ad

ಶಿಕಾರಿಪುರದಲ್ಲಿ ಯಶಸ್ವಿ ಬಂದ್ ಹಿನ್ನಲೆಯಲ್ಲಿ ಟೋಲ್ ಹಣ ನೀಡಲು ವಾಹನ ಸವಾರರಿಂದ ಮುಂದುವರೆದ ತಕರಾರು-Dispute continues between motorist and toll employes

 SUDDILIVE || SHIKARIPURA

ಶಿಕಾರಿಪುರದಲ್ಲಿ ಯಶಸ್ವಿ ಬಂದ್ ಹಿನ್ನಲೆಯಲ್ಲಿ ಟೋಲ್ ಹಣ ನೀಡಲು ವಾಹನ ಸವಾರರಿಂದ ಮುಂದುವರೆದ ತಕರಾರು-Dispute continues between motorist and toll employes

Toll, disputes


ಕುಟ್ರಳ್ಳಿ ಟೋಲ್ ವಿರುದ್ಧ ಶಿಕಾರಿಪುರ ಪಟ್ಟಣದಲ್ಲಿ ಯಶಸ್ವಿ ಬಂದ್ ನಡೆದ ಬೆನ್ನಲ್ಲೇ ಸ್ಥಳೀಯ ವಾಹನ ಸವಾರರು ಟೋಲ್ ಸಿಬ್ಬಂದಿಯೊಂದಿಗೆ ಟೋಲ್ ಕಟ್ಟೊಲ್ಲ ಎಂದು ಜಗಳಕ್ಕಿಳಿಯುತ್ತಿರುವ ಬಗ್ಗೆ ವರದಿಯಾಗುತ್ತಿದೆ. 

ಇದರಿಂದ ಟೋಲ್ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಸಚಿವರ ಮೌನ ಮುಂದುವರೆದಿದೆ. ಬಂದ್,  ಹೋರಾಟದ ಬಗ್ಗೆ ತಲೆಕೆಡೆಸಿಕೊಳ್ಳದಿರುವುದರಿಂದ ಸಿಬ್ಬಂದಿಗಳು ಮತ್ತು ವಾಹನ ಸವಾರರ ಜಟಾಪಟಿ ಮುಂದುವರೆದಿದೆ. ಟೋಲ್ ಗೆ ಹಣ ನೀಡುವುದಿಲ್ಲವೆಂದು ವಾಹನ ಸವಾರರು ಟೋಲ್ ಸಿಬ್ಬಂದಿಯೊಂದಿಗೆ ಗಲಾಟೆ ನಡೆಸುತ್ತಿರುವುದು ಕಳೆದ ಎರಡು ದಿನಗಳಿಂದ ಕಂಡುಬರುತ್ತದೆ ಎಂದು ಸುದ್ದಿವಾಹಿನಿಯೊಂದು ದೃಶ್ಯ ಸಮೇತ ಸುದ್ದಿಮಾಡಿದೆ.  ಶುಕ್ರವಾರ ನೂರಕ್ಕೂ ಹೆಚ್ಚು ವಾಹನಗಳು ಟೋಲ್ ಸಂಗ್ರಹ ಕೇಂದ್ರ ಎದುರು ಜಮಾವನೆಗೊಂಡಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ ಎಂದು ಸುದ್ದಿಮಾಡಲಾಗಿದೆ. 

ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು ಸಹ ಮರುದಿನ ಶನಿವಾರವೂ ಸಹ ಕೆಲವಾಹನ ಚಾಲಕರು ಟೋಲ್ ಸಿಬ್ವಂದಿಗಳೊಂದಿಗೆ ತಕರಾರು ತೆಗೆದಿರುವ ಬಗ್ಗೆ ವರದಿಯಾಗಿದೆ. ಆಗಲು ಸಹ ಸ್ಥಳಕ್ಕೆ ಭಾವಿಸಿದ ಪೊಲೀಸರು ಗಲಾಟೆ ಬಿಡಿಸಿದ್ದಾರೆ ಎಂದು ಸ್ಥಳೀಯ ಸುದ್ದಿವಾಹಿನಿ ಒಂದು ವರದಿ ಮಾಡಿದೆ.

ಟೋಲ್ ತೆರವು ಮಾಡುವಂತೆ ಒತ್ತಾಯಿಸಿ ಇತ್ತೀಚೆಗೆ ಶಿಕಾರಿಪುರ ಬಂದ್ ಮಾಡಲಾಗಿತ್ತು ಆದರೂ ಟೋಲ್ ಸಂಗ್ರಹ ಮುಂದುವರಿದಿದೆ ತಾಲೂಕಿನ ಜನರ ಅಭಿಪ್ರಾಯಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ವಾಹನಸವಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.  ಟೋಲ್ ಸಂಗ್ರಹ ನಿಲ್ಲಿಸುವುದಕ್ಕೆ ಸರ್ಕಾರ ಯಾವುದೇ ಅಧಿಕೃತ ಆದೇಶ ಸರ್ಕಾರದಿಂದ ಬಂದಿಲ್ಲ ಹೀಗಾಗಿ ಶುಲ್ಕ ಸಂಗ್ರಹ ಮುಂದುವರಿದಿದೆ ಎಂದು ಟೋಲ್ ಸಿಬ್ಬಂದಿ ದಿನವೂ ಜನರ ಮನವೊಲಿಸುವ ಪ್ರಯತ್ನ ದಲ್ಲಿರುವುದು ಕಂಡು ಬರುತ್ತಿದೆ. 

Dispute continues between motorist and toll employes

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close