ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆಗೆ ದಿನಾಂಕ ಫಿಕ್ಸ್- Date fixed for Shivamogga Kote Marikamba Fair

 SUDDILIVE || SHIVAMOGGA

ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆಗೆ ದಿನಾಂಕ ಫಿಕ್ಸ್-Date fixed for Shivamogga Kote Marikamba Fair

Marikamba, shimoga


ಎರಡು ವರ್ಷಕ್ಕೊಮ್ಮೆ ನಡೆಯುವ ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಿಯ ಜಾತ್ರ ಮಹೋತ್ಸವದ ದಿನಾಂಕ ಫಿಕ್ಸ್ ಮಾಡಲಾಗಿದೆ. 

ನಗರದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಜಾತ್ರೆಯ ದಿನಾಂಕ ನಿಗದಿಯಾಗಿದ್ದು, ಐದು ದಿನಗಳ ಜಾತ್ರೆಗೆ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ತಿಳಿಸಿದೆ.

2026ರ ಫೆಬ್ರವರಿ 24 ರಿಂದ 28ರವರೆಗೆ ಜಾತ್ರೆ ನಡೆಯಲಿದೆ. ಈ ಸಂಬಂಧ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಮಾ.12 ರಿಂದ ಐದುದಿನ ಜಾತ್ರೆ ನಡೆದಿತ್ತು. ಈ ಬಾರಿ 18 ದಿನಗಳ ಮುಂಚಿತವಾಗಿ ಜಾತ್ರ ಮಹೋತ್ಸವ ಆಗಮಿಸಲಿದೆ. 

Shimoga, kotemarikamba

ಜಾತ್ರೆ ಅಂಗವಾಗಿ ಕಳೆದ ಬಾರಿ ಗಾಂಧಿ ಬಜಾರ್ ದ್ವಾರ ಬಾಗಿಲಿನಲ್ಲಿ 45 ಅಡಿ ಎತ್ತರದ ಚಾಮುಂಡೇಶ್ವರಿ ಮೂರ್ತಿ ನಿರ್ಮಾಣ ಮಾಡಲಾಗಿತ್ತು. ಇದು ಚಲಿಸುವ ರೀತಿ ಕಾಣುವಂತಿದ್ದು, ಜನರನ್ನು ಆಕರ್ಷಿಸುವಂತಿತ್ತು. 2026 ಕ್ಕೆ ಏನಾಗಲಿದೆ ಎಂಬ ಕುತೂಹಲ ಆರಂಭವಾಗಿದೆ. ಐದು ದಿನಗಳು ಫ್ಲೆಕ್ಸ್, ಕಟೌಟ್ ಗಳು ವಿಜೃಂಭಸಲಿದೆ. 

Date fixed for Shivamogga Kote Marikamba Fair

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close