ad

ಸಚಿವರ ಆದೇಶದ ಬೆನ್ನಲ್ಲೇ ಅರಣ್ಯ ಇಲಾಖೆಯವರಿಂದ ಗುಡ್ಡಕ್ಕೆ ಭೇಟಿ-Forest Department officials visit hillock following minister's order

 SUDDILIVE || THIRTHAHALLI

ಸಚಿವರ ಆದೇಶದ ಬೆನ್ನಲ್ಲೇ ಅರಣ್ಯ ಇಲಾಖೆಯವರಿಂದ ಗುಡ್ಡಕ್ಕೆ ಭೇಟಿ-Forest Department officials visit hillock following minister's order

Forest, visit




ಬಿದರಗೋಡಿನ ಪ್ರಕೃತಿ ಮಡಲಿನಲ್ಲಿ ಕಲ್ಲುಕ್ವಾರೆಗೆ ಅವಕಾಶಕ್ಕಾಗಿ ಕಾದು ಕುಳಿತಿದ್ದವರಿಗೆ ಶಾಕ್ ಆಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಕನಸಿಗೆಲ್ಲೆ ತಣ್ಣೀರೆರಚಿದ್ದಾರೆ.‌ ಇದರ ಬೆನ್ನಲ್ಲೆ ಅರಣ್ಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿದೆ. 

ತೀರ್ಥಹಳ್ಳಿ ಬಿದರಗೋಡು ಸರ್ವೇ ನಂ 73ರಲ್ಲಿ ಸ್ಟೋನ್ ಕ್ರಷರ್ ( ಕಪ್ಪು ಕಲ್ಲು ಕ್ವಾರಿ ) ಆರಂಭಿಸಲು ಸಿದ್ದತೆ ನಡೆದಿತ್ತು. ಇಲ್ಲಿ ಒಟ್ಟು 239 ಎಕರೆ ಜಮೀನಿದ್ದು, ಇದರಲ್ಲಿ 100 ಎಕರೆ ಪರಿಭಾವಿತ ಅರಣ್ಯವಿದೆ. ಇದನ್ನು ಗುರುತಿಸದೇ ಈ ಭೂಮಿಯಲ್ಲಿ 17 ಎಕರೆಯನ್ನು ಕ್ರಷರ್ ಗೆ ನೀಡಲು ಕಂದಾಯ & ಅರಣ್ಯ ಇಲಾಖೆ ಅಧಿಕಾರಿಗಳೇ ಆಸಕ್ತಿ ವಹಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರೆಲ್ಲಾ ಸೇರಿ ಅರಣ್ಯ ಸಚಿವರಿಗೆ ಪತ್ರಬರೆದಿದ್ದಾರೆ.  ಕಳೆದ ಹತ್ತು ವರ್ಷದಿಂದ ಅವಿರತ ಹೋರಾಟ ಮಾಡುತ್ತಾ ಬಂದಿದ್ದ ಬಿದರಗೋಡಿನ ಜನರೆಲ್ಲ ನಿಧಾನವಾಗಿ ನಿಟ್ಟುಸಿರು ಬಿಡುವ ಸಮಯಬಂದಿದೆ. 

ಬಿದರಗೋಡು ಗುಡ್ಡದಲ್ಲಿ ಅರಣ್ಯ ನಾಶ ಪ್ರಕರಣಗಳಿವೆ. ಸಮೀಪವೇ ಸೋಮೇಶ್ವರ ವೈಲ್ಡ್ ಲೈಫ್ ಪರಿಮಿತಿ ಇದೆ. ಆಗುಂಬೆ ನಿತ್ಯಹರಿದ್ವರ್ಣ ಕಾಡಿದೆ. ಪ್ರಾಣಿಗಳ ಓಡಾಟವಿದೆ. ಸುತ್ತಲ ಹಳ್ಳಿಯ ನೀರಿನ ಟ್ಯಾಂಕ್ ಎಂದೇ ಕರೆಯಲಾಗುತ್ತೆ. ದಶಕದ ಹಿಂದೆಯೇ ನಿಂತಿದ್ದ ಕ್ವಾರಿ ಪುನಾರಂಭಕ್ಕೆ ಇಲ್ಲಿದ್ದ ಅಮೂಲ್ಯ ಮರಗಳನ್ನು ಬಿಟೇ ಹಲಸು ಹಾಗೂ ಅನೇಕ ಔಷಧೀ ಸಸ್ಯೆಗಳನ್ನು ಲೂಟಿ ಮಾಡಿ, ಅರಣ್ಯ ಸ್ವರೂಪವನ್ನೇ ಬದಲಿಸಲಾಗಿದೆ.ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಕಾರ್ಯ ಮಾಡದೆ ಕಂದಾಯ ಇಲಾಖೆ ಯವರು ಲಾಬಿ ನಡೆಯುತ್ತಿದೆ ಹಾಗೂ ಪಕ್ಷಾತೀತ ಲಾಭಿ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರು.

ಈಗ ಅರಣ್ಯ ಸಚಿವರಾದ ಖಂಡ್ರೆ ಆದೇಶ ಬೆನ್ನಲ್ಲೇ ತೀರ್ಥಹಳ್ಳಿ ಬಿದರಗೋಡು ಗುಡ್ಡಕ್ಕೆ ತಪಾಸಣೆಗೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿದೆ. ವರದಿ ಏನು ಮಾಡಲಿದ್ದಾರೆ ಕಾದು ನೋಡಬೇಕಿದೆ. 

Forest Department officials visit hillock following minister's order

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close