ad

ಹೋಟೆಲ್ ಬಂದ್ ಆಗಿದೆ, ಊಟ ಇಲ್ಲ ಎಂದಿದ್ದಕ್ಕೆ ಮಚ್ಚು ಬೀಸಿದ ಮೋಹನ- Mohana got angry when he was told that the hotel was closed and there was no food

 SUDDILIVE || BHADRAVATHI

ಹೋಟೆಲ್ ಬಂದ್ ಆಗಿದೆ ಊಟ ಇಲ್ಲ ಎಂದಿದ್ದಕ್ಕೆ ಮಚ್ಚು ಬೀಸಿದ ಮೋಹನ-Mohana got angry when he was told that the hotel was closed and there was no food.

Mohana, angry


ಹೋಟೆಲ್ ಮಾಲೀಕರಿಗೆ ಮಚ್ಚು ಬೀಸಿದವನಿಗೆ ಠಾಣೆಗೆ ಬಾ ಎಂದ ಪೊಲೀಸರ ಮೇಲೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಚ್ಚಿ ಬೀಸಿದವನನ್ನ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ರಾಮಾವರಂ ಹೋಟೆಲ್ ಗೆ ರಾತ್ರಿ 9 ಗಂಟೆಗೆ ಊಟ ಕೇಳಿಕೊಂಡು ಹೋಗಿದ್ದ ಕೇಶವಾಪುರದ ಮೋಹನ್ ಎಂಬಾತನಿಗೆ ಹೋಟೆಲ್ ಮಾಲೀಕ ಹೋಟೆಲ್ ಕ್ಲೋಸ್ ಆಗಿದೆ ಊಟ ಇಲ್ಲವೆಂದ ಕಾರಣಕ್ಕೆ ಮಚ್ಚಿನಿಂದ ಹೊಡೆಯಲು ಹೋಗಿದ್ದನು. ಮಾಲೀಕ ಮಚ್ಚಿನೇಟಿನಿಂದ ತಪ್ಪಿಸಿಕೊಂಡ ಪರಿಣಾಮ ಮೋಹನ ತನ್ನ ಕೆಂಪು ಕಾರಿನಲ್ಲಿ ಮುಂದೆ ಸಾಗಿದ್ದನು. 

ಇದನ್ನ ಕಂಡ ಹಳೇನಗರ ಪೊಲೀಸರು ಸಹ ಆತನ ಬೆನ್ನು ಹತ್ತಿದ್ದರು. ಹಾಲಪ್ಪ ಸರ್ಕಲ್ ನಿಂದ ಬಿಹೆಚ್ ರಸ್ತೆಗೆ ಬಂದು ಕಾರು ನಿಲ್ಲಿಸಿಕೊಂಡಿದ್ದನ್ನ ಖಚಿತ ಪಡಿಸಿಕೊಂಡ ಪೊಲೀಸರು ಆತನ ಬಳಿಹೋಗಿ ಠಾಣೆಗೆ ಬಾ ಎಂದು ಕರೆದಿದ್ದಾರೆ. ನಾನ್ಯೇಕೆ ಠಾಣೆಗೆ ಬರಲಿ ಎಂದು ಪೊಲೀಸರ ಮೇಲೆ ಮುಗಿಬಿದ್ದ ಮೋಹನ ಪೊಲೀಸರ ಬಟ್ಟೆ ಹರಿದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. 

ಅಲ್ಲದೆ ಚಂದ್ರನಾಯ್ಕ ಎಂಬುವರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡುವ ಉದ್ದೇಶದಿಂದ ಕಾರನ್ನ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಗಾಯಗೊಂಡ ಚಂದ್ರನಾಯ್ಕ್ ರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಆರೋಪಿ ಕೇಶವಾಪುರದ ಮೋಹನ್ ಯಾನೆ ಚೆಕ್ ಮೋಹನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

Mohana got angry when he was told that the hotel was closed and there was no food.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close