SUDDILIVE || SHIVAMOGGA
ವೋಟ್ ಚೋರಿ ಪ್ರತಿಭಟನೆ ಬಗ್ಗೆ ವಿವರಣೆ ನೀಡಿದ ಧರ್ಮಸೇನ-Dharmasena explains vote theft protest
KPCC ಅಧ್ಯಕ್ಷರ ಆದೇಶದ ನೇರೆ ಎಲ್ಲಾ ಜಿಲ್ಲೆಗಳನ್ನ ಭೇಟಿ ಮಾಡಲಾಗುತ್ತಿದೆ. ಎಸ್ ಸಿ ಎಸ್ಟಿ ಘಟಕಗಳಿಂದ ಸಾರ್ವಜನಿಕರ ಮಾಹಿತಿ ಪಡೆದು ಸರ್ಕಾರಕ್ಕೆ ಕೊಡಲಾಗುತ್ತಿದೆ ಎಂದು ಎಸ್ ಸಿ, ಎಸ್ಟಿ ಸೆಲ್ ರಾಜ್ಯಾಧ್ಯಕ್ಷ ಧರ್ಮಸೇನ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ ಸ್ಟಿ ಮತ್ತು ಎಸ್ ಸಿ ಘಟಕಗಳನ್ನ ಸಕ್ರೀಯಗೊಳಿಸಲಾಗುತ್ತಿದೆ. ವೋಟ್ ಚೋರಿ ಕುರಿತು ಎಸ್ ಸಿ ಎಸ್ಟಿ ಘಟಕದಿಂದ ಮಾಡಲಾಗುತ್ತಿದೆ. ಗೂಗಲ್ ಫಾರ್ಮೆಟ್ ನಲ್ಲಿ ಪದಾಧಿಕಾರಿಗಳನ್ನ ಕಾಂಗ್ರೆಸ್ ಎಸ್.ಸಿ ಮತ್ತು ಎಸ್ಟಿ ವಿಭಾಗಕ್ಕೆ ನೇಮಕಗೊಳಿಸಲಾಗುತ್ತಿದೆ ಎಂದರು
ವೋಟ್ ಚೋರಿ ದೇಶದ ಗಮನ ಸೆಳೆಯುತ್ತಿದೆ. 2014 ರಿಂದ ಕಾಂಗ್ರೆಸ್ ಸೋತ ನಂತರ ಎಐಸಿಸಿ ನಿರ್ದೇಶನ ಬಂದಿತ್ತು.ಇವಿಎಂಬಗ್ಗೆ ಚರ್ಚಿಸುವುದು ಬೇಡ ಎಂದಿದ್ದರು. ಅದರಂತೆ ಸುಮ್ಮನಿದ್ದವು. ನಂತರದ ದಿನಗಳಲ್ಲಿ ಕಾಂಗ್ರೆಸ್ ಗೆ ವಿಪಕ್ಷ ನಾಗಲು ಅವಕಾಶ ಸಿಗಲಿಲ್ಲ. ನಾವು ಆಕ್ಷೇಪಿಸಿದಾಗ ಚುನಾವಣೆ ಆಯೋಗ ಬಿಎಲ್ ಎ 2 ನೇಮಕ ಮಾಡಲು ಸೂಚಿಸಿತ್ತು. 5000 ಬಿಎಲ್ ಎ 2 ಗಳನ್ನ ನಾನು ಸಹ ನಮ್ಮ ಕ್ಷೇತ್ರದಲ್ಲಿ ನೇಮಕ ಮಾಡಿದ್ದೀವಿ.
6-7 ಪಾರಂ ಮತ ಬದಲಾವಣೆಗೆ ಅವಕಾಶವಿದೆ. ಇವತ್ತು ರಾಹುಲ್ ಗಾಂಧಿ ಮತಚೋರಿ ವಿಚಾರದಲ್ಲಿ ಚುನಾವಣೆ ಆಡಳಿತ ಪಕ್ಷದ ರೀತಿ ಉತ್ತರಿಸಿದರು. ಬಿಎಲ್ ಒಗಳ ಮೂಲಕ ನೇಮಿಸಿಕೊಂಡು ಕೈಬಿಟ್ಟ ಉದಾಹರಣೆಕೊಡಿ ಎಂದರೆ ಅಧಿಕಾರಿಗಳ ಬಳಿ ಉತ್ತರವಿರಲಿಲ್ಲ. ಇದರ ಬಗ್ಗೆ ಕಾಂಗ್ರೆಸ್ ಸಹಿ ಸಂಗ್ರಹಿಸಿದೆ. ಕಾಂಗ್ರೆಸ್ ಬಲವೇ ದಲಿತರು ಮತ್ತು ಒಬಿಸಿಗಳು ಅವರ ಮತಗಳು ವೋಟ್ ಚೋರಿ ಆದರೆ ಕಷ್ಟ ಎಂದು ಹೋರಾಟ ನಡೆಸಲಾಗುತ್ತಿದ್ದೇವೆ ಎಂದರು.
ಸಿಜೆಇ ಗವಾಯಿ ಅವರ ಮೇಲೆ ಶೂ ಎಸೆತ ವಿಚಾರದಲ್ಲಿ ಮಾತನಾಡಿದ ಧರ್ಮಸೇನ ಪ್ರಧಾನಿಮೋದಿ ಈ ಬಗ್ಗೆ ಗಮನ ಹರಿಸಬೇಕು. ಸನಾತನ ಧರ್ಮ ವಿಚಾರದಲ್ಲಿ ದ್ರಾವಿಡನ್ ಗಳು ಆಧಾರ. ಸಂವಿಧಾನ ಬದಲಾವಣೆ ಎನ್ನುವ ನೀವು ಮೂಲನಿವಾಸಿಗಳ ಮೇಲೆ ಗದಾಪ್ರಹಾರ ನಡೆಸಬೇಡಿ. ಮೋದಿಯವರು ದಲಿತರ ರಕ್ಷಣೆಗೆ ನಿಲ್ಲಬೇಕು ಎಂದರು.
Dharmasena explains vote theft protest