ad

KSRTC ಬಸ್ ನಿಲ್ದಾಣದಲ್ಲಿ ಮಹಿಳೆಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹಣಕಿತ್ತುಕೊಂಡ ಗೌರಮ್ಮ-Gouramma assaulted a woman with a stick at a KSRTC bus stand and took her money

 SUDDILIVE || SHIVAMOGGA

KSRTC ಬಸ್ ನಿಲ್ದಾಣದಲ್ಲಿ ಮಹಿಳೆಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹಣಕಿತ್ತುಕೊಂಡ ಗೌರಮ್ಮ-Gouramma assaulted a woman with a stick at a KSRTC bus stand and took her money

KSRTC, busstand



ಅದೇನು KSRTC ಬಸ್ ನಿಲ್ದಾಣನೋ ಅಥವಾ ಧರ್ಮದ ಛತ್ರನೋ ಎಂಂತಾಗಿದೆ. ಚಿನ್ನಾಭರಣದ ಕಳವು ಪ್ರಕರಣಗಳ ಜೊತೆ ಮಹಿಳಾ ಪ್ರಯಾಣಿಕರನ್ನ ಹೊಡೆದು ಹಣ ವಸೂಲಿ ಮಾಡಿರುವ ಘಟನೆ ವರದಿಯಾಗಿದೆ. ಈ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಮರಡಿ ನಿವಾಸಿ ರೇಣುಕಮ್ಮ ಎಂಬ ಮಹಿಳೆ ಕಳೆದ ಮೂರು ತಿಂಗಳ ಹಿಂದೆ ಶಿವಮೊಗ್ಗದ ಹಣಗೆರೆಕಟ್ಟೆಯಲ್ಲಿರುವ ಸಂಪಿಗೆ ಹಳ್ಳಿ ಗ್ರಾಮದ ಗದ್ದೆ ಶಿವಪ್ಪನವರ ತೋಟದಲ್ಲಿ ಪತಿಯಜೊತೆ ಕೂಲುಗೆ ಬಂದು ನೆಲೆಸಿದ್ದರು. ಇತ್ತೀಚೆಗೆ ನ್ಯಾಮತಿ ತಾಲೂಕಿನ ಬೆಳಗುತ್ತಿ ದುರ್ಗಮ್ಮನ ಪೂಜೆ ಮುಗಿಸಿಕೊಂಡು ವಾಪಾಸ್ ಶಿವಮೊಗ್ಗಕ್ಕೆ ಹಬ್ಬದ ಪ್ರಯುಕ್ತ ಬಟ್ಟೆ ಖರೀದಿಗೆ ಬಂದಿದ್ದರು. 

ರಾತ್ರಿ ತಡವಾಗಿದ್ದರಿಂದ ಹಣಗೆರೆಕಟ್ಟೆ ಬಸ್ ನಿಲ್ದಾಣಕ್ಕೆ ಬಂದು ಮಲಗಿದ್ದರು. ಮಹಿಳಾ ವಿಶ್ರಾಂತಿಗೃಹದ ಹೊರಭಾಗದಲ್ಲಿ ಕುಳಿತಿದ್ದರು. ರಾತ್ರಿ ಸುಮಾರು 11-45 ಕ್ಕೆಅಪರಿಚಿತ ಮಹಿಳೆಯೊಬ್ಬಳು ಲಾಠಿಯಂತಿರುವ ದೊಣ್ಣೆಹಿಡಿದುಕೊಂಡು ಬಂದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾಳೆ. 

ಏಕಾಏಕಿ ಹೊಡೆಯುತ್ತಿರುವುದರಿಂದ ಎಚ್ಚರಗೊಂಡ ಮಹಿಳೆ ಯಾಕೆ ಹೊಡೆಯುತ್ತಿದ್ದೀರ ಎಂದು ಕೇಳಿದ್ದಕ್ಕೆ ಪರ್ಸ್ ಗೆ ಕೈಹಾಕಿ ಸಾವಿರ ರೂ. ಹಣ ಕಿತ್ತುಕೊಂಡಿದ್ದಾಳೆ. ಯಾರು ನೀವು ಎಂದು ಕೇಳಿದ್ದಕ್ಕೆ ಮತ್ತೆ ದೊಣ್ಣೆಯಿಂದ ಹೊಡೆಯಲು ಮುಂದಾಗಿದ್ದು ನಂತರ ಅಲ್ಲೇ ಇದ್ದ ಪ್ರಯಾಣಿಕರು ಜಗಳ ಬಿಡಿಸಿದ್ದಾರೆ. ಇದರಿಂದ ಗಾಯಗೊಂಡ ರೇಣುಕಮ್ಮ ಪತಿಯೊಂದಿಗೆ ಮೆಗ್ಗಾನ್ ಗೆ ದಾಖಲಾಗಿದ್ದಾರೆ. 

ಘಟಣೆ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳ ಪ್ರಯಾಣಿಕರು ಈ ಘಟನೆಯಿಂದ ಎಚ್ಚೆತ್ತುಕೊಳ್ಳಬೇಕಿದೆ. ದೊಣ್ಷೆಹಿಡಿದು ಹಲ್ಲೆ ನಡೆಸಿದ ಮಹಿಳೆಯನ್ನ ಗೌರಮ್ಮ ಎಂದು ತಿಳಿದು ಬಂದಿದೆ. ಈ ಮಹಿಳೆಯ ವಿರುದ್ಧ ದೂರು ದಾಖಲಾದರೂ ಒಂದು ಕಡೆ ಮಹಿಳೆಯರು ಬಸ್ ನಿಲ್ದಾಣಕ್ಕೆ ಬಂದು ಚಿನ್ನಾಭರಣ ಕಳವಾಗುತ್ತಿದೆ. ಮತ್ತೊಂದೆಡೆ ಈ ರೀತಿಯ ದುರ್ವರ್ತನೆ ಸುಲಿಗೆಯಿಂದ ಸುರಕ್ಷಿತವಾಗಬೇಕಿದೆ. KSRTC ಮಹಿಳೆಯರ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕಿದೆ. 

Gouramma assaulted a woman with a stick at a KSRTC bus stand and took her money

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close