಕೆಗಳ ಪ್ರತಿಷ್ಠಿತ ಎಕ್ಸ್ಲೆನ್ಸ್ ಹಾಗೂ ಹಾನರ್ ಪ್ರಶಸ್ತಿಯನ್ನು ತಮ್ಮ ಸಂಸ್ಥೆಯ ಸಿಬ್ಬಂದಿಗಳ ವತಿಯಿಂದ ಸ್ವೀಕರಿಸಿ, ಮಾತನಾಡಿದ ಅನೂಪ್ ಎನ್. ಪಟೇಲ್, ೧೯೯೮ರಲ್ಲಿ ನಮ್ಮ ತಂದೆ ಈ ಸಂಸ್ಥೆಯನ್ನು ಚಿಕ್ಕದಾಗಿ ಆರಂಭ ಮಾಡಿದರು. ೨೦೦೫ರಲ್ಲಿ ನಾನು ಈ ಸಂಸ್ಥೆಯ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬರುತ್ತಿದ್ದೇನೆ. ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು ಎಂಬುದೇ ನಮ್ಮ ಅಭಿಲಾಷೆ. ಈ ನಿಟ್ಟಿನಲ್ಲಿ ಬಡವಿದ್ಯಾರ್ಥಿಗಳಿಗೂ ಅನುಕೂಲವಾಗಲಿ ಮತ್ತು ಶಿಕ್ಷಣವು ಎಲ್ಲಾ ವರ್ಗದವರಿಗೂ ತಲುಪಲಿ. ಮಾನವನ ಸೇವೆಯೇ ಮಾಧವ ಸೇವೆ ಎಂಬ ಹಿನ್ನಲೆಯಲ್ಲಿ ವಿವೇಕಾನಂದ ಟ್ರಸ್ಟನ್ನು ಆರಂಭಿಸಿರುವೆ. ಸೇವೆಯಿಂದ ಸಾರ್ಥಕ ಪಡೆಯುವುದು ನಮ್ಮ ಜೀವನದ ಮುಖ್ಯ ಗುರಿಯಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ|| ಧನಂಜಯ ಸರ್ಜಿ, ಶಾಸಕ, ಕೆ.ಬಿ. ಪ್ರಸನ್ನಕುಮಾರ್, ಪತ್ರಿಕಾ ಸಂಪಾದಕರಾದ ಎಸ್. ಚಂದ್ರಕಾAತ್, ಎನ್. ಮಂಜುನಾಥ್, ಕೆ.ವಿ. ಶಿವಕುಮಾರ್, ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಕಾಂಗ್ರೆಸ್ ಮುಖಂಡ ಚಂದನ್, ಸ್ವಾಮಿ ವಿವೇಕಾನಂದ ಸಮೂಹ ಶಾಲೆಗಳ ಉಪಾಧ್ಯಕ್ಷೆ ರಾಗಿನಿಸಿಂಗ್, ಬಿಜೆಪಿ ಪ್ರಮುಖ ಮಾಲತೇಶ್ ಸೇರಿದಂತೆ ಹಲವರಿದ್ದರು. ಇದೇ ಸಂದರ್ಭದಲ್ಲಿ ಅನೂಪ್ ಎನ್. ಪಟೇಲ್ ದಂಪತಿಗಳನ್ನು ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಸನ್ಮಾನಿಸಿದರು.
ಸಿಂಧು ಸ್ವಾಗತಿಸಿದರು, ನಿವೇದಿತಾ ಪರಿಚಯಿಸಿದರು. ಚೈತ್ರಾ ನಿರಂತರ ನಿರೂಪಿಸಿದರು.
Life becomes meaningful with a spirit of service - MP Raghavendra